ಆದರೂ ಅವರು ಮದುವೆಯಾಗುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಬಂಧುಮಿತ್ರರಿಗೆ ಹೇಳಿ, ಗೌಜಿಯ ಮದುವೆಯಾಗಬೇಕಾಗಿದ್ದವರು ಸರಳವಾಗಿ ಮದುವೆಯಾದರು.
ಇದು ಶ್ರೀಲಂಕಾ ಮೂಲಕ ವೈದ್ಯ ಅನ್ನಾಲನ್ ನವರತ್ನಂ (30) ಮತ್ತು ಜಾನ್ ಟಿಪ್ಪಿಂಗ್ (34) ಅವರ ಕಥೆ.
ಇಲ್ಲಿನ ಸೈಂಟ್ ಥಾಮಸ್ ಆಸ್ಪತ್ರೆಯ ವೈದ್ಯ-ನರ್ಸ್ ಮದುವೆಗೆ ಶ್ರೀಲಂಕಾ ಮತ್ತು ಉತ್ತರ ಐರೆಲಂಡ್‌ನಿಂದ ಕುಟುಂಬದವರು ಬರಬೇಕಿತ್ತು. ಆದರೆ ಬರಲಾಗಲಿಲ್ಲ. ಅಷ್ಟೇ ಅಲ್ಲ. ಒಂದು ಹಂತದಲ್ಲಿ ಮದುವೆಯೇ ರದ್ದಾಗುತ್ತದೆ ಎಂಬಲ್ಲಿವರೆಗೆ ಬಂದಿತ್ತಂತೆ. ಕಾರಣ ಇಬ್ಬರೂ ಕೋವಿಡ್ ವಿರುದ್ಧ ಹೋರಾಟದಲ್ಲಿದ್ದರು. ರೋಗಿಗಳ ಆರೈಕೆ-ಚಿಕಿತ್ಸೆಯಲ್ಲೇ ನಿರತರಾಗಿದ್ದರು. ಆದರೂ ಸ್ವಲ್ಪ ಬಿಡುವು ಮಾಡಿಕೊಂಡು ಆಸ್ಪತ್ರೆಯದ್ದೇ ಪುಟ್ಟ ಹಾಲ್‌ನಲ್ಲಿ ಮದುವೆಯಾಗಿದ್ದಾರೆ.
ಆಸ್ಪತ್ರೆಯಲ್ಲಿ ರೋಗಿಗಳ ಸೇವೆಯೊಂದಿಗೆ ಇವರು ಮದುವೆಯಾದ ಸುದ್ದಿ ಇದೀಗ ವೈರಲ್ ಆಗಿದೆ.
Advertisement