Advertisement

ಮನೆಗೆ ಕುಬೇರನು ಸಂಪತ್ತು ಕೊಡುವಂತೆ ಮಾಡುತ್ತಾನೆಯೇ…?

03:52 PM Dec 18, 2017 | |

ಮನುಷ್ಯನ ಗ್ರಹಚಾರ ಯಾವುದೇ ವಿಧಾನದಲ್ಲೂ ತೊಂದರೆಯಾಗಿ ಹರಳುಗಟ್ಟಬಹುದು. ವಾಸ್ತವದಲ್ಲಿ ಆಯುರಾರೋಗ್ಯ ಸಂಪತ್ತು (ಧನ, ಕನಕ, ಸಂತಾನ) ಸಿದ್ಧಿರಸ್ತು ಎಂದು ನಮ್ಮ ಶಾಂತಿಮಂತ್ರ ಉಲ್ಲೇಖೀಸುತ್ತದೆ. ಪ್ರಾಜ್ಞನಾದ, ಸಕಲ ರೀತಿಯಲ್ಲೂ 
ವಿವೇಕಿಯಾಗಿ ಮನುಷ್ಯ ಧರ್ಮ ಅನುಸರಿಸುವ ಬ್ರಾಹ್ಮಣ (ಇದು ಜಾತಿಗೆ ಸಂಬಂಧಿಸಿದ್ದಲ್ಲ.

Advertisement

 ಬ್ರಾಹ್ಮಣ ಎಂದರೆ ವಿಶ್ವಕ್ಕೆ ಆಧಾರನಾದ ಬ್ರಹ್ಮನನ್ನು ತಿಳಿದವನು. ಯಾರೇ ಇರಲಿ ಅವನು, ಜಾತಿಗೆ ಮೀಸಲಾಗಿಲ್ಲ ಅನ್ನೋ ಅಂಶವನ್ನು ಗ್ರಹಸುವುದು) ಶಾಂತಿ ಮಂತ್ರದ ಮೂಲಕ ಆಶೀರ್ವದಿಸುತ್ತಾನೆ. ಆಯುರಾರೋಗ್ಯ ಸಂಪತ್ತಿನ ವಿನಾ ಬದುಕಿಗೆ ಅರ್ಥವಿಲ್ಲ. ವ್ಯಕ್ತಿಯೊಬ್ಬನಿಗೆ, ಧನ-ಕನಕ-ಸಂತಾನ ಇರದೇ ಹೋದರೆ ಎಲ್ಲವೂ ಅಲ್ಲೋಲಕಲ್ಲೋಲ . ಇವು ಮೂರನ್ನೂ
ದೈವಬಲದಿಂದಲೇ ಹೊಂದಬೇಕು. ಆದರೆ ದೈವದ ಅಸ್ತಿತ್ವ ಎಲ್ಲಿ? ಜಗದೊಳಗಿನ ಬೆಣ್ಣೆಯಂತೆ. ಕಡಲೊಳಗಿನ ಅಮೃತದಂತೆ. ಉಪ್ಪಾದ ಕಡಲಲ್ಲಿ ಅಮೃತವಿದೆಯೇ? ಹೌದು, ಇದೆ. ಆದರೆ, ಅದನ್ನು ಬೇರ್ಪಡಿಸಲು ಸೂರ್ಯನ ಶಾಖ ಬೇಕು. ಮಳೆಯೇ ಅಮೃತ.
 ಹೀಗಾಗಿ ಅಮೃತತ್ವಕ್ಕೆ ಆಧಾರವಾದ ನೀರು ಯಾವಾಗಲೂ ನಿಮ್ಮ ಮನೆಯ ವಾಯುವ್ಯದಲ್ಲಿ ಉತ್ತರದ ದಿಕ್ಕನ್ನು ಆವರಿಸಿಕೊಂಡಿರಲಿ. ನಿಮ್ಮ ಭೂಮಿ ಅಂತರ್ಗತ ನೀರಿನ ಟ್ಯಾಂಕ್‌ ಅಥವಾ ಬಾವಿ ಉತ್ತರಕ್ಕಿರಲಿ. ಇನ್ನು ಬ್ಯುಸಿನೆಸ್‌ ಕುಳಗಳು
ನೈಋತ್ಯ ಭಾಗವನ್ನು ತೆಕ್ಕೆಗೆ ಪಡೆದಿರಲಿ. ಮನೆಯ ಅಥವಾ ಬ್ಯುಸಿನೆಸ್‌ ವಿಚಾರದಲ್ಲಿನ ಕುಬೇರ ಸಿದ್ಧಿಗೆ ಇದನ್ನು ಪ್ರಮುಖವಾಗಿ ಪರಿಗಣಿಸಬೇಕು. ಧನಬಲಕ್ಕೆ ಆಧಾರವಾದ ಈ ದಿಕ್ಕುಗಳು ಆಗ್ನೇಯ ದಿಕ್ಕಿನ, ವಾಯುವ್ಯ ದಿಕ್ಕಿನ ಶಿಸ್ತು, ಕ್ರಮಬದ್ಧತೆಯಿಂದ ಸಮತೋಲನ, ಸಂವರ್ಧನೆಗಳನ್ನು ಪಡೆಯುತ್ತವೆ. ಉತ್ತರ ದಿಕ್ಕನ್ನು ಕುಬೇರನೇ ನಿಯಂತ್ರಿಸಿ, ಅಧಿಕಾರ ಚಲಾಯಿಸುತ್ತಾನೆ. 
ಉತ್ತರ ದಿಕ್ಕನ್ನು, ಬೆಳಕಿಗೆ ಕಾರಣವಾಗುವ ಪೂರ್ವವನ್ನು ಮೊಟುಕುಗೊಳಿಸಬಾರದು.

 ಮನೆಯ ಪ್ರವೇಶ ದ್ವಾರಕ್ಕೆ ಹೊಂದಿಯೇ ಬಚ್ಚಲು ಮನೆ, ಶೌಚಾಲಯ ಇರದಿರಲಿ. ಇವು ಮನೆಯ ಅಥವಾ ವಾಣಿಜ್ಯ ಉದ್ದೇಶದ ಕೆಲಸ ಕಾರ್ಯಗಳಲ್ಲಿ ಅಡತಡೆ ತರುತ್ತವೆ. ಹರಿಯುವ ನೀರಿನ ಸೆಲೆಗೆ ಜೀವ ಸಂವೇದಕ ಶಕ್ತಿ ತುಂಬಿರುತ್ತದೆ. ನಿಂತ ನೀರು, ಜೀವ ವಿರೋಧಿಯಾಗಿದೆ. ಒಂದೇ ಕಡೆ ನಿಲ್ಲುವ ನೀರು ರೋಗಕ್ಕೆ ಮೂಲಾಧಾರ. ಈಗೀಗ ರೀ ಸೈಕಲ್ಡ್‌ ನೀರನ್ನು ಉಪಯೋಗಿಸುತ್ತಾರೆ. ಹಲವರು ಈ ವಿಚಾರ ಸೂಕ್ತವೇ ಎಂದು ಕೇಳುತ್ತಾರೆ. ಆದರೆ ಒಂದು ವಿಚಾರ ಗಮನಿಸಬೇಕು.

ನಮ್ಮ ಶಾಸ್ತ್ರಗಳು, ಈ ಹಿಂದಿನ ಋಷಿ ಪರಂಪರೆಯ ಸಂದರ್ಭದಲ್ಲಿ ರೂಪಗೊಂಡಂಥವು. ಈ ರಿಸೈಕಲ್ಡ್‌ ವಾಟರ್‌ ನಮ್ಮ ಹಿಂದಿನ ಪರಂಪರೆಯಲ್ಲಿ ಇಲ್ಲ. ಪ್ರಕೃತಿ ದತ್ತವಾಗಿಯೇ ಎಲ್ಲಾ ನೀರು ರೀ ಸೈಕಲ್‌ ಆಗಿ ಮಳೆ ನೀರಾಗಿ ಬಿದ್ದಾಗ, ಅದು ಪ್ರಕೃತಿ ದತ್ತವಾದುದೆಂದು ಪರಗಣಿಸುವುದಾಗಿದೆ. ಆದರೆ ಮನುಷ್ಯನಿಂದ ರೀಸೈಕಲ್‌ ಆದ ನೀರು ಕೃಷಿಗೆ ಯೋಗ್ಯವಾಗುವುದೆಂಬ ವಿಚಾರವನ್ನು ಯಾರೂ ನಿರಾಕರಿಸಲಾಗದು.  ಈಗ ಮುಖ್ಯವಾದುದು ಶೌಚಾಲಯವೋ, ಬಚ್ಚಲೋ, ಮನೆಯ ಮುಖ್ಯದ್ವಾರಕ್ಕೆ ಹೊಂದಿರಬಾರದು ಎಂಬ ವಿಚಾರ. ಹಾಗೆಯೇ ಅಗ್ನಿ ತಾಪವೂ ಪೂರ್ವ ಹಾಗೂ ದಕ್ಷಿಣವನ್ನು ತೆಕ್ಕೆಗೆ ಪಡೆದಿರಲಿ. ಈ ಅಂಶಗಳಿಂದ
ವಿಮುಖವಾಗುವುದು ಕುಬೇರನ ಮೂಲಕವಾದ ಸಂಪತ್ತಿಗೆ ಧಕ್ಕೆ ತರುವ ಮಾರ್ಗಗಳಾಗುತ್ತವೆ. ಮನೆಯ ಮುಖ್ಯ ದ್ವಾರಕ್ಕೆ ಮನೆಯ ಹಿಂಬದಿಯ ದ್ವಾರ ನೇರವಾಗಿ ಇರದಿರಲಿ. ಹೀಗೇನಾದರೂ ಮಾಡಿಬಿಟ್ಟರೆ, ಒಳಬಂದದ್ದು ಅರ್ಥಪೂರ್ಣಗೊಳ್ಳದೇ ಹಾಗೇ
ಹೊರದಬ್ಬಿಕೊಂಡು ಹೋಗಲ್ಪಡಲು ಅವಕಾಶವಾಗಿ ಬಿಡುತ್ತದೆ. ಟಾಯ್ಲೆಟ್‌ ಸರಿಯಾದ ದಿಕ್ಕಿನಲ್ಲಿ ಇರದೇ ಇದ್ದರೆ ಟಾಯ್ಲೆಟ್‌ ಬಾಗಿಲಿಗೆ ಕನ್ನಡಿಯನ್ನು ನೇತು ಹಾಕಿ. ಟಾಯ್ಲೆಟ್‌ನ ಬಾಗಿಲುಗಳು ಸದಾ ತೆರೆಯುವುದು ಬೇಡ. ಅನಗತ್ಯ ಸಮಯದಲ್ಲಿ ಮುಚ್ಚಿಯೇ ಇರಲಿ.
ಊಟ ಮಾಡುವ ಸ್ಥಳದ ಪ್ರತಿಫ‌ಲನ ಕನ್ನಡಿಯಲ್ಲಿ ನೆರವೇರುವ ಹಾಗೆ ಕನ್ನಡಿ ಜೋಡಣೆ ಊಟದ ಒಳಮನೆಯಲ್ಲಿರಲಿ. ಒಟ್ಟಿನಲ್ಲಿ ಕುಬೇರನು ಸುಲಭದ ತುತ್ತಲ್ಲ. ಜ್ಞಾನವನ್ನು ಸಂಪಾದಿಸಿದವನು ವಿನಯಕ್ಕೆ ಬದ್ಧನಾಗಿ ಇತರರನ್ನು ತನ್ನಂತೆಯೇ ಜ್ಞಾನ ಕೋಶಕ್ಕೆ
ಕರೆತಂದು ಸಮೃದ್ಧಿಗೆ ಕಾರಣನಾಗುವುದರಿಂದ, ಪರಿಶುದ್ಧತೆಯೂ, ಜ್ಞಾನವೂ ಇರುವಲ್ಲಿ ಕುಬೇರ ಧನ ಸಂಪತ್ತನ್ನು ವೃದ್ಧಿಸುತ್ತಾನೆ. 

ಅನಂತಶಾಸ್ತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next