ಕಾರವಾರ: ಭಟ್ಕಳದಲ್ಲಿ ಕೋವಿಡ್ 19 ವೈರಸ್ ಹರಡುವಿಕೆ ಆತಂಕ ಮನೆ ಮಾತಾಗಿರುವ ಸಂದರ್ಭದಲ್ಲಿ ಮನೆ ಬಾಗಿಲಿಗೆ ವೈದ್ಯರನ್ನು ಕಳಿಸಿ ಚಿಕಿತ್ಸೆ ಕೊಡಿಸುವ ವಿನೂತನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಈಗಾಗಲೇ ಭಟ್ಕಳವು ಸೋಂಕು ಹರಡುವ ಸೂಕ್ಷ್ಮಪ್ರದೇಶ ಆಗಿರುವ ಹಿನ್ನೆಲೆಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಅನಾರೋಗ್ಯ ಸಮಸ್ಯೆಗಳಿದ್ದವರಿಗೆ ಮನೆ ಬಾಗಿಲಿಗೆ ವೈದ್ಯರನ್ನು ಕಳಿಸಿ ಚಿಕಿತ್ಸೆ ನೀಡುವುದು ಜಿಲ್ಲಾಡಳಿತದ ಮುಖ್ಯ ಉದ್ದೇಶವಾಗಿದೆ.
ಮೊದಲು ಭಟ್ಕಳದಲ್ಲಿ ಈ ಯೋಜನೆ ಕೈಗೊಳ್ಳಾಗುತ್ತಿದ್ದು, ಅನಾರೋಗ್ಯದ ಸಮಸ್ಯೆಗಳಿದ್ದವರು ಮನೆಯಿಂದ ಹೊರಬರದೇ ಈ ಕೆಳಗೆ ನೀಡಿದ ವೈದ್ಯರ ಮೊಬೈಲ್ ಸಂಖ್ಯೆಗೆ ಕರೆಮಾಡಿ ಸಮಸ್ಯೆ ಹೇಳಿದಾಗ ವೈದ್ಯರು ಮನೆಗೆ ಬಂದು ಚಿಕಿತ್ಸೆ ನೀಡುವರು.
ಮಾ. 31ರಂದು ಡಾ| ಬಾಲಕೃಷ್ಣ ಮೊ: 9108881160, ಏ. 1ರಂದು ಡಾ| ವಿಶ್ವನಾಥ್ -9341893663, ಏ. 2ರಂದು ಡಾ| ನಾಜೀಮ್ ಖಾನ್ – 9916880146, ಏ. 3ರಂದು ಡಾ| ಯಾಸೀನ್ – 9449581195, ಏ. 4ರಂದು ಮೊಹಮದ್ ಸಮಿಉಲ್ಲಾ- 9663107039, ಏ. 5ರಂದು ಡಾ| ಗಣೇಶ ಪ್ರಭು-9343391811, ಏ. 6ರಂದು ಡಾ|ರಾಜೇಂದ್ರ – 9676538522, ಏ. 7ರಂದು ಡಾ| ಎಂ ಚೇತನ- 9480043563, ಏ. 8ರಂದು ಡಾ| ಶಿವಪ್ರಕಾಶ್- 9342384088, ಏ. 9 ರಂದು ಡಾ| ಸೈಯದ್ ಅಬ್ದುಲ್ ಖಾದರ್ – 7022859536, ಏ. 10ರಂದು ಡಾ| ಬಾಲಕೃಷ್ಣ- 9108881160, ಏ. 11 ರಂದು ಡಾ| ವಿಶ್ವನಾಥ್ -9341893663, ಏ. 12ರಂದು ಡಾ| ನಾಜೀಮ್ ಖಾನ್ – 9916880146, ಏ. 13ರಂದು ಡಾ|ಯಾಸೀನ್ – 9449581195, ಏ. 14ರಂದು ಮೊಹಮದ್ ಸಮಿಉಲ್ಲಾ- 9663107039 ಇವರನ್ನು ಸಂಪರ್ಕಿಸಿ ಅನಾರೋಗ್ಯ ಸಂಬಂಧಿತ ಸಮಸ್ಯೆಳಿಗೆ ಚಿಕಿತ್ಸೆ ಪಡೆಯಬಹುದಾಗಿದೆ.
ಈ ಯೋಜನೆಯನ್ನು ಮೊದಲು ಭಟ್ಕಳದಲ್ಲಿ ಪ್ರಾಯೋಗಿಕವಾಗಿ ಮಾಡಲಾಗುತ್ತಿದ್ದು, ಯಶಸ್ವಿ ಆದಲ್ಲಿ ಮತ್ತು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಲ್ಲಿ ಇದನ್ನು ಜಿಲ್ಲೆಯಾದ್ಯಂತ ವಿಸ್ತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ|ಹರೀಶ ಕುಮಾರ ತಿಳಿಸಿದ್ದಾರೆ.