Advertisement

ಹೊಟ್ಟೆಯಲ್ಲಿ 1.5 ಕೆಜಿ ಆಭರಣಗಳು!

12:59 AM Jul 26, 2019 | Team Udayavani |

ಕೋಲ್ಕತಾ: ಮಾನಸಿಕ ಸ್ತಿಮಿತ ಕಳೆದುಕೊಂಡಿ ರುವ ಮಹಿಳೆಯೊಬ್ಬರ ಹೊಟ್ಟೆಯಲ್ಲಿ ವೈದ್ಯರಿಗೆ ಸಿಕ್ಕಿದ್ದೇನು ಗೊತ್ತಾ? ಬರೋಬ್ಬರಿ 1.5 ಕೆ.ಜಿ. ತೂಕದ ಆಭರಣಗಳು ಮತ್ತು ಕರೆನ್ಸಿ ನಾಣ್ಯಗಳು!

Advertisement

ಅಚ್ಚರಿಯಾದರೂ ಇದು ಸತ್ಯ. ಪಶ್ಚಿಮ ಬಂಗಾಲದ ಬಿಭೂìಮ್‌ ಜಿಲ್ಲೆಯ ಸರಕಾರಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಇವುಗಳನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. 5 ರೂ. ಮತ್ತು 10 ರೂ. ಮುಖಬೆಲೆಯ 90 ನಾಣ್ಯಗಳು, ಚಿನ್ನದ ಸರ, ಮೂಗುತಿ, ಓಲೆ, ಬಳೆಗಳು, ಕಾಲ್ಗೆಜ್ಜೆ ಮುಂತಾದ ಆಭರಣಗಳು 26 ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದವು. ಈ ಆಭರಣಗಳು ಕಂಚು, ತಾಮ್ರ ಮತ್ತು ಚಿನ್ನದ್ದಾಗಿವೆ ಎಂದು ವೈದ್ಯರು ಹೇಳಿದ್ದಾರೆ.

“ಮನೆಯಲ್ಲಿ ಆಭರಣ ಕಾಣೆಯಾಗುತ್ತಿತ್ತು. ಮಗಳನ್ನು ಕೇಳಿದರೆ ಆಕೆ ಉತ್ತರ ನೀಡದೇ ಅಳುತ್ತಿದ್ದಳು. ಹಲವಾರು ದಿನಗಳಿಂದ ಊಟ ಮಾಡುತ್ತಿರಲಿಲ್ಲ. ಆಕೆಯ ಮೇಲೆ ಎಷ್ಟೇ ನಿಗಾ ಇಟ್ಟರೂ ಆಕೆ ಇವುಗಳನೆಲ್ಲ ಸೇವಿಸಿದ್ದಾಳೆ’ ಎಂದು ರೋಗಿಯ ತಾಯಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next