Advertisement
ಮಂಗಳೂರಿನ ಉದ್ಯಮಿ ಶರೂನ್ ಮತ್ತು ಶ್ವೇತಾ ದಂಪತಿ ಹಾಗೂ ಮಣಿಪಾಲ ಎಂಐಟಿಯ ರೀತು ಕೇಯೂರು ಅವರ ಸೇವಾರ್ಥ ಜೋಡಿ ಚಂಡಿಕಾಯಾಗ, ಕ್ಷೇತ್ರದ ವತಿಯಿಂದ ಕುಬೇರ ಲಕ್ಷ್ಮೀ ಸಾನ್ನಿಧ್ಯದಲ್ಲಿ ಮಹಾಲಕ್ಷ್ಮೀ ಸಹಸ್ರನಾಮ ಯಾಗ, ದೊಡ್ಡಣಗುಡ್ಡೆಯ ಉದಯ ಮತ್ತು ರೇಖಾ ದಂಪತಿಯ ಸೇವಾರ್ಥ ದುರ್ಗಾನಮಸ್ಕಾರ ಪೂಜೆ, ಕಲೊ³àಕ್ತ ಪೂಜೆ ಸಹಿತ ರಂಗಪೂಜೆ ಜರಗಿತು.
ಶರನ್ನವರಾತ್ರಿ ಪರ್ವಕಾಲದಲ್ಲಿ ದೂರದೂರುಗಳಿಂದ ಬೆಳಗ್ಗಿನಿಂದ ರಾತ್ರಿಯ ವರೆಗೆ ಭಕ್ತರು ಕ್ಷೇತ್ರಕ್ಕೆ ಧಾವಿಸುತ್ತಿದ್ದಾರೆ. ಅನ್ನಪ್ರಸಾದಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ವೃದ್ಧಿಸುತ್ತಿದ್ದು, ಭಕ್ತರು ಸಂತೃಪ್ತ ಭಾವ ತೋರ್ಪಡಿಸುತ್ತಿದ್ದಾರೆ. ದೇವಿಯ ಪ್ರಸಾದವನ್ನು ಬಡಿಸಿ ಉಣಿಸಬೇಕೇ ಹೊರತೂ ಕೇಳಿ ತಿನ್ನುವುದಲ್ಲ ಎನ್ನುವ ನೆಲೆಯಲ್ಲಿ ಕ್ಷೇತ್ರದಲ್ಲಿ ಇದುವರೆಗೂ ಬಫೆ ಪದ್ಧತಿ ಅಳವಡಿಸಿಲ್ಲ ಎಂದು ಶ್ರೀ ರಮಾನಂದ ಗುರೂಜಿ ತಿಳಿಸಿದ್ದಾರೆ.
Related Articles
ಕ್ಷೇತ್ರದಲ್ಲಿ ಅ. 19ರ ಬೆಳಗ್ಗೆ 8.30ಕ್ಕೆ ಲಲಿತಾ ಸಹಸ್ರ ಕದಳೀಯಾಗ ಆರಂಭಗೊಳ್ಳಲಿದ್ದು, 11ಕ್ಕೆ ಪೂರ್ಣಾಹುತಿ ನಡೆಯಲಿದೆ. ದಕ್ಷಿಣ ಭಾರತದಲ್ಲಿಯೇ ಮೇರು ಶ್ರೀಚಕ್ರಪೀಠವನ್ನು ಹೊಂದಿರುವ ಕ್ಷೇತ್ರದಲ್ಲಿ ಅಗ್ನಿ ಮುಖೇನ ಆಹುತಿ ನೀಡಿ ಆರಾಧಿಸುವ ಯಾಗ ಇದಾಗಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.
Advertisement