Advertisement

ಪಾಕ್‌ ನಲ್ಲಿ ಚಿನ್ನ ದರ ಎಷ್ಟು ಗೊತ್ತಾ? ಕೇಳಿದರೆ ನೀವು ಶಾಕ್ ಆಗ್ತೀರಾ

08:23 AM Aug 12, 2019 | Sriram |

ಇಸ್ಲಾಮಾಬಾದ್: ಇತ್ತೀಚೆಗೆ ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸಿದ್ದ ಪಾಕ್‌ ನ ಆರ್ಥಿಕತೆ ಬಹುತೇಕ ಕುಸಿದಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಅಧಿಕಾರವನ್ನು ಹಿಂಪಡೆದ ಬಳಿಕ ಪಾಕ್ ಭಾರತಕ್ಕೆ ತಿರುಗೇಟು ನೀಡುವ ಸಲುವಾಗಿ ಹಲವು ರಾಜತಾಂತ್ರಿಕ ಕ್ರಮಗಳನ್ನು ಹಿಂಪಡೆದಿತ್ತು. ಭಾರತದೊಂದಿಗೆ ಸಂಬಂಧವನ್ನು ಕಡಿತಗೊಳಿಸಿದರೆ ವೈಯಕ್ತಿಕವಾಗಿ ಪಾಕಿಸ್ಥಾನಕ್ಕೆ ಹಾನಿಯೇ ಹೊರತು ಭಾರತಕ್ಕೇನೂ ಹೇಳಿಕೊಳ್ಳುವ ನಷ್ಟ ಸಂಭವಿಸದು.

Advertisement

ಭಾರತದಲ್ಲಿ ಚಿನ್ನದ ದರ ಒಂದೇ ಸಮನೆ ಏರಿಕೆ ಕಾಣುತ್ತಿದ್ದು, ಈಗ 38 ಸಾವಿರದ ಆಸುಪಾಸಿನಲ್ಲಿದೆ. ಬಂದು ತಲುಪಿದೆ. ಜಾಗತಿಕ ಮಟ್ಟದಲ್ಲಿ ಚಿನ್ನ ದುಬಾರಿಯಾದ ಪರಿಣಾಮ ಭಾರತದಲ್ಲಿ ಚಿನ್ನ ದುಬಾರಿಯಾಗಿದೆ. ಶನಿವಾರ 10 ಗ್ರಾಂ. ಚಿನ್ನದ ಬೆಲೆ 38,520 ರೂಪಾಯಿ ಇತ್ತು.

ಭಾರತದಲ್ಲಿ 400 ರೂ.ಗಳಂತೆ ಚಿನ್ನದ ದರ ಏರಿಕಯಾಗುತ್ತಿದ್ದರೆ ಅತ್ತ ಪಾಕ್‌ ನಲ್ಲಿ ನಾಲ್ಕು ಅಂಕಿ ಮೇಲೆ ಏರಿಕೆಯಾಗುತ್ತಾ ಸಾಗಿದೆ. ತತ್ಪರಿಣಾಮ ಪಾಕಿಸ್ಥಾನದಲ್ಲಿ ಚಿನ್ನದ ಬೆಲೆ 10 ಗ್ರಾಂ.ಗೆ 86,250 ರೂ.ಗಳಿಗೆ ಏರಿಕೆಯಾಗಿದೆ. ಅಂದರೆ 1,750 ರೂಪಾಯಿ ಏರಿಕೆ ಕಾಣುತ್ತಿದೆ. ಭಾರತದ ಚಿನ್ನ ಮಾರುಕಟ್ಟೆಗೆ ಹೋಲಿಸಿದರೆ ಇದು ದುಪ್ಪಟ್ಟಾಗಿದೆ.

ಪಾಕ್ ಗೆ ಋಣ ಭಾರ
ಸಾಲ ಬಾಧೆಯಿಂದ ಕಂಗೆಡುತ್ತಿರುವ ಪಾಕ್ ಗತ್ಯ ವಸ್ತುಗಳ ದರ ಏರಿಸಿದೆ. ಅಲ್ಲಿ ಪೆಟ್ರೋಲ್ ದರ ಮೂರಂಕಿ ದಾಟಿ ಹಲವು ತಿಂಗಳುಗಳಾಗಿವೆ. ಅಲ್ಲಿ ಪೆಟ್ರೋಲ್‌ಗೆ 117 ರೂ., ಡೀಸೆಲ್ಗೆ 135 ರೂ. ಇದೆ. ಪಾಕಿಸ್ಥಾನದ ಕರೆನ್ಸಿಯೂ ತನ್ನ ಮೌಲ್ಯವನ್ನು ದಿನೇ ದಿನ ಕಳೆದುಕೊಳ್ಳುತ್ತಿದೆ. (ಭಾರತದ 1 ರೂ. ಪಾಕ್‌ ನಲ್ಲಿ 2.22 ಪಾಕಿಸ್ಥಾನಿ ರೂ.) ಮೊದಲೇ ಆರ್ಥವ್ಯವಸ್ಥೆ ಕುಸಿಯುತ್ತಿರುವಾಗ ಭಾರತದೊಂದಿಗೆ ಇದ್ದ ವ್ಯಾಪಾರ, ವಹಿವಾಟನ್ನು ಕಡಿತಗೊಳಿಸಿ ಪಾಕ್ ಬಹಳ ನಷ್ಟ ಎದುರಿಸಲಿದೆ. ಭಾರತದಿಂದ ಈಗಾಗಲೇ ಬಹುತೇಕ ವಸ್ತುಗಳ ಆಮದನ್ನು ನಿಷೇಧಿಸಿದ್ದು ಇದು ಆರ್ಥ ವ್ಯವಸ್ಥೆಯನ್ನು ಮತ್ತಷ್ಟು ಬಿಗಡಾಯಿಸಲಿದೆ.

ಷೇರು ಮಾರುಕಟ್ಟೆ ಕುಸಿತ
ಭಾರತದೊಂದಿಗೆ ದ್ವಿ ಪಕ್ಷೀಯ ಸಂಬಂಧಗಳನ್ನು ಕಡಿತಗೊಳಿದ ಪಾಕ್‌ ಗೆ ಅದೇ ರಾಷ್ಟ್ರದ ಷೇರು ಮಾರುಕಟ್ಟೆ ಬಲವಾದ ಪೆಟ್ಟು ನೀಡಿದೆ. ಪಾಕಿಸ್ಥಾನದ ಷೇರು ಮಾರುಕಟ್ಟೆ ಭಾರತ ವ್ಯಾಪಾರ ಮೇಲೆ ಅವಲಂಭಿತವಾಗಿತ್ತು. ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟಿನಲ್ಲಿ ಆಲ್ಲಿನ ಷೇರು ಮಾರುಕಟ್ಟೆ ನಿಂತಿತ್ತು. ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಲು ಪಾಕ್ ನಿರ್ಧರಿಸಿದ ಬಳಿಕ ಪಾಕ್ ಷೇರು ಮಾರುಕಟ್ಟೆ ಚೇತರಿಕೆಯ ಹಾದಿಗೆ ಬರಲಿಲ್ಲ. ಪ್ರತಿ ದಿನ ಕುಸಿತದ ಹಾದಿಯನ್ನು ಹಿಡಿಯುತ್ತಿದ್ದು, ಶೀಘ್ರ ಚೇತರಿಕೆಯ ಹಾದಿಗೆ ಮರಳುವ ಸಾಧ್ಯತೆ ಕ್ಷೀಣ ಎಂಬ ವಿಶ್ಲೇಷಣೆಗಳು ಅರ್ಥಶಾಸ್ತ್ರಜ್ಞರ ವಲಯದಲ್ಲಿ ಕೇಳಿಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next