Advertisement

ದಾಖಲೆ ಸಂಗ್ರಹ: ಬೆಸ್ಕಾಂ-ರೈತರ ಸಂಘರ್ಷ

12:04 PM Sep 15, 2020 | Suhan S |

ದೇವನಹಳ್ಳಿ: ಬೆಸ್ಕಾಂ ಇಲಾಖೆ ಕೊಳವೆ ಬಾವಿ ಹೊಂದಿರುವ ರೈತರಿಂದ ದಾಖಲೆ ಕಲೆ ಹಾಕುವ ಪ್ರಕ್ರಿಯೆಗೆ ಮುಂದಾಗಿರುವ ಬೆನ್ನಲ್ಲೇ ಇಲಾಖೆ ಕ್ರಮಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಸಂಘರ್ಷಕ್ಕೆಕಾರಣವಾಗಿದೆ.

Advertisement

ಮುಂದಿನ ದಿನಗಳಲ್ಲಿ ಬೆಸ್ಕಾಂ ಇಲಾಖೆಯಿಂದ ಹೊಸ ಹೊಸಯೋಜನೆಗಳುಪ್ರಾರಂಭವಾಗುವ ದೃಷ್ಟಿಕೋನದಡಿ ಗ್ರಾಮೀಣ ಭಾಗದ ರೈತರಿಂದ ವಿವಿಧ ದಾಖಲೆ ತೆಗೆದುಕೊಳ್ಳಲು ಬೆಸ್ಕಾಂ ಇಲಾಖೆ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ರೈತರ ಪಂಪ್‌ಸೆಟ್‌ಗಳಿಗೆ ಬೆಸ್ಕಾಂ ಇಲಾಖೆ ಮೀಟರ್‌ ಅಳವಡಿಸಲು ಕಾರ್ಯಕ್ರಮ ರೂಪಿಸಿಕೊಂಡಿದೆ.ಈಗಾಗಲೇಹೊಸಕೋಟೆ ತಾಲೂಕಿನಲ್ಲಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಿರುವುದರಿಂದ ರೈತರು ಗಲಾಟೆ ಮಾಡಿ, ಮೀಟರ್‌ಗಳನ್ನು ತೆಗೆಸಿದ್ದಾರೆ.

ದೇವನಹಳ್ಳಿ ತಾಲೂಕಿನಲ್ಲಿಯೂ ರೈತರಿಂದ ದಾಖಲೆಗಳನ್ನು ಬೆಸ್ಕಾಂ ಇಲಾಖೆ ಸಂಗ್ರಹಿಸುತ್ತಿದೆ. ಯಾವುದೇ ಕಾರಣಕ್ಕೂ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಬಾರದು, ರೈತರು ಯಾವುದೇ ಕಾರಣಕ್ಕೂಯಾವುದೇದಾಖಲೆಗಳನ್ನುಬೆಸ್ಕಾಂ ಇಲಾಖೆಗೆ ನೀಡಬೇಡಿ ಎಂದು ತಾಲೂಕು ರೈತ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಕೊಳವೆ ಬಾವಿ ಪಂಪ್‌ಸೆಟ್‌ಗಳಿಗೆ ರಾಜ್ಯ ಸರ್ಕಾರ ಸಹಾಯಧನ ನೀಡುತ್ತಿದ್ದು, ಇನ್ನು ಮುಂದೆ ಕೇಂದ್ರ ಸರ್ಕಾರ ಪಂಪ್‌ಸೆಟ್‌ಗಳಿಗೆ ಸಹಾಯಧನ ನೀಡಲು ಮುಂದಾಗುತ್ತಿದೆ. ಪಂಪ್‌ಸೆಟ್‌, ಭಾಗ್ಯಲಕ್ಷ್ಮೀ, ಕುಟೀರ ಯೋಜನೆಯಡಿರೈತರಿಂದಆಧಾರ್‌ಕಾರ್ಡ್‌,ಮೊಬೈಲ್‌ ಸಂಖ್ಯೆ, ಬ್ಯಾಂಕ್‌ ಪುಸ್ತಕ ಮತ್ತು ಆದಾಯ ಪ್ರಮಾಣ ಪತ್ರಗಳ ದಾಖಲೆ ಸಂಗ್ರಹಿಸಲಾಗುತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ.

ಈ ಹಿಂದೆ ಕೆಲವು ಯೋಜನೆಗಳಲ್ಲಿ ಬ್ಯಾಂಕು ಖಾತೆಗಳಿಗೆ ಹೋಗುವಾಗ ದುರ್ಬಳಕೆಯಾಗುತ್ತಿರುವ ದೂರು ಕೇಳಿ ಬರುತ್ತಿದ್ದವು. ಇದೀಗ ರೈತರ ಖಾತೆಗಳಿಗೆ ನೇರವಾಗಿ ಸಹಾಯಧನ ಸಂದಾಯವಾಗುವಂತೆಹಾಗೂ ಸರ್ಕಾರ ಮುಂದಿನ ದಿನಗಳಲ್ಲಿ ಹೊಸ ಹೊಸ ಯೋಜನೆ ರೂಪಿಸುವ ಚಿಂತನೆಯಲ್ಲಿ ಇರುವುದರಿಂದ ಅರ್ಹರಿಗೆ ಯೋಜನೆ ತಲುಪಿಸುವ ಉದ್ದೇಶದಿಂದ ದಾಖಲಾತಿ ಸಂಗ್ರಹಿಸಲಾಗುತ್ತಿದೆ. ಬ್ಯಾಂಕುಗಳಿಗೆ ಆಧಾರ್‌ಲಿಂಕ್‌ ಮಾಡುವುದರ ಮೂಲಕ ದುರ್ಬಳಕೆ ಆಗುವುದಕ್ಕೆ ಅವಕಾಶವಿಲ್ಲದೆ ಕಡಿವಾಣ ಹಾಕಲು ಯೋಜನೆ ರೂಪಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಇದೊಂದು ಗ್ರಾಮೀಣ ಭಾಗದ ರೈತರಿಗೆ ಎಷ್ಟರ ಮಟ್ಟಿಗೆ ಅನುಕೂಲವಾಗಲಿದೆ ಎಂಬುವುದುಕಾದು ನೋಡಬೇಕಿದೆ.

Advertisement

ರಾಜ್ಯಾದ್ಯಂತ 28 ಲಕ್ಷಕೃಷಿ ಪಂಪ್‌ಸೆಟ್‌ಗಳನ್ನು ನಾಶ ಮಾಡುವ ವಿದ್ಯುತ್‌ಕಾಯ್ದೆಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.ಕೂಡಲೇ ಇಂತಹ ತಿದ್ದುಪಡಿ ಕಾಯಿದೆಕೈ ಬಿಡಬೇಕು. ಈಗಾಗಲೇಕೊರೊನಾ ಹಿನ್ನೆಲೆಯಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಭೂ ಸುಧಾರಣೆಕಾಯಿದೆ, ಎಪಿಎಂಸಿ ಕಾಯಿದೆ,ಕಾರ್ಮಿಕರಿಗೆ ಮಾರಕವಾಗುವಕೈಗಾರಿಕಾಕಾನೂನು ಗಳಿಗೆ ಸರ್ಕಾರಗಳು ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿವೆ. ಇದುಖಂಡನೀಯ. ಬಿದಲೂರು ರಮೇಶ್‌, ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ

ಈಗಾಗಲೇ ಸರ್ಕಾರ ಉಚಿತ ವಿದ್ಯುತ್‌ನಲ್ಲಿ 7 ತಾಸು ವಿದ್ಯುತ್‌ ಸಮರ್ಪಕವಾಗಿ ನೀಡುತ್ತಿದೆ. ಬೆಸ್ಕಾಂ ಇಲಾಖೆ ಹೊಸಕಾರ್ಯಕ್ರಮಕ್ಕೆ ಮುನ್ನುಡಿ ಬರೆಯುತ್ತಿರುವುದರಿಂದ  ಹೆಚ್ಚು ಅನುಕೂಲವಾಗಬೇಕು. ಕಾರ್ಯಕ್ರಮಗಳ ಸಾಧಕ-ಬಾಧಕಗಳ ಬಗ್ಗೆ ಸರಿಯಾದ ಮಾಹಿತಿ ದೊರೆಯುವಂತೆ ಆಗಬೇಕು. ದ್ವಂದ್ವ ನಿರ್ಧಾರ ಕೈಗೊಳ್ಳಬಾರದು. ನಾರಾಯಣಸ್ವಾಮಿ, ರೈತ ಮುಖಂಡ

ಕೊಳವೆ ಬಾವಿಗಳಕುರಿತು ರೈತರಿಂದಆಧಾರ್‌ಕಾರ್ಡು, ಆದಾಯ ಪ್ರಮಾಣ ಪತ್ರ, ಬ್ಯಾಂಕ್‌ ಪಾಸ್‌ಬುಕ್‌ ಇತರೆ ದಾಖಲೆ ಸಂಗ್ರಹಿಸಲಾಗುತ್ತಿದೆ. ಪಂಪ್‌ಸೆಟ್‌ಗೆ ರಾಜ್ಯ ಸರ್ಕಾರ ನೀಡುತ್ತಿದ್ದ ಸಹಾಯಧನವನ್ನು ಈಗ,ಕೇಂದ್ರ ಸರ್ಕಾರ ನೀಡುತ್ತಿದೆ. ಹೊಸಕಾರ್ಯಕ್ರಮಗಳ ಮೂಲಕ ರೈತರಖಾತೆ ಗಳಿಗೆ ನೇರವಾಗಿ ಸಹಾಯಧನ ಸಂದಾಯವಾಗಲಿದೆ. ಬಸವಣ್ಣ, ಬೆಸ್ಕಾಂ ಕಾರ್ಯಪಾಲಕ ಅಭಿಯಂತರ, ಹೊಸಕೋಟೆ ವಿಭಾಗ

 

ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next