Advertisement

New Delhi: ಶ್ವಾನ ಗಲಾಟೆ- ಮಹಿಳೆಗೆ ನಿವೃತ್ತ IAS ಅಧಿಕಾರಿಗ ಥಳಿತ

10:15 PM Oct 31, 2023 | Team Udayavani |

ನವದೆಹಲಿ: ಸಾಕು ಶ್ವಾನದ ದೆಸೆಯಿಂದಾಗಿ ಅದರ ಮಾಲೀಕರು ನೆರೆಹೊರೆಯವರೊಂದಿಗೆ ಜಗಳವಾಡುವ ಅನೇಕ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಇದೀಗ ಅಂಥದ್ದೇ ಪ್ರಕರಣವೊಂದರಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಆರ್‌.ಪಿ.ಗುಪ್ತಾ ಹಾಗೂ ಶ್ವಾನದ ಮಾಲೀಕ ಮಹಿಳೆಯೊಬ್ಬರು ಕೈ-ಕೈ ಮಿಲಾಯಿಸಿರುವುದು ವರದಿಯಾಗಿದೆ.

Advertisement

ನೋಯ್ಡಾದ ಸೆಕ್ಟರ್‌ 108ರ ಪಾರ್ಕ್‌ಲಾರೈಟ್‌ ಸೊಸೈಟಿಯ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದ್ದು, ಈ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಯೂ ವೈರಲ್‌ ಆಗಿದೆ. ಲಿಫ್ಟ್ನಲ್ಲಿ ಸಾಕು ಶ್ವಾನವೊಂದನ್ನು ಕರೆತಂದಿದ್ದ ಮಹಿಳೆಗೆ ಲಿಫ್ಟ್ನಿಂದ ಹೊರ ನಡೆವಂತೆ ಗುಪ್ತಾ ಕೇಳಿದ್ದಾರೆ. ಈ ಸಂಬಂಧ ಇಬ್ಬರಿಗೂ ಮಾತಿನ ಚಕಮಕಿ ಏರ್ಪಟ್ಟಿದ್ದು ಕೊನೆಗೆ ಗುಪ್ತಾ ಅವರನ್ನು ಅಡ್ಡಿಗಟ್ಟಿ ಮಹಿಳೆ ನಿಂದಿಸಿದ್ದಾರೆ. ಇದರಿಂದ ಕೋಪಗೊಂಡ ಗುಪ್ತಾ ಮಹಿಳೆಯನ್ನು ಥಳಿಸಿದ್ದು, ಇಬ್ಬರೂ ಹೊಡೆದಾಡಿಕೊಂಡಿರುವುದು ಕಂಡುಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.