Advertisement

ಪ್ರಿಯಾಂಕಾ ವಾದ್ರಾ ಕನಸೇನು ಗೊತ್ತಾ?

01:21 AM Mar 31, 2019 | Team Udayavani |

ನವದೆಹಲಿ: ಉತ್ತರಪ್ರದೇಶದಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಅಯೋಧ್ಯೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲೂ ಪಾಲ್ಗೊಂಡಿದ್ದಾರೆ.

Advertisement

ಸನ್‌ಬೀಮ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಪ್ರಿಯಾಂಕಾ ಉತ್ತರಿಸಿದ್ದಾರೆ. ಭವಿಷ್ಯದ ಭಾರತದ ಬಗ್ಗೆ ನಿಮ್ಮ ಭಾವನಾತ್ಮಕ ಕನಸೇನು ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ, “ಹಿಂದೂ ಆಗಲೀ, ಇಸ್ಲಾಂ ಆಗಲೀ, ಕ್ರೈಸ್ತ ಅಥವಾ ಇನ್ಯಾವುದೇ ಆಗಲಿ, ಯಾರ ಧರ್ಮವನ್ನೂ ಯಾರೂ ಪ್ರಶ್ನೆ ಮಾಡದಂಥ ಭಾರತವನ್ನು ನಾನು ನೋಡಲು ಇಚ್ಛಿಸುತ್ತೇನೆ. ಅದುವೇ ನನ್ನ ಕನಸು’ಎಂದಿದ್ದಾರೆ.

ಇದೇ ವೇಳೆ, ಗಾಂಧಿ ಕುಟುಂಬವನ್ನು ರಾಜಮನೆತನ ಎಂದು ಬಿಜೆಪಿ ಸಂಬೋಧಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, “1972ರಲ್ಲಿ ಮಹಾರಾಜರ ಕುಟುಂಬಗಳಿಗೆ ನೀಡಲಾಗುತ್ತಿದ್ದ ಸವಲತ್ತುಗಳನ್ನು ತೆಗೆದುಹಾಕಿದ್ದೇ ನಮ್ಮ ಅಜ್ಜಿ ಇಂದಿರಾ ಗಾಂಧಿ. ಹೀಗಿರುವಾಗ ರಾಜಮನೆತನದ ಪ್ರಶ್ನೆ ಎಲ್ಲಿ ಬಂತು’ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next