Advertisement
ತೀವ್ರ ಜ್ವರದಿಂದ ಬಳಲುತ್ತಿದ್ದ 12 ವರ್ಷದ ಬಾಲಕಿಯೊಬ್ಬಳು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದಳು. ಅಲ್ಲಿಯ ವೈದ್ಯರು ಬಾಲಕಿಗೆ ಡೆಂಘೀ ಇರಬಹುದೆಂದು ಶಂಕಿಸಿದ್ದರು. ತಕ್ಷಣ ಪೋಷಕರು ಬಾಲಕಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ವೈದ್ಯ ಡಾ.ಸೈಯದ್ ಮೀರ್ ಮೊಹಮ್ಮದ್ ಖಾಸಗಿ ಆಸ್ಪತ್ರೆಯ ವೈದ್ಯರ ವರದಿ ನೋಡದೇ ಬಾಲಕಿಯ ಕೈ ಹಿಡಿದು ಪರೀಕ್ಷೆ ಮಾಡಿ ಗರ್ಭಿಣಿ ಎಂದು ಹೇಳಿದ್ದಾರೆ. ಇದರಿಂದ ವಿಚಲಿತಗೊಂಡ ಪೋಷಕರು ಸರಿಯಾಗಿ ತಪಾಸಣೆ ಮಾಡುವಂತೆ ಮನವಿ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ವೈದ್ಯ “ಇದು ನಿಮ್ಮಪ್ಪನ ಆಸ್ಪತ್ರೆಯಲ್ಲ, ಹೊರಗೆ ಹೋಗಿ’ ಎಂದು ಕೂಗಾಡಿದ್ದರು. ವೈದ್ಯರ ವರ್ತನೆಯಿಂದ ಹಾಗೂ ಸರಿಯಾಗಿ ತಪಾಸಣೆ ನಡೆಸದ್ದರಿಂದ ನೊಂದ ಪೋಷಕರು ಆಸ್ಪತ್ರೆ ನಿರ್ದೇಶಕರು ಹಾಗೂ ಜಿಲ್ಲಾ ಧಿಕಾರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಸಿಮ್ಸ್ ಆಡಳಿತ ಮಂಡಳಿ ವೈದ್ಯರಿಂದಉತ್ತರ ಕೇಳಿತ್ತು. ಆದರೆ ಇದಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಬುಧವಾರ ಅರೆಕಾಲಿಕ ವೈದ್ಯ ಡಾ. ಸೈಯದ್ ಮೀರ್ ಮೊಹಮ್ಮದ್‌ರನ್ನು ವಜಾ ಮಾಡಿ ಆದೇಶಿಸಿದೆ. ಪ್ರಕರಣ ಸಂಬಂಧ ಪರಿಶೀಲನೆ ಮುಂದುವರಿಯಲಿದೆ ಎಂದು ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ
ಸತ್ಯನಾರಾಯಣ ತಿಳಿಸಿದ್ದಾರೆ.