Advertisement
ಕಿರಿಯ ವೈದ್ಯರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಅವರ ಉದ್ದೇಶಿಸಿ ಮಾತನಾಡಿ ಬಹಿಷ್ಕಾರ ಕೊನೆಗೊಳಿಸಿ ಕೆಲಸಕ್ಕೆ ಮರಳಲು ಮನವಿ ಮಾಡಿದರು. “ನಾನು ನಿಮ್ಮ ಅಕ್ಕನಂತೆ (ನಿಮ್ಮ ದೀದೀಯಾಗಿ ಇಲ್ಲಿಗೆ ಬಂದಿರುವೆ) ಇಲ್ಲಿಗೆ ಬಂದಿದ್ದೇನೆ ಹೊರತು ಮುಖ್ಯಮಂತ್ರಿಯಾಗಿ ಬಂದಿಲ್ಲ” ನೀವು ಕೊಟ್ಟಿರುವ ಬೇಡಿಕೆಗಳ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ನಿಶ್ಚಿತವಾಗಿ ತೆಗೆದುಕೊಳ್ಳುವೆ. ಈ ಬಿಕ್ಕಟ್ಟು ಶಮನಗೊಳಿಸಲು ಇದು ನನ್ನ ಕೊನೆಯ ಪ್ರಯತ್ನ, ನೀವು ಇಲ್ಲದೆ ಹಿರಿಯರು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಕಿರಿಯ ವೈದ್ಯರ ಮನವೊಲಿಸಲು ಪ್ರಯತ್ನಿಸಿದರು.
ನನ್ನ ಜೀವನದಲ್ಲಿ ನಾನು ಕೂಡ ಸಾಕಷ್ಟು ಹೋರಾಟ ಮಾಡಿದ್ದೇನೆ, ನಿಮ್ಮ ಹೋರಾಟ ನಾನು ಅರ್ಥಮಾಡಿಕೊಂಡಿದ್ದೇನೆ. ನನ್ನ ಸ್ಥಾನದ ಬಗ್ಗೆ ನನಗೆ ಚಿಂತೆಯಿಲ್ಲ. ನಿನ್ನೆ ರಾತ್ರಿಯಿಡೀ ಮಳೆ ಸುರಿಯಿತು, ನೀವು ಇಲ್ಲಿ ಪ್ರತಿಭಟನೆಗೆ ಕುಳಿತಿದ್ದೀರಿ, ನಾನು ರಾತ್ರಿಯಿಡೀ ನಿದ್ದೆ ಮಾಡಲಿಲ್ಲ. ನಿಮ್ಮ ಬೇಡಿಕೆಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಖಂಡಿತ ಪರಿಹಾರ ಕಂಡು ಕೊಳ್ಳುತ್ತೇನೆ. ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಖಂಡಿತ ಶಿಕ್ಷೆಯಾಗುತ್ತದೆ ಎಂದು ಹೇಳಿದರು.
Related Articles
Advertisement
“ನಾನು ನಿಮ್ಮಿಂದ ಸ್ವಲ್ಪ ಸಮಯ ಕೇಳುತ್ತಿದ್ದೇನೆ. ರಾಜ್ಯ ಸರ್ಕಾರವು ನಿಮ್ಮ ವಿರುದ್ಧ (ಪ್ರತಿಭಟಿಸುವ ವೈದ್ಯರು) ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಕೆಲಸಕ್ಕೆ ಮರಳಲು ನಿಮ್ಮನ್ನು ವಿನಂತಿಸುತ್ತೇನೆ. ಆಸ್ಪತ್ರೆಯ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಭದ್ರತೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳ ಪ್ರಾರಂಭಿಸಲಾಗಿದೆ. ಮುಂದೆಯೂ ಮಾಡಲಾಗುತ್ತದೆ” ಎಂದು ಬಂಗಾಳ ಸಿಎಂ ಮಮತಾ ಭರವಸೆ ನೀಡಿದರು.
ತುಂಬಾ ಅಗ್ಗದ ‘ನಾಟಕ’ ಎಂದು ಜರಿದ ಬಿಜೆಪಿಸಿಎಂ ಮಮತಾ ಬ್ಯಾನರ್ಜಿ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದರಿಂದ ಏನೂ ಬದಲಾಗಲಿಲ್ಲ. ಅವರ ಏನನ್ನೂ ಚರ್ಚಿಸಲಿಲ್ಲ. ಭೇಟಿಯಿಂದ ಯಾವುದೇ ವ್ಯತ್ಯಾಸವಿಲ್ಲ, ಮಮತಾ ಕೆಲವು ವಿಷಯಗಳ ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಇದು ತುಂಬಾ ಅಗ್ಗದ ‘ನಾಟಕ’ ಬಿಟ್ಟು ಬೇರೇನೂ ಅಲ್ಲ. ಏಕೆಂದರೆ ಪ್ರತಿಭಟನಾ ಸ್ಥಳಕ್ಕೆ ಬಂದು ಉಪನ್ಯಾಸ ನೀಡಿ ಹಿಂತಿರುಗಿದ್ದಾರೆ. ಅದರಿಂದ ಪ್ರಯೋಜನವೇನು? ಕನಿಷ್ಠ ಚರ್ಚೆಗಾದರೂ ಬರಬೇಕು ಎಂದು ಕೇಂದ್ರ ಸಚಿವ ಮತ್ತು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್ ಆಗ್ರಹಿಸಿದ್ದಾರೆ.