ಸಾವು-ನೋವು ಸಂಭವಿಸಿರಲಿಲ್ಲ. ಆದರೆ, ಕಳೆದುಕೊಂಡವರರೋದನ ನಮ್ಮ ಮನೆಯಲ್ಲಿ ನಿತ್ಯ ಕೇಳಿಸುತ್ತಿತ್ತು. ಯಾಕೆಂದರೆ, ನಮ್ಮಮನೆ ಇದ್ದದ್ದೇ ಆಸ್ಪತ್ರೆ ಕ್ಯಾಂಪಸ್‌ನಲ್ಲಿ. ಆರೋದನ ಮಧ್ಯೆ ನಿತ್ಯ ಪತಿ ಕೆಲಸ ಮಾಡುತ್ತಿದ್ದರು.
ರಾತ್ರಿ ಆಸ್ಪತ್ರೆ ರೌಂಡ್ಸ್ ಮುಗಿಸಿಕೊಂಡು ಬಂದ ನಂತರ, “ಈ ಸೋಂಕಿತರಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಇವತ್ತುಸಾವಾಗಬಹುದು’ ಎಂದು ಹೇಳುತ್ತಿದ್ದರು.ಸಾವಿನ ಮುನ್ಸೂಚನೆಯಲ್ಲಿ ನಿದ್ದೆ ಇಲ್ಲದರಾತ್ರಿಗಳು. ಊಟಕ್ಕೆ ಕುಳಿತಾಗಲೇ ಕೈತೊಳೆದುಕೊಂಡು ಹೋದ ದಿನಗಳು. ಇವೆಲ್ಲವುಗಳಿಂದಅಕ್ಷರಶಃ ಆತಂಕದಲ್ಲಿ ದಿನ ಕಳೆದಿದ್ದೇವೆ. ಗುಣಮುಖರಾದವರ ಹಾರೈಕೆ ನಮಗೆ ಶ್ರೀರಕ್ಷೆ ಆಗಿತ್ತು.ಇವರನ್ನು (ಡಾ.ಲಕ್ಷ್ಮೀಪತಿ) ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದಾಗ ತುಂಬಾ ಆತಂಕಮನೆ ಮಾಡಿತ್ತು. ಆದರೆ, “ನಾವು ಜವಾಬ್ದಾರಿತೆಗೆದುಕೊಳ್ಳುವುದಿಲ್ಲ ಎನ್ನಬಾರದು. ನಾವು ಕೆಲಸಮಾಡಿ ಇನ್ನೊಬ್ಬರಿಗೆ ಮಾದರಿಯಾಗಬೇಕು’ ಎಂದು ನನಗೇ ಪತಿಧೈರ್ಯ ಹೇಳಿದರು.
ಸೋಂಕು ಇರುವ ಪ್ರದೇಶವನ್ನು ಸೀಲ್‌ಡೌನ್‌ಮಾಡಲಾಗುತ್ತಿತ್ತು. ಆಸ್ಪತ್ರೆ ಕ್ಯಾಂಪಸ್‌ನಲ್ಲಿದ್ದ ನಮಗೆ ಸಾಕಷ್ಟು ಭಯವಾಗುತ್ತಿತ್ತು.ಆಸ್ಪತ್ರೆ ಸಾವು ನೋವು ಸಂಬಂಧಿಗಳ ರೋದನ ಕಣ್ಮುಂದೆಅನುಭವಕ್ಕೆ ಬರುತ್ತಿತ್ತು. ಸೋಂಕಿತರಿಗೆ ಚಿಕಿತ್ಸೆ ನೀಡುವವರೇಇಷ್ಟೊಂದು ಧೈರ್ಯವಾಗಿದ್ದಾಗ, ನಾವು ಬೆಂಬಲ ಸೂಚಿಸಿದ್ದೆವು.ಸರ್ಕಾರಿ ಆಸ್ಪತ್ರೆಯಾಗಿ¨ರಿಂ¨ ª ಹಾಸಿಗೆ ಇಲ್ಲ,ಚಿಕಿತ್ಸೆ ಸೂಕ್ತವಾಗಿಲ್ಲ ಎಂಬ ಇತ್ಯಾದಿ ವಿಚಾರಕ್ಕೆ ಕರೆಗಳು ನಿತ್ಯ ಬರುತ್ತಿದ್ದವು. ರೋಗಿಗಳಸಂಬಂಧಿಗಳು ನೋವಿನಿಂದ ನಿಂದಿಸು ತ್ತಿದ್ದರು, ಕೆಟ್ಟ ಪದಗಳಿಂದ ಬೈಯುತ್ತಿದ್ದರು.
ಆಗ ಇವರು (ಡಾ.ಲಕ್ಷ್ಮೀಪತಿ) ರೋಗಿಯ ಆರೋಗ್ಯಮಾಹಿತಿಪಡೆದುಕರೆತರಲುಹೇಳುತ್ತಿದ್ದರು.”ಎಲ್ಲಿಯೂ ಹಾಸಿಗೆ ಇಲ್ಲ. ನಮ್ಮನ್ನು ನಂಬಿಬಂದಿದ್ದಾರೆ. ಹೆಚ್ಚುವರಿ ಹಾಸಿಗೆ ವ್ಯವಸ್ಥೆ ಮಾಡಿಕೊಟ್ಟು ಬರುತ್ತೇನೆ’ ಎಂದು ಓಡುತ್ತಿದ್ದರು. ಕಳೆದ ತಿಂಗಳು ಕೊರೊನಾ ಸೋಂಕುತಗುಲುವವರೆಗೂ ಒಂದು ದಿನವೂ ರಜೆ ಹಾಕಿ ವಿಶ್ರಾಂತಿ ಪಡೆದಿಲ್ಲ.ನಮ್ಮ ಸ್ನೇಹಿತರು, ಪರಿಚಯಸ್ಥರು ಬೇಗ ಮನೆಗೆ ಬರುವುದು , ರಜೆ ಪಡೆಯುವುದು, ಯಾವುದೇ ಜವಾಬ್ದಾರಿ ವಹಿಸಿಕೊಳ್ಳದೆ ಕುಟುಂಬ ದೊಟ್ಟಿಗೆ ಆರಾಮಾಗಿರುವುದನ್ನುನೋಡಿ ಬೇಸರದಿಂದಲೇ ಅನೇಕ ಬಾರಿ ನಮಗೆ ಯಾಕೆ ಅಂತಹ ಜೀವನ ಇಲ್ಲ ಎಂದು ಕೇಳಿದ್ದೇವೆ.
ಆಗ ಅವರು “ಬಾಲ್ಯದಿಂದಲೂ ಸರ್ಕಾರಿ ವ್ಯವಸ್ಥೆಯಲ್ಲಿ ಓದಿದ್ದೇನೆ, ನನಗೆ ಸರ್ಕಾರ ಅಭ್ಯಾಸಕ್ಕೆ ರಜೆ, ಕಾಲೇಜು ಶುಲ್ಕ ನೀಡಿಸ್ನಾತಕ ಪದವಿ ಓದಿಸಿದೆ. ಜನರ ಸೇವೆ ಮಾvುವ ಮೂಲಕ ಋಣತೀರಿಸುತ್ತಿದ್ದೇನೆ.ಬೇರೆಯವರುಖುಷಿಯಾಗಿಕಾಲ ಕಳೆಯುತ್ತಿದ್ದಾರೆ ಎಂದರೆ, ನಮ್ಮ ದಾರಿ, ಗುರಿಯೇ ಬೇರೆ, ಅವರದ್ದೇ ಬೇರೆ ಹೋಲಿಕೆಮಾಡಬಾರದು’ ಎಂದು ತಿಳಿಹೇಳಿ ಸಮಾಧಾನಪಡಿಸುತ್ತಿದ್ದರು.
(ಕೆ.ಸಿ.ಜನರಲ್ ಆಸ್ಪತ್ರೆಯ ಕೊರೊನಾಚಿಕಿತ್ಸೆ, ಲಸಿಕೆ ವಿತರಣೆ ನೋಡಲ್ ಅಧಿಕಾರಿ ಡಾ.ಲಕ್ಷ್ಮೀಪತಿ ಅವರ ಪತ್ನಿ)
ಲಕ್ಷ್ಮೀ .ಎಲ್