Advertisement
ಡಾ ವಿಜಯ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಅರೋಗ್ಯ ಇಲಾಖೆ ನೇತ್ರ ಶಸ್ತ್ರಚಿಕಿತ್ಸಕರಾಗಿ ನೇಮಿಸಿತ್ತು, ಆದರೆ ವಿಜಯ್ ಇನ್ನೂ ಅಗತ್ಯವಾದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದ ಕಾರಣ ಅವರ ಸ್ನಾತಕೋತ್ತರ ಕೋರ್ಸ್ ಅಪೂರ್ಣವಾಗಿತ್ತು ಈ ವಿಚಾರ ಗೊತ್ತಾಗುತ್ತಿದ್ದಂತೆ ಅಧಿಕಾರಿಗಳು ಶಸ್ತ್ರಚಿಕಿತ್ಸೆ ನಡೆಸದಂತೆ ಹೇಳಿದೆ. ಆದರೆ ಅಧಿಕಾರಿಗಳು ತಡೆ ತರುವ ಮೊದಲೇ ವಿಜಯ್ 44 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ್ದ ಎಂಬುದು ಬೆಳಕಿಗೆ ಬಂದಿದೆ.
Related Articles
ಹಿಸಾರ್ ಸಿವಿಲ್ ಆಸ್ಪತ್ರೆಯಲ್ಲಿ ನೇತ್ರ ವಿಭಾಗವು ಅರ್ಹ ಶಸ್ತ್ರಚಿಕಿತ್ಸಕರ ಕೊರತೆಯನ್ನು ಎದುರಿಸುತ್ತಿದೆ. ಒಂದು ಹಂತದಲ್ಲಿ ಮೂವರು ಶಸ್ತ್ರಚಿಕಿತ್ಸಕರನ್ನು ಹೊಂದಿದ್ದ ಆಸ್ಪತ್ರೆ ಬಳಿಕ ಮೂವರು ರಾಜೀನಾಮೆ ನೀಡಿ ಖಾಸಗಿ ಆಸ್ಪತ್ರೆಗಳಿಗೆ ಸೇರಿಕೊಂಡಿದ್ದಾರೆ, ಇತ್ತ ಶಸ್ತ್ರಚಿಕಿತ್ಸಕರ ಕೊರತೆಯನ್ನು ತುಂಬುವ ಧಾವಂತದಲ್ಲಿ, ಇಲಾಖೆಯು ಇನ್ನೂ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ಡಾ ವಿಜಯ್ ಅವರನ್ನು ಹಂಸಿ ಸಿವಿಲ್ ಆಸ್ಪತ್ರೆಯ ಅನುಭವಿ ನೇತ್ರ ಶಸ್ತ್ರಚಿಕಿತ್ಸಕ ಡಾ ಜ್ಯೋತಿ ಅವರ ಮೇಲ್ವಿಚಾರಣೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲು ನಿಯೋಜಿಸಿತು. ಏಪ್ರಿಲ್ ಮತ್ತು ಜುಲೈ ನಡುವೆ, ಡಾ. ಜ್ಯೋತಿ 27 ಶಸ್ತ್ರಚಿಕಿತ್ಸೆಗಳನ್ನು ನಡೆಸಿದರೆ, ಡಾ. ವಿಜಯ್ 44 ಶಸ್ತ್ರಚಿಕಿತ್ಸೆಗಳನ್ನು ನಡೆಸಿದರು. ಇದಾದ ಬಳಿಕ ಡಾ. ಜ್ಯೋತಿ ಬಡ್ತಿಗೊಂಡು ಬೇರೆಡೆಗೆ ವರ್ಗಾವಣೆಯಾದಾಗ ಡಾ. ವಿಜಯ್ ಅವರನ್ನು ಉಸ್ತುವಾರಿ ವಹಿಸಲಾಯಿತು. ಇದಾದ ಬಳಿಕ (NPCB) ಅಧಿಕಾರಿಗಳು ಡಾ.ವಿಜಯ್ ಅವರ ವಿದ್ಯಾರ್ಹತೆಯ ಪ್ರಮಾಣ ಪತ್ರ ಪರಿಶೀಲನೆ ನಡೆಸಿದ ವೇಳೆ ಸತ್ಯಂಶ ಹೊರಬಿದ್ದಿದೆ.
Advertisement
ಆರೋಗ್ಯ ಇಲಾಖೆಯ ಪ್ರತಿಕ್ರಿಯೆವಿಜಯ್ ಅವರ ಪರೀಕ್ಷೆಗಳು ಇನ್ನೂ ಬಾಕಿ ಉಳಿದಿರುವುದರಿಂದ ಅದನ್ನು ಪೂರ್ಣ ಗೊಳಿಸಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಹಿಸಾರ್ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಸಪ್ನಾ ಗೆಹ್ಲಾವತ್ ಖಚಿತಪಡಿಸಿದ್ದಾರೆ. ಕಣ್ಣಿನ ವಿಭಾಗದಲ್ಲಿ ಹೊರರೋಗಿ ಸೇವೆಗಳನ್ನು ನಿರ್ವಹಿಸಲು ಅಗ್ರೋಹ ವೈದ್ಯಕೀಯ ಕಾಲೇಜಿನ ವೈದ್ಯರನ್ನು ನಿಯೋಜಿಸಲಾಗಿದೆ. ವಿಜಯ್ ಅವರು ತಮ್ಮ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ, ಅವರು ಅಗತ್ಯ ರಾಜ್ಯ ಅನುಮೋದನೆಯೊಂದಿಗೆ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಅರ್ಹರಾಗಿರುತ್ತಾರೆ ಎಂದು ಡಾ ಗೆಹ್ಲಾವತ್ ಭರವಸೆ ನೀಡಿದ್ದಾರೆ.