Advertisement

Dog Attack: ಶಂಕಿತ ರೇಬಿಸ್‌ಗೆ ಹೊಸನಗರದ ಮಹಿಳೆ ಮೃತ್ಯು

08:02 PM Aug 24, 2024 | Esha Prasanna |

ಹೊಸನಗರ:  ಶಂಕಿತ ರೇಬಿಸ್ ಗೆ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಶಿವಪ್ಪನಾಯಕ ರಸ್ತೆ ನಿವಾಸಿ ಸಂಗೀತಾ (38)  ಸೋಂಕಿಗೆ ಒಳಪಟ್ಟು ಶುಕ್ರವಾರ ಮೃತಪಟ್ಟಿದ್ದಾರೆ. ಮೃತರಿಗೆ  ಪುತ್ರ, ಪುತ್ರಿ ಇದ್ದಾರೆ.

Advertisement

ಸಂಗೀತಾ ಅವರಿಗೆ  ಜುಲೈ 14ರಂದು ನಾಯಿಯೊಂದು ಕಚ್ಚಿತ್ತು. ನಾಯಿ ಕಚ್ಚಿದ ಆ ಸಮಯದಲ್ಲಿ ತಕ್ಷಣವೇ ಸೂಕ್ತ ಚುಚ್ಚುಮದ್ದು ತೆಗೆದುಕೊಳ್ಳದ ಪರಿಣಾಮ ಸೋಂಕು ಉಲ್ಬಣಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆಗಸ್ಟ್ 20ರಂದು ಆರೋಗ್ಯದಲ್ಲಿ ಏರುಪೇರು ಉಂಟಾದ್ದರಿಂದ ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಅಷ್ಟರಲ್ಲೇ ರೇಬಿಸ್ ಸೋಂಕು ಉಲ್ಬಣಗೊಂಡ ಕಾರಣ ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದ್ದರಿಂದ  ಸಂಗೀತಾ ಶುಕ್ರವಾರ ಶಿವಮೊಗ್ಗದಲ್ಲಿ ನಿಧನ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next