Advertisement

Watch; ಕುಗ್ರಾಮದ ರೈತನ ಕುರಿತ ಸಾಕ್ಷ್ಯಚಿತ್ರ “ಆಸ್ಕರ್” ಪ್ರಶಸ್ತಿಗೆ ಆಯ್ಕೆ; ಯಾರು ಈ ರೈತ?

08:55 AM Sep 19, 2019 | Nagendra Trasi |

ಡೆಹ್ರಾಡೂನ್: ಉತ್ತರಾಖಂಡ್ ನ ಕುಗ್ರಾಮವೊಂದರ ರೈತನ ಬದುಕಿನ ಹೋರಾಟದ ಕುರಿತ ಸಾಕ್ಷ್ಯಚಿತ್ರ “ಮೋಟಿ ಬಾಗ್” ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

Advertisement

ಇದು ಉತ್ತರಾಖಂಡ್ ನ ಹಿಮಾಲಯದ ಬೆಟ್ಟಗಳಿಂದ ಆವೃತ್ತವಾಗಿರುವ ಕುಗ್ರಾಮವಾದ ಪೌರಿ ಗಾರ್ವಾಲ್ ಪ್ರದೇಶದ ರೈತ ವಿದ್ಯಾದತ್ತ ಎಂಬ ಜೀವನಗಾಥೆಯನ್ನು ಆಧರಿಸಿ “ಮೋಟಿ ಬಾಗ್” ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಲಾಗಿತ್ತು.

ಸಾಕ್ಷ್ಯಚಿತ್ರ ನಿರ್ದೇಶಕ ನಿರ್ಮಲ್ ಚಂದರ್ ದಾನ್ ಡ್ರಿಯಾಲ್ ಗೆ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಾಕ್ಷ್ಯಚಿತ್ರ ಯುವಪೀಳಿಗೆಗೆ ಪ್ರೇರಣೆಯಾಗಬಲ್ಲದು. ಯುವ ಜನಾಂಗ ತಮ್ಮ ಹಳ್ಳಿಯಲ್ಲೇ ಉಳಿದು ತಮ್ಮ ಸಮುದಾಯಕ್ಕಾಗಿ ಕಾರ್ಯನಿರ್ವಹಿಸುವ ಬಗ್ಗೆ ಅರಿವು ಮೂಡಿಸಲಿದೆ ಎಂದು ರಾವತ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲ ಕುಗ್ರಾಮಗಳಿಂದ ವಲಸೆ ಹೋಗುವುದನ್ನು ತಡೆಯಲು ಈ ಸಾಕ್ಷ್ಯ ಚಿತ್ರ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.

ವಿದ್ಯಾದತ್ತ್ ಎಂಬ ಶ್ರಮಜೀವಿ ರೈತ:

Advertisement

ಕುಗ್ರಾಮದಲ್ಲಿರುವ ವಿದ್ಯಾದತ್ತ ಎಂಬ 83 ವರ್ಷದ ರೈತ ತನ್ನ 5ಎಕರೆ ಜಾಗವನ್ನು ತೋಟವನ್ನಾಗಿ ಮಾಡುವಲ್ಲಿ ಶ್ರಮಿಸಿದ ಕಥಾನಕ ಇದು. ಈ ಇಳಿವಯಸ್ಸಿನಲ್ಲೂ ತಾವೇ ತೋಟದಲ್ಲಿ ಕೆಲಸ ಮಾಡುವ ಮೂಲಕ ದುಡಿಯುತ್ತಿದ್ದಾರೆ. ಇದೊಂದು ಆಧ್ಯಾತ್ಮಿಕದ ಹುರುಪು ಇದ್ದಂತೆ ಎಂಬುದು ವಿದ್ಯಾದತ್ತ ಅವರ ನುಡಿ. ಮೋಟಿ ಬಾಗ್ ನಲ್ಲಿ ಕಳೆದ ಹತ್ತು ವರ್ಷಗಳಿಂದ ನೇಪಾಳಿ ಕೆಲಸಗಾರರೊಂದಿಗೆ ಕೂಡಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಬಹಳಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಅದರಲ್ಲಿ ಈ ತೋಟದಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಸಣ್ಣ, ಸಣ್ಣ ಕುಟೀರಗಳನ್ನು ನಿರ್ಮಾಣ ಮಾಡುವ ಅಭಿಲಾಷೆ ಇವರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next