Advertisement

ಪಪ್ಪು ಎಂಬ ಟೀಕೆಗೆ ಬೇಸರವಿದೆಯೇ ಎಂಬ ಪ್ರಶ್ನೆಗೆ ರಾಹುಲ್ ಇಂದಿರಾಗಾಂಧಿ ಉದಾಹರಣೆ ನೀಡಿದ್ದೇಕೆ?

04:01 PM Dec 28, 2022 | Team Udayavani |

ನವದೆಹಲಿ: ದೀರ್ಘ ಸಮಯದಿಂದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನು “ಪಪ್ಪು” ಎಂದು ಟೀಕಿಸಲಾಗುತ್ತಿದೆ. ಅಜ್ಞಾನಿ ಎಂಬ ಅರ್ಥದಲ್ಲಿ ರಾಹುಲ್ ಗಾಂಧಿಯನ್ನು ಪಪ್ಪು ಎಂದು ಟ್ರೋಲ್ ಮಾಡಲಾಗುತ್ತಿದೆ. ಏತನ್ಮಧ್ಯೆ ಇತ್ತೀಚೆಗೆ ರಾಹುಲ್ ಗಾಂಧಿ ಜತೆ ನಡೆಸಿದ ಸಂದರ್ಶನದಲ್ಲಿ, “ಜನರು ನನ್ನನ್ನು ಪಪ್ಪು ಎಂದು ಕರೆಯುತ್ತಿರುವ ಬಗ್ಗೆ ಬೇಸರವಿಲ್ಲ ಎಂದು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಜನಸೇವೆಯ ನಾಟಕವಾಡುವ ಗಾಲಿ ರೆಡ್ಡಿ ರಾಜ್ಯದ ಜನತೆಯ ಕೆಲ ಪ್ರಶ್ನೆಗೆ ಉತ್ತರಿಸಲಿ: ಜೆ. ಭಾರಧ್ವಾಜ್

“ಪಪ್ಪು ಎಂದು ಕರೆಯುತ್ತಿರುವ ಬಗ್ಗೆ ನನಗೇನೂ ಬೇಸರವಿಲ್ಲ. ಇದು ಅವರ ಹೃದಯದೊಳಗಿನ ಭಯವನ್ನು ತೋರಿಸುತ್ತದೆ. ಅವರು ಸಂತುಷ್ಟರಾಗಿದ್ದರಿಂದ ಇದು ನನ್ನ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರದ ಒಂದು ಭಾಗವಾಗಿದೆ ಅಷ್ಟೇ ಎಂದು” ರಾಹುಲ್ ತಿರುಗೇಟು ನೀಡಿದ್ದಾರೆ.

ಅವರು (ವಿರೋಧಿಗಳು)ಯಾವ ಹೆಸರಿನಿಂದ ಕರೆದರೂ ನನಗೆ ಬೇಸರವಿಲ್ಲ. ನನ್ನ ವಿರೋಧಿಗಳು ಹೆಚ್ಚು, ಹೆಚ್ಚು ನನ್ನ ಹೆಸರನ್ನು ಬಳಸಲಿ ಎಂದು ಭಾರತ್ ಜೋಡೋ ಯಾತ್ರೆ ಮುಂಬೈಗೆ ಆಗಮಿಸಿದ್ದ ಸಂದರ್ಭದಲ್ಲಿ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ತಮಗೆ ಪಪ್ಪು ಎಂದು ಕರೆದು ಟೀಕಿಸುತ್ತಿರುವ ಪ್ರಶ್ನೆಗೆ ಸಂಬಂಧಿಸಿದಂತೆ ತನ್ನ ಅಜ್ಜಿ ಇಂದಿರಾಗಾಂಧಿ ಉದಾಹರಣೆ ಪ್ರಸ್ತಾಪಿಸಿದ್ದು, ಇಂದಿರಾಗಾಂಧಿ ಅವರನ್ನು ಭಾರತದ ಉಕ್ಕಿನ ಮಹಿಳೆ ಎಂದು ಕರೆದಿದ್ದರು. ಅದಕ್ಕೂ ಮೊದಲು ಇಂದಿರಾ ಅವರನ್ನು ಮೂಕ ಗೊಂಬೆ ಎಂದು ಟೀಕಿಸಿದ್ದರು. ಈಗ ಅದೇ ಜನರು ನನ್ನ ವಿರುದ್ಧ 24X7 ಟೀಕಿಸುತ್ತಿದ್ದಾರೆ. ಮೂಕ ಗೊಂಬೆ (ಇಂದಿರಾಗಾಂಧಿ) ನಂತರ ದೇಶದ ಉಕ್ಕಿನ ಮಹಿಳೆಯಾಗಿ ಬೆಳೆದಿದ್ದರು. ಆಕೆ ಎಂದೆಂದಿಗೂ ಉಕ್ಕಿನ ಮಹಿಳೆಯೇ ಎಂದು ರಾಹುಲ್ ತಿರುಗೇಟು ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next