ಕೊರೊನಾ ಚಿಕಿತ್ಸೆ ಆರಂಭಿಸಿದ ನಂತರ ಬಹುತೇಕಕುಟುಂಬದಿಂದ ದೂರವೇ ಉಳಿದಿದ್ದಾರೆ. ಕಳೆದ ವರ್ಷಮಾರ್ಚ್‌ನಿಂದ ಇಲ್ಲಿವರೆಗೂಭಾನುವಾರವೂ ಸೇರಿದಂತೆಒಂದು ದಿನವೂ ರಜೆತೆಗೆದುಕೊಂಡಿಲ್ಲ. ಆಸ್ಪತ್ರೆಯಿಂದನಿತ್ಯ ರಾತ್ರಿ 10ಕ್ಕೆ ಮನೆಗೆ ಬಂದರೆಬೆಳಿಗ್ಗೆ 6.30ಕ್ಕೆ ಹೊರಡುತ್ತಾರೆ.
ಮನೆಗೆ ಬಂದ ನಂತರವೂಸಹಾಯಕ ವೈದ್ಯರು, ಶುಶ್ರೂಷಕರು, ಸೋಂಕಿತರ ಸಂಬಂಧಿಗಳಿಂದ ಹತ್ತಾರು ಕರೆಗಳುಬರುತ್ತವೆ. ಅವುಗಳನ್ನು ಮುಗಿಸಿ ಊಟ ಮಾಡುವಷ್ಟರಲ್ಲಿ11 ಗಂಟೆಯಾಗುತ್ತಿತ್ತು. ನೆನಪಿರುವಂತೆ 30ಕ್ಕೂ ಹೆಚ್ಚು ಸಲಮನೆಗೆ ಬಂದು ಊಟ ಮಾಡುತ್ತಿರುವಾಗ, ಮಲಗಿದ್ದಾಗಪೋನ್‌ಕರೆ ಬಂದಿದ್ದರಿಂದ ಆಸ್ಪತ್ರೆಗೆ ಹಿಂದಿರುಗಿದ್ದಾರೆ.
ರೋಗ ಲಕ್ಷಣಗಳು ಕಾಣಿಸಿಕೊಂಡಾಗ ಐದಾರು ಬಾರಿಎರಡು ವಾರದ ಮಟ್ಟಿಗೆ ಹೋಟೆಲ್‌ನಲ್ಲಿ ಕ್ವಾರಂಟೈನ್‌ಆಗಿದ್ದರು. ಆ ದಿನಗಳು ಸಾಕಷ್ಟು ಭಯದಿಂದ ಕಳೆದೆವು.ವರದಿ ನೆಗೆಟಿವ್ ಬರಲಿ ಎಂದು ಪ್ರಾರ್ಥಿಸುತ್ತಿದ್ದೆವು.ಊಟ, ನಿದ್ದೆ ಇಲ್ಲದೆ, ಅನಾರೋಗ್ಯ ಸಂದರ್ಭದಲ್ಲಿಯೂ ವಿಶ್ರಾಂತಿ ಪಡೆಯದೇ ಆಸ್ಪತ್ರೆಗೆ ತೆರಳಿದಾಗ ಸಾಕಷ್ಟು ಬೇಸರವಾಗುತ್ತಿತ್ತು.
ಜತೆಗೆ ಆತಂಕವೂ ಇತ್ತು. ಆಗ,”ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ವೈಯಕ್ತಿಕ ಜೀವನಲೆಕ್ಕಕ್ಕೆ ಬರುವುದಿಲ್ಲ. ಅಪಾಯಗಳು ಗೊತ್ತಿದ್ದು, ದೃಢನಿರ್ಧಾರ ಮಾಡಿಯೇ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅದಕ್ಕೆ ನ್ಯಾಯ ಸಲ್ಲಿಸಬೇಕು” ಎಂದುಸಮಾಧಾನಪಡಿಸುತ್ತಿದ್ದರು.
ಮನೆ ಮತ್ತು ಮಕ್ಕಳು ಸಂಪೂರ್ಣಜವಾಬ್ದಾರಿನನ್ನಮೇಲೆಯೇಇತ್ತು. ಅದರಲ್ಲೂ ಮಕ್ಕಳುತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು. ಕಳೆದ ಒಂದೂವರೆವರ್ಷದಲ್ಲಿ ಅರ್ಧದಷ್ಟುದಿನಗಳುವಿಡಿಯೊ ಕಾಲ್‌ನಲ್ಲಿಯೇಮಕ್ಕಳು ತಂದೆ ಮುಖ ನೋಡಿದ್ದಾರೆ.ಸೋಂಕಿತರು ಗುಣಮುಖರಾಗಿಹಾರೈಸಿದ ಮೊಬೈಲ್ ಸಂದೇಶಗಳು,ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಸಂದರ್ಭದಲ್ಲಿ ಕಷ್ಟ, ಬೇಸರ ಎಲ್ಲಾದೂರವಾಗಿ ಹೆಮ್ಮೆ ಎನಿಸುತ್ತದೆ.ಕೊರೊನಾ ಬಂದನಂತರ ಒತ್ತಡದಕೆಲಸ, ದಿನಚರಿ ಬದಲಾಗಿ, ಊಟ, ನಿದ್ದೆ ಮರೆತು ಅವರುಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಯಲ್ಲಿದ್ದರೆ, ಇತ್ತ ನಮ್ಮಇಡೀ ಕುಟುಂಬವೇ ಅವರ ಆರೋಗ್ಯದ ಚಿಂತೆಯಲ್ಲಿರುತ್ತದೆ
(ಮಣಿಪಾಲ್ ಆಸ್ಪತ್ರೆ ಶ್ವಾಸಕೋಶ ವಿಭಾಗದ ಮುಖ್ಯಸ್ಥರಾದ ಡಾ.ಸತ್ಯನಾರಾಯಣ ಮೈಸೂರು ಇವರ ಪತ್ನಿ)
ಸ್ವಾತಿ, ಮೈಸೂರು