Advertisement

ಶಾಸಕರಾದ ಅನಿತಾ ಕುಮಾರಸ್ವಾಮಿಯವರಿಗೆ ಹೋಂ ಕ್ವಾರಂಟೈನ್ ಗೆ ವೈದ್ಯರ ಸಲಹೆ

04:46 PM Apr 17, 2021 | Team Udayavani |

ಬೆಂಗಳೂರು : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಕೋವಿಡ್-19 ಸೋಂಕು ದೃಢ ಪಟ್ಟಿರುವುದರಿಂದ ರಾಮನಗರ ಶಾಸಕರಾದ ಮತಿ ಅನಿತಾ ಕುಮಾರಸ್ವಾಮಿಯವರಿಗೆ ಹೋಂ ಕ್ವಾರಂಟೈನ್ ನಲ್ಲಿರಲು ವೈದ್ಯರು ಸಲಹೆ ನೀಡಿದ್ದಾರೆ.

Advertisement

ಶನಿವಾರ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಕೋವಿಡ್ ಪಾಸಿಟಿವ್ ದೃಢ ಪಟ್ಟಿತ್ತು.  ಈ ಹಿನ್ನಲೆಯಲ್ಲಿ ಕುಮಾರಸ್ವಾಮಿಯವರ ಪತ್ನಿ ಹಾಗೂ ರಾಮನಗದ ಶಾಸಕಿ ಅನಿತಾ ಕುಮಾರಸ್ವಾಮಿಯವರಿಗೆ ಮುಂಜಾಗ್ರತ ಕ್ರಮವಾಗಿ ವೈದ್ಯರು ಹೋಮ್ ಕ್ವಾರಂಟೈನ್  ನಲ್ಲಿರಲು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ಸೋನುಗೆ ಕೋವಿಡ್ ಪಾಸಿಟಿವ್:ಅನಾರೋಗ್ಯದಲ್ಲಿದ್ದರೂ ಸಹಾಯ ಹಸ್ತದ ಭರವಸೆ ನೀಡಿದ ನಟ    

ಕೋವಿಡ್ ಅತೀ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ಜೆಪಿ ನಗರದ ಗೃಹಕಛೇರಿ ಬಳಿಯೂ  ಸಾರ್ವಜನಿಕರ ಪ್ರವೇಶ ಬೇಡವೆಂದು ವೈದ್ಯರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಅನ್ಯತಾ ಭಾವಿಸದೆ ಕಾರ್ಯಕರ್ತರು ಮುಖಂಡರುಗಳು ಸಹಕರಿಸಬೇಕೆಂದು ಶಾಸಕಿ ಅನಿತಾ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.

ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೋವಿಡ್ ಸೊಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನ ಅನುಸರಿಸಬೇಕೆಂದು ಮನವಿ ಮಾಡುತ್ತೇನೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next