Advertisement

ಗೋರಖ್ ಪುರ್ ದುರಂತ; 2 ವರ್ಷದ ಬಳಿಕ ಡಾ.ಕಫೀಲ್ ಖಾನ್ ಗೆ ಕ್ಲೀನ್ ಚಿಟ್

08:38 AM Sep 28, 2019 | Team Udayavani |

ಲಕ್ನೋ:ಉತ್ತರಪ್ರದೇಶದ ಗೋರಖ್ ಪುರದ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಸುಮಾರು 60 ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷದ ಹಿಂದೆ ಸೇವೆಯಿಂದ ಅಮಾನತುಗೊಂಡು, ಬಂಧಿಸಿಲ್ಪಟ್ಟಿದ್ದ ವೈದ್ಯ ಡಾ.ಕಫೀಲ್ ಖಾನ್ ಅವರ ಮೇಲಿನ ಎಲ್ಲಾ ಆರೋಪದಿಂದ ಮುಕ್ತಗೊಳಿಸಿ ಸರಕಾರ ವರದಿ ಸಲ್ಲಿಸಿದೆ.

Advertisement

ಮಕ್ಕಳ ತಜ್ಞ ಡಾ.ಕಫೀಲ್ ಖಾನ್ ಗೋರಖ್ ಪುರದ ಬಿಆರ್ ಡಿ ಮೆಡಿಕಲ್ ಕಾಲೇಜಿನಲ್ಲಿ 2017ರ ಆಗಸ್ಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕೇವಲ ಎರಡೇ ದಿನದಲ್ಲಿ 63 ಮಕ್ಕಳು ಸಾವನ್ನಪ್ಪಿದ್ದರು. ಆಮ್ಲಜನಕದ ಕೊರತೆಯಿಂದ ಮಕ್ಕಳು ಸಾವನ್ನಪ್ಪಿದ್ದು, ಇದು ಕಫೀಲ್ ಖಾನ್ ನಿರ್ಲಕ್ಷ್ಯ ಎಂದು ಆರೋಪಿಸಲಾಗಿತ್ತು.

ಘಟನೆ ನಂತರ ಆಸ್ಪತ್ರೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ನೀಡಿ, ಡಾ.ಕಫೀಲ್ ಖಾನ್ ಅವರನ್ನು ಅಮಾನತುಗೊಳಿಸಿದ್ದರು. ಸೂಕ್ತ ವ್ಯವಸ್ಥೆ ಕೈಗೊಳ್ಳಲು ಖಾನ್ ವಿಫಲರಾಗಿರುವುದಾಗಿ ಯೋಗಿ ಸರಕಾರ ದೂರಿತ್ತು. ಈ ಪ್ರಕರಣದಲ್ಲಿ ಡಾ.ಖಾನ್, ಮೆಡಿಕಲ್ ಕಾಲೇಜಿನ ಮಾಜಿ ಪ್ರಿನ್ಸಿಪಾಲ್ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ 2017ರ ಸೆಪ್ಟಂಬರ್ 2ರಂದು ಡಾ.ಕಫೀಲ್ ಖಾನ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಸುಮಾರು 8 ತಿಂಗಳ ಬಳಿಕ(2018ರ ಏಪ್ರಿಲ್) ಡಾ.ಕಫೀಲ್ ಖಾನ್ ಗೆ ಅಲಹಬಾದ್ ಹೈಕೋರ್ಟ್ ಜಾಮೀನು ನೀಡಿತ್ತು. ಇದೀಗ ಯುಪಿ ಸರಕಾರ 15 ಪುಟಗಳ ತನಿಖಾ ವರದಿಯನ್ನು ಡಾ.ಕಫೀಲ್ ಖಾನ್ ಅವರಿಗೆ ಹಸ್ತಾಂತರಿಸಿದೆ. ಅಷ್ಟೇ ಅಲ್ಲ ಡಾ.ಖಾನ್ ಆರೋಪದ ವಿರುದ್ಧ ತನಿಖೆ ನಡೆಸಿದ್ದ ಐಎಎಸ್ ಅಧಿಕಾರಿ ಹಿಮಾಂಶು ಕುಮಾರ್ ಅವರಿಗೆ 2019ರ ಏಪ್ರಿಲ್ ನಲ್ಲಿಯೇ ಉತ್ತರ ಪ್ರದೇಶ ಸರಕಾರ ಹಸ್ತಾಂತರಿಸಿತ್ತು.

ಎರಡು ವರ್ಷಗಳ ಬಳಿಕ ನನಗೆ ಈ ವರದಿ, ಸುದ್ದಿ ಕೇಳಿ ತುಂಬಾ ಖುಷಿಯಾಯ್ತು. ಇಡೀ ಕುಟುಂಬವೇ ಸಂತಸ ವ್ಯಕ್ತಪಡಿಸಿದೆ ಎಂದು ಡಾ.ಕಫೀಲ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆಯಾಗಿದ್ದರು, ನನ್ನ ತಂಡ 54 ಗಂಟೆಗಳಲ್ಲಿ 500 ಸಿಲಿಂಡರ್ ಗಳನ್ನು ಪೂರೈಕೆ ಮಾಡಿತ್ತು. ಹೌದು ಆದರೆ ಸಿಲಿಂಡರ್ ಕೊರತೆ ಇದ್ದಿತ್ತು, ಅದಕ್ಕೆ ಕಾರಣ ಯೋಗಿ ನೇತೃತ್ವದ ಸರಕಾರ ಸಿಲಿಂಡರ್ ಪೂರೈಕೆ ಮಾಡುತ್ತಿದ್ದ ವೆಂಡರ್ ಗೆ ಹಣ ಪಾವತಿ ಮಾಡಿರಲಿಲ್ಲ. ನನ್ನ ಎರಡು ವರ್ಷಗಳ ಬಳಿಕ ನಿರ್ದೊಷಿ ಎಂದು ಸರಕಾರ ಹೇಳಿದೆ, ಹಾಗಾದರೆ ನಿಜವಾದ ಆರೋಪಿಗಳನ್ನು ಈವರೆಗೂ ಯಾಕೆ ಬಂಧಿಸಿಲ್ಲ ಎಂದು ಖಾನ್ ಪ್ರಶ್ನಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next