Advertisement

OBC ಸಿಎಂ ಬೇಕೋ, ಮನೆಮಗನೋ?- ಸಿಎಂ ಕೆಸಿಆರ್‌ ವಿರುದ್ಧ ತೊಡೆತಟ್ಟಿದ ಈಟೆಲ ರಾಜೇಂದರ್‌

12:55 AM Nov 11, 2023 | Team Udayavani |

ಹೊಸದಿಲ್ಲಿ: “ತೆಲಂಗಾಣದಲ್ಲಿ ಈ ಬಾರಿ ಹಿಂದುಳಿದ ವರ್ಗದ ನಾಯಕರನ್ನೇ ಮುಖ್ಯಮಂತ್ರಿ ಹುದ್ದೆ ಗೇರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರೇ ಘೋಷಿಸಿದ್ದಾರೆ. ಹಾಗಾಗಿ ಇಲ್ಲಿ ಬಿಜೆಪಿ ಗೆದ್ದರೆ ನಾನೇ ಸಿಎಂ”.

Advertisement

ಇದು ತೆಲಂಗಾಣದಲ್ಲಿ ನೇರವಾಗಿ ಬಿಆರ್‌ಎಸ್‌ ಅಧ್ಯಕ್ಷ, ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ವಿರುದ್ಧ ಗಜ್ವೇಲ್‌ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಬಿಜೆಪಿ ನಾಯಕ ಈಟೆಲ ರಾಜೇಂದರ್‌ ಅವರ ಭರವಸೆಯ ಮಾತುಗಳು.

“ಒಬಿಸಿ ಸಮುದಾಯದವರೇ ಸಿಎಂ’ ಎಂಬ ಬಿಜೆಪಿಯ ಘೋಷಣೆಯು ರಾಜೇಂದರ್‌ ಅವರ ಕನಸಿಗೆ ರೆಕ್ಕೆಪುಕ್ಕ ಮೂಡಿಸಿದ್ದು, ರಾಜ್ಯಾದ್ಯಂತ “ನಾನೇ ಸಿಎಂ’ ಎಂದು ಹೇಳಿಕೊಂಡು ಅವರು ಹಿಂದುಳಿದ ವರ್ಗವನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಹುಜೂರಾಬಾದ್‌ ಕ್ಷೇತ್ರದಲ್ಲಿ ಸತತ 7 ಬಾರಿ ಗೆದ್ದಿರುವ ರಾಜೇಂದರ್‌, ತನ್ನ ಒಂದು ಕಾಲದ ಆಪ್ತರಾದ ಕೆಸಿಆರ್‌ ವಿರುದ್ಧ ತೊಡೆ ತಟ್ಟಿದ್ದಾರೆ. ಇವರಿಬ್ಬರ ನಡುವಿನ ಚುನಾ ವಣ ಕದನವು ಕುತೂಹಲಕಾರಿ “ಪ್ರತೀಕಾರದ ಪಂದ್ಯ’ವಾಗಿ ಮಾರ್ಪಟ್ಟಿದೆ.

ಸ್ವಾತಂತ್ರ್ಯದ ಬಳಿಕ ಅವಿಭಜಿತ ಆಂಧ್ರವಾಗಲೀ, ಈಗಿನ ತೆಲಂಗಾಣವಾಗಲೀ ಒಮ್ಮೆಯೂ ಒಬಿಸಿ ನಾಯಕನನ್ನು ಸಿಎಂ ಕುರ್ಚಿಯಲ್ಲಿ ಕಂಡಿಲ್ಲ. ಈ ಬಾರಿ ತೆಲಂಗಾಣವು ಒಬಿಸಿ ಸಿಎಂ ಅನ್ನು ನೋಡಲಿದೆ ಎನ್ನುತ್ತಾರೆ ಈಟೆಲ ರಾಜೇಂದರ್‌.

ಇನ್ನೊಂದೆಡೆ, ಗಜ್ವೇಲ್‌ ಕ್ಷೇತ್ರವು ಕೆಸಿಆರ್‌ ಅವರ ಭದ್ರಕೋಟೆ. “ಪೆದ್ದ ಕೊಡುಕು’ (ಹಿರಿಯ ಮಗ) ಬಗ್ಗೆ ಗಜ್ವೇಲ್‌ ಕ್ಷೇತ್ರದ ಮತದಾರರಿಗೂ ಅಪಾರ  ಒಲವಿದೆ. ಸಿಎಂ ಕ್ಷೇತ್ರವಾದ ಕಾರಣ ಮೂಲಸೌಕರ್ಯಗಳು ಸೇರಿದಂತೆ ಹಲ ವಾರು ಅಭಿವೃದ್ಧಿ ಕಾಮಗಾರಿಗಳನ್ನು ಗಜ್ವೇಲ್‌ ಕಂಡಿದೆ. ಕೆಸಿಆರ್‌ ಅವರ ಅನುಪಸ್ಥಿತಿಯನ್ನು ಹೊರತು ಪಡಿಸಿದರೆ ಉಳಿದಂತೆ ಎಲ್ಲವೂ ಓಕೆ ಎನ್ನುತ್ತಾರೆ ಇಲ್ಲಿನ ಜನ. ಸತತ 2 ಬಾರಿ ಇಲ್ಲಿ ಕೆಸಿಆರ್‌ ಗೆದ್ದಿ ದ್ದಾರೆ. ಅಲ್ಲದೇ 1983ರಿಂದಲೇ ಈವರೆಗೆ ಯಾವ ಚುನಾವಣೆಯಲ್ಲೂ ಸೋತಿದ್ದಿಲ್ಲ.

Advertisement

ಗಜ್ವೇಲ್‌ ಕ್ಷೇತ್ರದಲ್ಲಿ ಶೇ.65ರಷ್ಟು ಮತ ದಾರರು ಹಿಂದುಳಿದ ವರ್ಗಕ್ಕೆ ಸೇರಿದವರು. ಈ ಮತಗಳು ಬಿಜೆಪಿಯ “ಒಬಿಸಿ ಸಿಎಂ’ ಕಡೆ ವಾಲು ತ್ತದೋ ಅಥವಾ ನಮಗೆ “ಪೆದ್ದ ಕೊಡುಕು’ ವೇ ಸಾಕು ಎನ್ನುತ್ತದೋ ಕಾದು ನೋಡಬೇಕು.

59 ಕೋಟಿ ರೂ. ಆಸ್ತಿ: ತೆಲಂಗಾಣ ಸಿಎಂ ಕೆಸಿಆರ್‌ ಅವರು ತಮ್ಮ ಕುಟುಂಬದ ಆಸ್ತಿ ಮೌಲ್ಯ 59 ಕೋಟಿ ರೂ. ಎಂದು ಘೋಷಿಸಿ ದ್ದಾರೆ. ಗುರುವಾರ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿ ರುವ ಅಫಿದವಿತ್‌ನಲ್ಲಿ ಈ ವಿವರ ನೀಡಿದ್ದಾರೆ. ಪತ್ನಿ ಶೋಭಾ ಹೆಸರಲ್ಲಿ 7 ಕೋಟಿ ರೂ., 2.81 ಕೆ.ಜಿ. ಚಿನ್ನ, 1.5 ಕೋಟಿ ರೂ. ಮೌಲ್ಯದ ವಜ್ರಾಭರಣ ಇವೆ ಎಂದೂ ತಿಳಿಸಿ ದ್ದಾರೆ. ತಮ್ಮ ವಿರುದ್ಧ 9 ಕೇಸುಗಳು ಇತ್ಯರ್ಥ ವಾಗಲು ಬಾಕಿ ಇರುವುದಾಗಿ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್‌ ಘೋಷಣೆ: ಶುಕ್ರವಾರ ತೆಲಂಗಾಣ ದಲ್ಲಿ ಕಾಂಗ್ರೆಸ್‌ “ಅಲ್ಪಸಂಖ್ಯಾಕ ಘೋಷಣ ಪತ್ರ’ ಬಿಡುಗಡೆ ಮಾಡಿದೆ. ಅದರಂತೆ ಅಲ್ಪ ಸಂಖ್ಯಾಕರ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ 4 ಸಾವಿರ ಕೋಟಿ ರೂ. ವಾರ್ಷಿಕವಾಗಿ ಮೀಸಲಿಡುವು ದಾಗಿ ಘೋಷಿಸಿದೆ. ಅಧಿಕಾರಕ್ಕೆ ಬಂದ 6 ತಿಂಗಳುಗಳಲ್ಲೇ ಜಾತಿಗಣತಿ ನಡೆಸಲಾಗುವುದು, ಎಂಫಿಲ್‌ ಮತ್ತು ಪಿಎಚ್‌.ಡಿ ಪೂರ್ಣಗೊಳಿಸುವ ಮುಸ್ಲಿಂ, ಕ್ರಿಶ್ಚಿಯನ್‌, ಸಿಕ್ಖ್ ಹಾಗೂ ಇತರ ಅಲ್ಪಸಂಖ್ಯಾಕ ಯುವಜನರಿಗೆ 5 ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿಯೂ ಭರವಸೆ ನೀಡಿದೆ.

253 ಅಭ್ಯರ್ಥಿಗಳು ಕೋಟ್ಯಧಿಪತಿಗಳು
ಇದೇ 17ರಂದು ಛತ್ತೀಸ್‌ಗಢದ 2ನೇ ಹಂತದ ಮತದಾನ ನಡೆಯಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಒಟ್ಟು 253 ಮಂದಿ ಕೋಟ್ಯಧಿಪತಿಗಳಂತೆ! ಅದರಲ್ಲೂ ಡಿಸಿಎಂ ಮತ್ತು ಕಾಂಗ್ರೆಸ್‌ ಹಿರಿಯ ನಾಯಕ ಟಿ.ಎಸ್‌. ಸಿಂಗ್‌ ದೇವ್‌ ಅವರು ಬರೋಬ್ಬರಿ 447 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ. 2ನೇ ಹಂತದಲ್ಲಿ ಒಟ್ಟು 958 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಪ್ರತೀ ಅಭ್ಯರ್ಥಿಯ ಸರಾಸರಿ ಆಸ್ತಿ 2 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಒಂದು ದಿನದಲ್ಲಿ ಪ್ರಧಾನಿ ಮೋದಿ ಲಕ್ಷಾಂತರ ರೂ.ಗಳ ಸೂಟ್‌ ಧರಿಸುತ್ತಾರೆ. ಅವರು ಎಂದಾದರೂ ಒಮ್ಮೆ ಧರಿಸಿದ ಸೂಟ್‌ ಅನ್ನೇ ಮತ್ತೂಮ್ಮೆ ಧರಿಸಿದ್ದನ್ನು ನೋಡಿದ್ದೀರಾ? ಅವರಿಗೆ ದಿನಕ್ಕೆ ಕನಿಷ್ಠ 1-2 ಉಡುಗೆ ಬೇಕು. ಆದರೆ ನಾನು ಕೇವಲ ಬಿಳಿ ಟಿಶರ್ಟ್‌ ಮಾತ್ರ ಧರಿಸುತ್ತೇನೆ.
ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಕಡಕ್‌ನಾಥ್‌ ಕೋಳಿಗೆ ಹೆಚ್ಚಿದ ಬೇಡಿಕೆ!
ಮಧ್ಯಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿರುವಂತೆ ಪ್ರೊಟೀನ್‌ಯುಕ್ತ ಮತ್ತು ಕೊಬ್ಬಿನಂಶ ಕಡಿಮೆಯಿರುವ ಕಡಕ್‌ನಾಥ್‌ ಕೋಳಿಗೆ ಭಾರೀ ಬೇಡಿಕೆ ಬಂದಿದೆಯಂತೆ! ನ.17ರಂದು ಇಲ್ಲಿ ಚುನಾವಣೆ ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ಈ ತಳಿಯ ಕೋಳಿಗೆ ಬೇಡಿಕೆ ಶೇ.30-40ರಷ್ಟು ಹೆಚ್ಚಳವಾಗಿದೆ. ಇದನ್ನು ಕಪ್ಪು ಮಾಂಸವಿರುವ ಕೋಳಿ ಎನ್ನುತ್ತಾರೆ. ಜಬುವಾ ಪ್ರದೇಶದಲ್ಲಿ ಭಿಲ್‌ ಎಂಬ ಬುಡಕಟ್ಟು ಜನಾಂಗೀಯರು ಭಾರೀ ಸಂಖ್ಯೆಯಲ್ಲಿದ್ದಾರೆ. ಶುಭ ಸಮಾರಂಭ, ಪೂಜೆ ಮತ್ತಿತರ ವಿಧಿ ವಿಧಾನಗಳಿಗೆ ಕೋಳಿ ಬಲಿಕೊಡುವುದು ಇವರ ಸಂಪ್ರದಾಯ. ಚುನಾವಣೆ ಹತ್ತಿರ ಬರುತ್ತಿರುವಂತೆ ಕೋಳಿ ಮಾಂಸದ ಬೆಲೆ 1,200ರಿಂದ 1,500ರೂ.ವರೆಗೆ ತಲುಪಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ಪೆಟ್ರೋಲ್‌, ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರ ಸರಕಾರ ಬಯಸಿತ್ತು. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್‌ ಇಬ್ಬಗೆಯ ನೀತಿ ಅನುಸರಿಸುತ್ತಿದೆ. ನಿಜಕ್ಕೂ ಪ್ರಿಯಾಂಕಾ ವಾದ್ರಾ ಅವರನ್ನು ಇದನ್ನು ಬಯಸುತ್ತಿದ್ದಾರೆಂದರೆ, ಕಾಂಗ್ರೆಸ್‌ ಆಡಳಿತದ ರಾಜ್ಯಗಳಲ್ಲಿ ಜಾರಿ ಮಾಡಲಿ.
ನಿರ್ಮಲಾ ಸೀತಾರಾಮನ್‌, ಕೇಂದ್ರ ವಿತ್ತ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next