Advertisement
ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ ಎಂಬುದನ್ನು ಬಿಟ್ಟರೆ ಸಾರ್ವಜನಿಕರಿಗೆ ಪ್ರಯೋಜನವೇನೂ ಆಗುತ್ತಿಲ್ಲ. ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಕ್ಕೆ ಹೋಗುವ ಸಾರ್ವಜನಿಕರು ವೈದ್ಯರಿಲ್ಲದೆ ಶುಶ್ರೂಷಕರು ಅಥವಾ ಅಲ್ಲಿನ ನೌಕರರನ್ನು ನೋಡಿ ವಾಪಸ್ಸಾಗಬೇಕಾಗಿದೆ. ದೊಡ್ಡಮೇಟಿ ಕುರ್ಕೆ ಬಹುದೊಡ್ಡ ಗ್ರಾಮ. ಸುತ್ತ ಮುತ್ತಲ ಹತ್ತಾರು ಹಳ್ಳಿಗಳಿಗೆ ಇದೊಂದೇ ಪ್ರಾಥಮಿಕ ಆರೋಗ್ಯ ಕೇಂದ್ರ. ವ್ಯಾಪಾರ ವಹಿವಾಟಿಗಾಗಿಸಾವಿರಾರು ಜನ ಈ ಗ್ರಾಮಕ್ಕೆ ಬಂದು ಹೋಗುತ್ತಾರೆ. ಇಲ್ಲಿ ವೈದ್ಯರು ಸಿಗದಿದ್ದರಿಂದ ಅನಿವಾರ್ಯವಾಗಿ ಅರಸೀಕೆರೆಗೆ ಹೋಗಬೇಕಾಗಿದೆ.
Related Articles
ವೈದ್ಯರ ಗೈರು ಹಾಜರಿ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೂ ದೂರು ಹೋಗಿದೆ. ಆದರೆ, ಕ್ರಮ ತೆಗೆದು ಕೊಂಡಿಲ್ಲ. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಿಗೆ ವೈದ್ಯರೇ ಬರುವುದಿಲ್ಲ. ಬರುವ ವೈದ್ಯರೂ ಈ ರೀತಿ ಬೇಕಾಬಿಟ್ಟಿ ನಡೆದು ಕೊಳ್ಳುವುದಾದರೆ ಆಸ್ಪತ್ರೆಗಳಿದ್ದರೇನು ಪ್ರಯೋಜನ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
Advertisement
-ಮಾಡಾಳು ಸೋಮಣ್ಣ