Advertisement
ಕೋವಿಡ್ ಸೋಂಕಿನ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ವೇಳೆ ನಾವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಬೇಕಾಗುತ್ತದೆ. ಕೋವಿಡ್ ಸೋಂಕಿಗೆ ರಾಮ ಬಾಣ ಅಂದರೆ ಮೊದಲು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಬೇಕಾಗಿದೆ. ಹಾಗಾದ್ರೆ ಈ ರೋಗ ನಿರೋಧಕತೆಯನ್ನು ಹೆಚ್ಚಿಸಲು ಯಾವೆಲ್ಲ ಜ್ಯೂಸ್ ಕುಡಿಯಬೇಕು ಎಂಬ ಮಾಹಿತಿ ಈ ಕೆಳಗಿನಂತೆ ಇದೆ. ಈ ವಿಧದ ಜ್ಯೂಸ್ ಕುಡಿದರೆ ನಮ್ಮಲ್ಲಿನ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ.
Related Articles
Advertisement
ಬಿಟ್ ರೂಟ್, ಕ್ಯಾರೆಟ್ : ಈ ತರಕಾರಿಗಳಿಂದ ಮಾಡಿದ ಜ್ಯೂಸ್ಗಳು ರೋಗನಿರೋಧ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಉರಿಯೂತದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಈ ಮೂರು ತರಕಾರಿಯಿಂದ ಮಾಡಿದ ಜ್ಯೂಸ್ಗಳು ಸೋಂಕು ಅಥವಾ ಬ್ಯಾಕ್ಟೀರಿಯಾದಿಂದ ಹುಟ್ಟುವ ಶೀತ ಅಥವಾ ಜ್ವರ, ಕೆಮ್ಮು ಮತ್ತು ದೇಹದಲ್ಲಿ ಕಾಣಿಸಿಕೊಳ್ಳುವ ನೋವನ್ನು ಕಡಿಮೆ ಮಾಡುತ್ತದೆ. ಸಂಧಿವಾತ ಹೊಂದಿರುವ ಜನರಿಗೆ ಇದು ಹೆಚ್ಚು ಉಪಕಾರಿಯಾಗಿದೆ.
ಟೊಮೆಟೊ : ತಾಜಾ ಟೊಮೆಟೊ ರಸ ಮತ್ತು ಯಾವುದೇ ಅಪಾಯಕಾರಿ ಅಂಶಗಳು ಇದರಲ್ಲಿ ಮಿಶ್ರಣವಾಗಿಲ್ಲ ಎನ್ನುವುದನ್ನು ಯೋಚಿಸುವ ನಿಟ್ಟಿನಲ್ಲಿ ಹೇಳುವುದಾದರೆ ಸತಃ ನಾವೇ ಮನೆಯಲ್ಲಿ ಸರಳ ವಿಧಾನದ ಮೂಲಕ ಟೊಮೆಟೊ ಜ್ಯೂಸ್ ಮಾಡಬಹುದಾಗಿದೆ. ಯಾವುದೇ ಜ್ಯೂಸರ್ ಅಥವಾ ಬ್ಲೆಂಡರ್ ಬಳಸದೆ ಟೊಮೆಟೊ ಹಣ್ಣಿನ ಬೀಜವನ್ನು ತೆಗೆದು ಜ್ಯೂಸ್ ಮಾಡಬಹುದಾಗಿದೆ. ಟೊಮೆಟೊನಲ್ಲಿ ವಿಟಮಿನ್ ಬಿ -9 ಸಮೃದ್ಧವಾಗಿದ್ದು, ಇದನ್ನು ಸಾಮಾನ್ಯವಾಗಿ ಫೋಲೇಟ್ ಎಂದು ಕರೆಯಲಾಗುತ್ತದೆ. ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಲ್ಲಂಗಡಿ : ಕಲ್ಲಂಗಡಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸ್ನಾಯುಗಳ ನೋವನ್ನು ನಿವಾರಿಸಲು ಕೂಡ ಸಹಾಯ ಮಾಡುತ್ತದೆ. ಸ್ನಾಯುಗಳ ನೋವು ಜ್ವರಕ್ಕೆ ಸಾಮಾನ್ಯ ಲಕ್ಷಣವಾಗಿದೆ, ವಿಶೇಷವಾಗಿ ವಯಸ್ಸಾದವರಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳುತ್ತದೆ. ಕಲ್ಲಂಗಡಿ ಹಣ್ಣನ್ನು ಸೇಬು ಮತ್ತು ಕಿತ್ತಳೆಯಂತಹ ಇತರ ಹಣ್ಣುಗಳ ಜೊತೆ ಕೂಡ ಸೇವಿಸಬಹುದು.
ಸೊಪ್ಪು : ವಿವಿಧ ಸೊಪ್ಪುಗಳನ್ನು ಬಳಸಿಕೊಂಡು ಜ್ಯೂಸ್ ಮಾಡಿ ಕುಡಿಯುವುದರಿಂದ ಕೂಡ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಹೆಚ್ಚು ಶಕ್ತಿಯನ್ನು ಕೂಡ ನೀಡುತ್ತದೆ. ಜೊತೆಗೆ ಸೊಪ್ಪಿನ ರಸ ಕುಡಿಯುವುದರಿಂದ ಉತ್ಸಾಹ ಕೂಡ ಹೆಚ್ಚುತ್ತದೆ.