Advertisement
ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯ ಸರಕಾರಿ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಹಿರಿಯ ರೆಸಿಡೆಂಟ್ ವೈದ್ಯರ ಮಾಸಿಕ ಶಿಷ್ಯವೇತನ ಹೆಚ್ಚಳ ಮಾಡಲಾಗಿದೆ.
Related Articles
ಬೆಂಗಳೂರು: ರಾಜ್ಯ ಸರಕಾರ ಸ್ನಾತಕೋತ್ತರ ವೈದ್ಯಕೀಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುವ ವೈದ್ಯ ವಿದ್ಯಾರ್ಥಿಗಳು ಮತ್ತು ಸೀನಿಯರ್ ರೆಸಿಡೆಂಟ್ ವೈದ್ಯರ ಶಿಷ್ಯವೇತನವನ್ನು ಶೇ.25ರಷ್ಟು ಹೆಚ್ಚಿಸಿದ ಆದೇಶದ ಬೆನ್ನಲ್ಲೇ ಶುಕ್ರವಾರ ವೈದ್ಯ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂಪಡೆದಿದ್ದಾರೆ.
Advertisement
ರಾಜ್ಯದ ಸರಕಾರಿ ವೈದ್ಯಕೀಯ ಕಾಲೇಜುಗಳೊಂದಿಗೆ ಸಂಯೋಜಿತವಾಗಿರುವ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ತುರ್ತು ಅಲ್ಲದ ಸೇವೆಗಳನ್ನು ಸ್ಥಗಿತಗೊಳಿಸಿ ಆ. 12ರಿಂದ ಸ್ನಾತಕೋತ್ತರ ವೈದ್ಯಕೀಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುವ ವೈದ್ಯ ವಿದ್ಯಾರ್ಥಿಗಳು ಮತ್ತು ಸೀನಿಯರ್ ರೆಸಿಡೆಂಟ್ ವೈದ್ಯರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದರು.
ನಿರಂತರವಾಗಿ ನಡೆದ 12 ದಿನಗಳ ಪ್ರತಿಭಟನೆಯಲ್ಲಿ ರಾಜ್ಯಾದ್ಯಂತ 4 ಸಾವಿರ ವೈದ್ಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಸಂಘದ ಅಧ್ಯಕ್ಷ ಡಾ| ಸಿರೀಶ್ ಶಿವರಾಮಯ್ಯ ಮಾತನಾಡಿ, ಸ್ವೆ„ಪಂಡ್ ಅನ್ನು ಶೇ.100ಕ್ಕೆ ಏರಿಕೆ ಮಾಡುವಂತೆ ಬೇಡಿಕೆ ಇಡಲಾಗಿತ್ತು. ಪ್ರಸ್ತುತ ಸರಕಾರ ಶಿಷ್ಯ ವೇತನವನ್ನು ಶೇ.25ಕ್ಕೆ ಏರಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಡಲಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದ್ಯಲ್ಲಿ ಸ್ನಾತಕೋತ್ತರ 3,540, ಸೂಪರ್ ಸ್ಪೆಷಾಲಿಟಿ 445 ಮತ್ತು ಹಿರಿಯ ಸ್ಥಾನಿಕ 527 ಸೇರಿ ಒಟ್ಟು 4,312 ಸೀಟುಗಳು ಮಂಜೂರಾಗಿವೆ. ಶೇ. 100ರಷ್ಟು ಶಿಷ್ಯವೇತನ ಪರಿಷ್ಕರಣೆಗೆ ಈ ಸ್ಥಾನಿಕ ವೈದ್ಯರು ಬೇಡಿಕೆ ಇಟ್ಟಿದ್ದರು. ಅವರೊಂದಿಗೆ ಚರ್ಚಿಸಿ, ಶೇ.25 ಪರಿಷ್ಕರಿಸಲಾಗಿದೆ. -ಡಾ| ಶರಣ ಪ್ರಕಾಶ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ