Advertisement
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ವಾಲ್ಮೀಕಿ ವಂಶದಲ್ಲಿ ಹುಟ್ಟಿದವನು. ನಾನು ಎಂದೂ ಸಂಸ್ಕಾರ ಹೀನಾನಾಗಿ ಮಾತನ್ನಾಡಿಲ್ಲಇಬ್ರಾಹಿಂ ಹಳೆಯ ಸ್ನೇಹಿತರು, ನನ್ನನ್ನ ಕಕ್ಷಿದಾರನೆಂದು ಒಪ್ಪಿಕೊಂಡಿದ್ದಾರೆ. ನನ್ನ ಹೆಸರನ್ನ ವಿನಾಕಾರಣ ಎಳೆದುಕೊಂಡು ಬಂದಿದ್ದಾರೆ. ಇಬ್ರಾಹಿಂ ಸಂಸ್ಕಾರ ಹೀನರಾಗಿದ್ದಾರೆ. ಇಡೀ ಸ್ತ್ರೀಕುಲಕ್ಕೆ ಅಪಮಾನ ಮಾಡಿದ್ದಾರೆ. ವಿಧವೆಯಾದರೆ ಮತ್ತೆ ಮದುವೆಯಾಗಬಾರದು ಎಂಬ ಕಾನೂನು ಇದೆಯಾ ? ವಿಧವೆಯರಿಗೆ ಹೊಸ ಜೀವನ ಕೊಡುವ ಆಶಯ ಇರಬೇಕು. ಅದು ಬಿಟ್ಟು ಹೆಣ್ಣು ಕುಲಕ್ಕೆ ಅಪಮಾನ ಮಾಡುವುದು ಸರಿಯಲ್ಲ ಎಂದು ಕಿಡಿ ಕಾರಿದರು.
ರೋಲೆಕ್ಸ್ ಪ್ರಕರಣದಲ್ಲಿ ಯಾಕೆ ರಾಜೀನಾಮೆ ನೀಡಿದ್ದರು ? ವಕ್ಫ್ ಬೋರ್ಡ್ ಆಸ್ತಿಯನ್ನ ಕಬಳಿಸಿಲ್ಲವಾ ? ಆ ಜಾಗದಲ್ಲಿ ಕಟ್ಟಿರುವ ಮಳಿಗೆಗಳಿಂದ ಬರುವ ಬಾಡಿಗೆ ಪಡೆಯುತ್ತಿಲ್ಲವಾ ? ಇವರು ಪರಿಷತ್ ನಲ್ಲಿ ಸದಸ್ಯರಾಗಿದ್ದರು. ಯಾವ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿದ್ದಾರೆ ಅನ್ನೋದನ್ನ ಹೇಳಲಿ ನೋಡೋಣ. ನಾನು ಅಕ್ರಮ ಗಣಿಗಾರಿಕೆ ಸಂಬಂಧ ವರದಿಯನ್ನ ಕೊಟ್ಟಿದ್ದೇನೆ. ಅಂಗನವಾಡಿಯ ಅಕ್ರಮದ ವರದಿಯನ್ನೂ ಕೊಟ್ಟಿದ್ದೇನೆ. ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಅವರು ಹಾಕುವ ಮಾನನಷ್ಟ ಮೊಕದ್ದಮೆಯನ್ನ ಎದುರಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದೇನೆ ಎಂದು ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್ ಸಂವಿಧಾನದ ಮೇಲೆ ವಿಶ್ವಾಸವನ್ನ ಇಟ್ಟಿದೆ. ಸಮಾಜದ ಎಲ್ಲಾ ವರ್ಗದ ಜನರ ಅಭಿವೃದ್ಧಿ ಬಯಸುವ ಪಕ್ಷ ಆದರೆ, ಬಿಜೆಪಿ ಶ್ರೀರಾಮನ ಹೆಸರಿನಲ್ಲಿ ಸಮಾಜವನ್ನ ಒಡೆಯುವ ಪ್ರಯತ್ನ ಮಾಡಿದೆ. ರಾಜ್ಯದಲ್ಲಿ ದತ್ತಪೀಠದ ಹೆಸರಿನಲ್ಲೂ ರಾಜಕೀಯ ನಡೆಸುತ್ತಿದೆ. ಕೇಂದ್ರ, ರಾಜ್ಯ ಸರ್ಕಾರ ಸತ್ತು ಹೋಗಿದೆಯಾ ? ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ಹಿಜಾಬ್ ಸಂಬಂಧ ಉಂಟಾದ ಗೊಂದಲದ ಬಗ್ಗೆ ಮಾಹಿತಿ ಇರಲಿಲ್ಲವಾ ? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.