Advertisement

ವೈದ್ಯರು ಮಾನವೀಯ ಸೇವೆ ನೀಡಬೇಕು: ಬಿಷಪ್‌ ಸಲ್ಡಾನ್ಹಾ

01:00 AM Feb 24, 2019 | Harsha Rao |

ಮಂಗಳೂರು: ವೈದ್ಯರು ಮಾನವೀಯ ನೆಲೆಗಟ್ಟಿನಲ್ಲಿ ಸೇವೆ ನೀಡಬೇಕು. ಪ್ರೀತಿ, ಗೌರವಾದರಗಳಿಂದ ರೋಗಿಯೊಂದಿಗೆ ವ್ಯವಹರಿಸಿದಾಗ ರೋಗಿಯಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಮಂಗಳೂರು ಬಿಷಪ್‌ ಹಾಗೂ ಫಾದರ್‌ ಮುಲ್ಲರ್‌ ಚಾರಿಟೆಬಲ್‌ ಸಂಸ್ಥೆಗಳ ಅಧ್ಯಕ್ಷ ರೈ| ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ಅವರು ಅಭಿಪ್ರಾಯಪಟ್ಟರು.

Advertisement

ಅವರು ಶನಿವಾರ ನಡೆದ ಫಾದರ್‌ ಮುಲ್ಲರ್‌ ವೈದ್ಯಕೀಯ ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನಗಳ ಕಾಲೇಜು ಹಾಗೂ ಫಾದರ್‌ ಮುಲ್ಲರ್‌ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ಕಾಲೇಜಿನ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ವೈದ್ಯರು ದಿನದ ಇಪ್ಪತ್ತನಾಲ್ಕು ಗಂಟೆಯೂ ಸೇವೆಗೆ ಸದಾ ಸಿದ್ಧರಿರ ಬೇಕು. ರೋಗಿಗಳ ಸೇವೆಯಲ್ಲಿ ವೃತ್ತಿಯ
ತೃಪ್ತಿ ಪಡೆಯುವ ಮನೋಭಾವ ವೈದ್ಯರಿಗಿರಬೇಕು. ರೋಗಿಯಲ್ಲಿ ಸದಾ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದರೆ ಆತ ಶೀಘ್ರ ಗುಣಮುಖನಾಗಲು ಸಾಧ್ಯ. ಅದೇ ವೈದ್ಯರಿಗೆ ಸಂತೃಪ್ತ ಭಾವ ಎಂದು ಅವರು ಹೇಳಿದರು.

ಮಲೇಷ್ಯಾದ ಪೆರಡಾನ ವಿಶ್ವವಿದ್ಯಾ ನಿಲಯದ ಕುಲಪತಿ ಡಾ| ಝಬೀದಿ ಎ. ಎಂ. ಹುಸೈನ್‌ ಅವರು ಪದವಿ ಪ್ರದಾನ ಮಾಡಿ, ಪದವೀಧರರಿಗೆ ಶುಭ ಹಾರೈಸಿದರು.

ಫಾದರ್‌ ಮುಲ್ಲರ್‌ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗದಲ್ಲಿ 32, ಎಂಬಿ ಬಿಎಸ್‌ 153 ಸಹಿತ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಎಂಸಿಎಚ್‌, ಪಿಎಚ್‌ಡಿ, ಫಿಸಿಯೋಥೆರಪಿ, ಆಸ್ಪತ್ರೆ ಆಡಳಿತ, ವೈದ್ಯಕೀಯ ಪ್ರಯೋಗಾ ಲಯ ತಂತ್ರಜ್ಞಾನ, ಮೆಡಿಕಲ್‌ ಇಮೇ ಜಿಂಗ್‌ ಟೆಕ್ನಾಲಜಿ, ರೇಡಿಯೋಥೆರಪಿ ಸಹಿತ ಒಟ್ಟು 378 ಮಂದಿ ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು. ಪದವಿ ಪ್ರದಾನ ಸಂದರ್ಭ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪದವೀಧರರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. 

Advertisement

ಆಸ್ಪತ್ರೆಯ ಆಡಳಿತಾಧಿಕಾರಿ ವಂ| ರುಡಾಲ್ಫ್ ರವಿ ಡೆಸಾ, ವೈದ್ಯಕೀಯ ಕಾಲೇಜು ಆಡಳಿತಾಧಿಕಾರಿ ವಂ| ಅಜಿತ್‌ ಬಿ. ಮಿನೇಜಸ್‌, ತುಂಬೆ ಫಾದರ್‌ ಮುಲ್ಲರ್‌ ಆಸ್ಪತ್ರೆಯ ಆಡಳಿತಾಧಿಕಾರಿ ವಂ| ರೋಶನ್‌ ಕ್ರಾಸ್ತಾ, ಎಫ್‌ಎಂಎಂಸಿಎಚ್‌ ಸಹಾಯಕ ಆಡಳಿತಾಧಿಕಾರಿ ವಂ| ನೆಲ್ಸನ್‌ ಧೀರಜ್‌ ಪಾçಸ್‌, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಉದಯಕುಮಾರ್‌, ಡಾ| ಪದ್ಮಜಾ ಉದಯಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

ಫಾದರ್‌ ಮುಲ್ಲರ್‌ ಚಾರಿಟೆಬಲ್‌ ಇನ್‌ಸ್ಟಿಟ್ಯೂಶನ್‌ನ ನಿರ್ದೇಶಕ ಫಾ| ರಿಚರ್ಡ್‌ ಎ. ಕುವೆಲ್ಲೋ ಸ್ವಾಗತಿಸಿದರು. ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜಿನ ಡೀನ್‌ ಡಾ| ಜೆ. ಪಿ. ಆಳ್ವ, ಫಾದರ್‌ ಮುಲ್ಲರ್‌ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ಕಾಲೇಜಿನ ಪ್ರಾಂಶುಪಾಲ ಪ್ರೊ| ಅಖೀಲೇಶ್‌ ಪಿ. ಎಂ. ವಾರ್ಷಿಕ ವರದಿ ಮಂಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next