Advertisement
ಮೊಟ್ಟೆಯಲ್ಲಿ ಪೌಷ್ಠಿಕಾಂಶಗಳಿರುವುದರಿಂದ ಮೊಟ್ಟೆ ಮತ್ತು ಮೊಟ್ಟೆಯಿಂದ ತಯಾರಿಸಲಾದ ವಿವಿಧ ಆಹಾರ ಪದಾರ್ಥಗಳ ಸೇವನೆ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ ಬರೀ ಮೊಟ್ಟೆಯನ್ನೇ ತಿನ್ನುವ ಬದಲು ಮೊಟ್ಟೆಯನ್ನು ಬಳಸಿ ತಯಾರಿಸುವ ವಿವಿಧ ಆಹಾರಗಳ ಸೇವನೆ ನಮ್ಮ ನಾಲಿಗೆಗೂ ರುಚಿ ಮತ್ತು ಆರೋಗ್ಯಕ್ಕೂ . ಬೇಯಿಸಿದ ಮೊಟ್ಟೆ, ಮೊಟ್ಟೆ ಆಮ್ಲೆಟ್, ಮೊಟ್ಟೆ ಬುರ್ಜಿ ಇವೆಲ್ಲಾ ಸಾಮಾನ್ಯವಾಗಿ ಜನಪ್ರಿಯವಾಗಿರುವ ಮೊಟ್ಟೆಯ ಆಹಾರ ರೂಪಗಳಾಗಿವೆ. ಇದೀಗ ಮೊಟ್ಟೆ ಚಿಲ್ಲಿ ಸೇವನೆಯು ಊಟಕ್ಕೆ ಮತ್ತು ಚಪಾತಿಯಂತಹ ತಿಂಡಿಗಳ ಜೊತೆಗೆ ಉತ್ತಮ ಕಾಂಬಿನೇಷನ್ ಆಗಿ ಜನಪ್ರಿಯಗೊಳ್ಳುತ್ತಿದೆ.
ಮೊಟ್ಟೆ ತಿನ್ನುವುದರಿಂದ ಜೀರ್ಣಕ್ರಿಯೆ ಚುರುಕಾಗಲಿದೆ.ದೇಹದ ಬೊಜ್ಜು ಕರಗಿಸಲು ಸಹಕಾರಿಯಾಗಿರುವುದು .ಅಲ್ಲದೇ ನಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಲು ನೆರವಾಗುತ್ತದೆ.ಬೇಯಿಸಿದ ಮೊಟ್ಟೆ ಸೇವನೆಯಿಂದ ಮೆದುಳಿನ ಕ್ಷಮತೆ ಹೆಚ್ಚುತ್ತದೆ. ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸಲು ಇದು ನೆರವಾಗುತ್ತದೆ.ಗರ್ಭಿಣಿಯರು ಮೊಟ್ಟೆಯನ್ನು ತಿನ್ನುವುದರಿಂದ ಗರ್ಭದಲ್ಲಿರುವ ಶಿಶುವಿಗೆ ಪೋಷಕಾಂಶ ಹಾಗೂ ಖನಿಜಾಂಶ ಪೂರೈಕೆಯಾಗಿ ಆರೋಗ್ಯಯುತವಾಗಿ ಬೆಳೆಯಲು ಸಹಾಯವಾಗುತ್ತದೆ. ಬೇಯಿಸಿದ ಮೊಟ್ಟೆಯನ್ನು ಸೇವಿಸುವ ಮೂಲಕ ರಕ್ತ ಹೆಪ್ಪು ಗಟ್ಟುವುದನ್ನು ತಡೆಯಬಹುದು. ಎಗ್ ಚಿಲ್ಲಿ
ಬೇಕಾಗುವ ಪದಾರ್ಥಗಳು:
ಮೊಟ್ಟೆ 4 ರಿಂದ 6,ಹಸಿಮೆಣಸು 5 ,ಈರುಳ್ಳಿ 3,ಶುಂಠಿ ಸ್ವಲ್ಪ,ಕ್ಯಾಪ್ಸಿಕಮ್ (ದೊಣ್ಣೆ ಮೆಣಸು)1,ಬೆಳ್ಳುಳ್ಳಿ 1,ಚಿಲ್ಲಿ ಸಾಸ್ 2ಚಮಚ, ಸೋಯಾ ಸಾಸ್ 2ಚಮಚ,ಟೊಮೇಟೊ 1,ಕಾನ್‌ಫ್ಲೋರ್ 2 ಚಮಚ ,ಎಣ್ಣೆ,ಕೊತ್ತಂಬರಿ ಸೊಪ್ಪು,ಉಪ್ಪು ರುಚಿಗೆ ತಕ್ಕಷ್ಟು.
Related Articles
ಮೊಟ್ಟೆ ಬೇಯಿಸಿಕೊಂಡು ನಂತರ ಮೇಲಿನ ಸಿಪ್ಪೆ ಬಿಡಿಸಿ ನಾಲ್ಕು ಭಾಗ ಮಾಡಿಕೊಂಡು ಇಟ್ಟುಕೊಳ್ಳಿ.ಈರುಳ್ಳಿ ಸಣ್ಣಗೆ ಹೆಚ್ಚಿಕೊಳ್ಳಬೇಕು. ಶುಂಠಿ ,ಬೆಳ್ಳುಳ್ಳಿ ನುಣ್ಣಗೆ ಅರೆದು ಪೇಸ್ಟ್ ಮಾಡಿಕೊಳ್ಳಿ.ಕ್ಯಾಪ್ಸಿಕಮ್ ಉದ್ದಕ್ಕೆ ಹೆಚ್ಚಿಕೊಳ್ಳಿ.ಒಂದು ಪಾತ್ರೆಯಲ್ಲಿ ಕಾನ್‌ಫ್ಲೋರ್ ಉಪ್ಪು,ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ.ನಂತರ ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಕಾಯಲು ಇಡಿ. ತುಂಡು ಮಾಡಿಟ್ಟ ಮೊಟ್ಟೆಯನ್ನು ಕಾನ್‌ಫ್ಲೋರ್ ಹಿಟ್ಟಿನಲ್ಲಿ ಮುಳುಗಿಸಿ ಬಿಸಿಯಾಗಿರುವ ಎಣ್ಣೆಗೆ ಹಾಕಿ. ಕೆಂಪಗೆ ಕರಿದು ತೆಗೆದು ಇಟ್ಟುಕೊಳ್ಳಿ.ನಂತರ ಬೇರೆ ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿರುವ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.ತದನಂತರ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವ ತನಕ ಹುರಿಯಿರಿ,ಹಸಿ ಮೆಣಸಿನ ಕಾಯಿ,ಕ್ಯಾಪ್ಸಿಕಮ್,ಟೊಮೇಟೊ ಸೇರಿಸಿ.ಫ್ರೈ ಮಾಡಿರುವ ಮೊಟ್ಟೆಯನ್ನು ಸೇರಿಸಿ,ಸೋಯಾ ಸಾಸ್,ಚಿಲ್ಲಿ ಸಾಸ್ ಹಾಕಿ ಎರಡು ನಿಮಿಷಗಳ ಕಾಲ ಫ್ರೈ ಮಾಡಿ. ಉಪ್ಪು ಸೇರಿಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು,ಈರುಳ್ಳಿ ಹೂ ಸಣ್ಣಗೆ ಹೆಚ್ಚಿ ಹಾಕಿ.ಸ್ವಲ್ಪ ನೀರು ಹಾಕಿ ಕುದಿಸಿರಿ.ಬಿಸಿ-ಬಿಸಿ ಎಗ್ ಚಿಲ್ಲಿ ಸವಿಯಲು ಸಿದ್ಧ.( ಚಪಾತಿ,ಅನ್ನ ಜೊತೆ ತಿನ್ನಲು ತುಂಬಾನೇ ರುಚಿಯಾಗಿರುತ್ತದೆ.)
Advertisement