Advertisement

ಡಾಕ್ಯುಮೆಂಟರಿಗಾಗಿ ಜೀವ ರಕ್ಷಕ ವಸ್ತುಗಳನ್ನು ಬಳಸದೆ ಜೋಗ ಜಲಪಾತ ಏರಿದ ಜ್ಯೋತಿರಾಜ್

04:04 PM Dec 16, 2020 | keerthan |

ಶಿವಮೊಗ್ಗ: ದೊಡ್ಡ ಕಟ್ಟಡಗಳನ್ನು ಸಲಿಸಾಗಿ ಏರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಜೀವನದ ಬಗ್ಗೆ ಸಾಕ್ಷ್ಯಚಿತ್ರವೊಂದು ತಯಾರಾಗುತ್ತಿದೆ. ಇದಕ್ಕಾಗಿ ಜ್ಯೋತಿರಾಜ್ ಯಾವುದೇ ಜೀವ ರಕ್ಷಕ ವಸ್ತುಗಳನ್ನು ಬಳಸದೆ ಜೋಗ ಜಲಪಾತ ಏರಿದರು.

Advertisement

ಅನಿವಾಸಿ ಭಾರತೀಯ ಸ್ಟಾನ್ಲಿ ನಿರ್ಮಿಸುತ್ತಿರುವ ‘ಇನ್ ಕ್ರೆಡಿಬಲ್ ಮಂಕಿಮ್ಯಾನ್’ ಎಂಬ ಶೀರ್ಷಿಕೆಯ ಡಾಕ್ಯುಮೆಂಟರಿಯ ಚಿತ್ರೀಕರಣ ಮಂಗಳವಾರದಿಂದ ಜೋಗ ಜಲಪಾತದ ಬಳಿ ನಡೆಯುತ್ತಿದೆ.

ಈ ಹಿಂದೆ ‌ಹಲವು ಬಾರಿ ಜೋಗ ಜಲಪಾತ ಹತ್ತಿ ಇಳಿದಿರುವ ಜ್ಯೋತಿರಾಜ್ ಈ ಬಾರಿಯೂ  ಡಾಕ್ಯುಮೆಂಟರಿ ನೈಜವಾಗಿ ಮೂಡಿಬರಲಿ ಎಂಬ ಕಾರಣಕ್ಕೆ ಜೀವರಕ್ಷಕ ವಸ್ತುಗಳನ್ನು ಬಳಸದೆ ಜೋಗ ಜಲಪಾತ ಏರಿದ್ದಾರೆ.

ಇದನ್ನೂ ಓದಿ:ವಿಕಲಚೇತನ ಅಪ್ರಾಪ್ತೆ ಮೇಲೆ 52ವರ್ಷದ ವ್ಯಕ್ತಿಯಿಂದ ಅತ್ಯಾಚಾರ ಯತ್ನ: ದೂರು ದಾಖಲಿಸದ ಪೊಲೀಸರು

Advertisement

ಜ್ಯೋತಿರಾಜ್ ಗೆ  ಜೋಗ ಜಲಪಾತ ಏರಲು ಹಾಗೂ ರಾಜ ಫಾಲ್ಸ್ ನಿಂದ ಪ್ರಪಾತಕ್ಕಿಳಿಯಲು ಶಿವಮೊಗ್ಗ ಜಿಲ್ಲಾಡಳಿತವು ಷರತ್ತುಬದ್ಧ ಅನುಮತಿ ನೀಡಿದೆ. ಅದರಂತೆ ಒಟ್ಟು ನಾಲ್ಕು ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಹೆಲಿಕ್ಯಾಮ್ ಹಾಗೂ ಡ್ರೋಣ್ ಬಳಸಿ ಡಾಕ್ಯುಮೆಂಟರಿಯ ಚಿತ್ರೀಕರಣ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next