Advertisement

ಆರು ವರ್ಷದ ಬಾಲಕಿಯನ್ನು ಬದುಕಿಸಿದ ಭಾರತದ ಶ್ವಾನ!

08:21 AM Feb 14, 2023 | Team Udayavani |

ಇಸ್ತಾಂಬುಲ್‌: ಭೂಕಂಪದಿಂದ ತತ್ತರಿಸಿರುವ ಟರ್ಕಿಯ ಜನರ ಪಾಲಿಗೆ ಭಾರತದ ಸೇನೆ, ವೈದ್ಯರು ಮಾತ್ರವಲ್ಲದೇ ಭಾರತದ ಶ್ವಾನಗಳು ಕೂಡ ಆಪತಾºಂಧವರಂತಾಗಿವೆ. ಅವಶೇಷ ಗಳ ಅಡಿ ಸಿಲುಕಿದ್ದ 6 ವರ್ಷದ ಬಾಲಕಿಯನ್ನು ಸೇನಾ ಶ್ವಾನಗಳು ಪತ್ತೆಹಚ್ಚುವ ಮೂಲಕ ಆಕೆಯನ್ನು ರಕ್ಷಿಸಲು ಸಹಾಯ ಮಾಡಿವೆ.

Advertisement

ಅವಶೇಷಗಳಡಿ ಜನರನ್ನು ಪತ್ತೆಹಚ್ಚಲು ಮಶಿನ್‌ಗಳು ತಲುಪಲಾಗದ ಜಾಗದಲ್ಲೂ ಭಾರತದ ಶ್ವಾನದಳ ತಲುಪಿ, ಜನರನ್ನು ರಕ್ಷಿಸಲು ಸಹಾಯ ಮಾಡುತ್ತಿವೆ. ರೋಮಿಯೋ ಹಾಗೂ ಜ್ಯೂಲಿ ಎನ್ನುವ ಶ್ವಾನಗಳು ನುರ್ದಗಿ ಎಂಬಲ್ಲಿ ಅವಶೇಷಗಳಡಿ ಬಾಲಕಿಯೊಬ್ಬಳನ್ನು ಪತ್ತೆಹಚ್ಚಿ, ಬೊಗಳುವ ಮೂಲಕ ಸಿಬಂದಿಗೆ ಸೂಚನೆ ನೀಡಿವೆ. 170 ಗಂಟೆಗಳ ಬಳಿಕ ಬಾಲಕಿಯನ್ನು ಜೀವಂ ತವಾಗಿ ರಕ್ಷಿಸಲಾಗಿದೆ. ಇನ್ನು ಟರ್ಕಿಯಲ್ಲಿ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ 34 ಸಾವಿರದ ಗಡಿ ದಾಟಿದೆ.

ಇದೇ ವೇಳೆ ಭೂಕಂಪದಲ್ಲಿ ಮೃತಪಟ್ಟ ಉತ್ತರಾಖಂಡ ಮೂಲದ ಬೆಂಗಳೂರಿನ ಟೆಕ್ಕಿ, ವಿಜಯ್‌ ಕುಮಾರ್‌ ಅವರ ಮೃತದೇಹವನ್ನು ಸೋಮವಾರ ಹುಟ್ಟೂರಿ ತಂದು ಸ್ವಗ್ರಾಮ ಕೋಟ್‌ದ್ವಾರದಲ್ಲಿ ಅಂತ್ಯಕ್ರಿಯೆ ನೆರವೇ ರಿಸಲಾಗಿದೆ. ಟರ್ಕಿ ಬೆನ್ನಲ್ಲೇ ಭಾರತದ ಅಸ್ಸಾಂ ರಾಜ್ಯದಲ್ಲಿ ಸೋಮವಾರ ಭೂಕಂಪ ಸಂಭವಿಸಿದೆ. 3.2ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next