Advertisement
ರಾಜ್ಯ ಸರ್ಕಾರ ಹಾಗೂ ಮುಷ್ಕರ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳ ವೈದ್ಯರ ಹಠಮಾರಿ ಧೋರಣೆಯಿಂದಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಗುರುವಾರವೊಂದೇ ದಿನ 17 ಮಂದಿ ಜೀವಕಳೆದುಕೊಂಡಿದ್ದರೆ, ಶುಕ್ರವಾರ 8 ಮಂದಿ ಸಾವನ್ನಪ್ಪಿದ್ದಾರೆ.
ಮುಷ್ಕರ ನಿರತ ವೈದ್ಯರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಧ್ಯಾಹ್ನ ನಿರ್ಣಾಯಕ ಸಭೆ ನಡೆಸಲಿದ್ದಾರೆ. ಶುಕ್ರವಾರ 8 ಮಂದಿ ರಾಜ್ಯದ ವಿವಿಧೆಡೆ ಚಿಕಿತ್ಸೆ ದೊರಕದೆ ಪ್ರಾಣ ಕಳೆದುಕೊಂಡಿದ್ದು, ಈ ಪೈಕಿ ಗದಗದ ನವವಿವಾಹಿತನೂ ಸೇರಿದ್ದಾನೆ. ಡೇಂಘಿ ಜ್ವರದಿಂದ ಬಳಲುತ್ತಿದ್ದ ಗಜೇಂದ್ರಘಡದ ರವಿ ಭಜಂತ್ರಿ (22) ಎಂಬಾತ ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿಗೆ ಹೆಚ್ಚಿನ ಚಿಕಿತ್ಸೆ ಪಡೆಯಲು ವೈದ್ಯರು ಸೂಚಿಸಿದ್ದರು, ಆದರೆ ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ಕೊನೆಯುಸಿರೆಳೆದಿದ್ದಾರೆ. ನವೆಂಬರ್ 12 ರಂದು ರವಿವಾರ ನಡೆದಿತ್ತು.
Related Articles
Advertisement
ಪುತ್ತೂರು ವಿದ್ಯಾರ್ಥಿನಿ ಬಲಿ
ಪುತ್ತೂರಿನಲ್ಲಿ ಕಿಡ್ನಿ ವೈಪಲ್ಯ ದಿಂದ ಬಳಲುತಿದ್ದ ಕಾಲೇಜ್ ವಿದ್ಯಾರ್ಥಿನಿ ಪೂಜಾ ಎಂಬಾಕೆ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಶುಕ್ರವಾರ ಬಲಿಯಾಗಿದ್ದಾಳೆ. . ಶುಕ್ರವಾರ ಬೆಳಿಗ್ಗೆ ರೋಗ ಉಲ್ಬಣಗೊಂಡ ಪೂಜಾಳನ್ನು ಎಂದಿನಂತೆ ಪುತ್ತೂರು ಸಿಟಿ ಅಸ್ಪತ್ರೆ ಗೆ ಕರೆ ತಂದಾಗ ವೈದ್ಯರಿಲ್ಲದೆ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ಬೆಂಗಳೂರು ಸೇರಿದಂತೆ ವಿವಿಧೆಡೆ ಶುಕ್ರವಾರ ಓಪಿಡಿ ಸೇವೆ ನೀಡಲಾಗುತ್ತಿದೆ. ಸದನದಲ್ಲೂ ತೀವ್ರ ಗದ್ದಲ ಮುಷ್ಕರದಕುರಿತಾಗಿ ಸರ್ಕಾರ ಯಾಕೆ ಕಾಲ ಹರಣ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸರ್ಕಾರವನ್ನುತರಾಟೆಗೆ ತೆಗೆದುಕೊಂಡಿದ್ದಾರೆ. ಕಣ್ಣೀರಿಟ್ಟ ವೈದ್ಯ
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ವೈದ್ಯರು ಜಂಟಿ ಸುದ್ದಿಗೋಷ್ಠಿ ನಡೆಸಿ ಸರ್ಕಾರ ನಮ್ಮನ್ನು ವಿಧೇಯಕದ ಕುರಿತು ಚರ್ಚೆಗೆ ಕರೆಯುವುದಾಗಿ ಎದುರು ನೋಡುತ್ತಿದ್ದೇವೆ ಎಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಡಾ.ಶಶಿಕಾಂತ ಕುರಗೋಡ ಅವರು ಕಣ್ಣೀರಿಟ್ಟ ಘಟನೆ ನಡೆಯಿತು .