ಪ್ರತಿ ದಿನದಂತೆ ಅವತ್ತು ಶಾಲೆ ಮುಗ್ಸಿ, ನಾನೂ ನನ್ ಅಕ್ಕನೂ ಮನೆ ಕಡೆ ಬರ್ತಾಯಿದ್ವಿ. ಆದ್ರೆ ಯಾಕೋ ನಮ್ಮ ಹಿಂದೆ ಏನೋ ನಡಿತಾ ಇದೆ ಅನ್ನಿಸೋಕೆ ಶುರುವಾಯ್ತು. ತಿರುಗಿ ನೋಡಲಿಕ್ಕೆ ಇಬ್ಬರಿಗೂ ಭಯವಾಯ್ತು. ಹಾಗಾಗಿ, ಕಣ್ಣಲ್ಲೇ ಮಾತಾಡಿಕೊಂಡು ತಿರುಗಿಯೂ ನೋಡದೆ ಹಾಗೇ ದಾಪುಗಾಲಿಟ್ಟು ಮನೆಗೆ ಬಂದ್ವಿ. ಮರುದಿನ ಅದೇ ರೋಡು, ಅದೇ ಟೈಮಿಗೆ ಮತ್ತದೇ ಅನುಭವ.. ಹೀಗೆ ಮೂರು ದಿನ ನಿರಂತರವಾಗಿ ನಡೆಯಿತು.
ನಾಲ್ಕನೇ ದಿನ, ನಾನು ಮತ್ತು ಅಕ್ಕ ಇವತ್ತೇನಾದರೂ ಸರಿ; ಹಿಂದೆ ತಿರುಗಿ ನೋಡ್ಲೆಬೇಕು ಅಂತ ಡಿಸೈಡ್ ಮಾಡಿಕೊಂಡೇ ಹೊರಟೆವು. ಹೇಗೋ ಧೈರ್ಯ ಮಾಡ್ಕೊಂಡು ಇನ್ನೇನು ಹಿಂದೆ ತಿರುಗೇºಕು ಅನ್ನುವಷ್ಟರಲ್ಲಿ, ನಮ್ಮ ಹಿಂದಿನಿಂದ ಬಂದ ಒಬ್ಬ ವ್ಯಕ್ತಿ ತಕ್ಷಣ ಎದುರಿಗೆ ನಿಂತ. ಅಪರಿಚಿತನನ್ನು ಕಂಡು ನಾವಿಬ್ಬರೂ ಒಂದ್ಸಲ ಬೆಚ್ಚಿಬಿದ್ವಿ. ಬಂದೋನೆ, “ನಿಮ್ಮ ಹೆಸ್ರು ಏನು? ನೀವು ಏನ್ಮಾಡ್ತಾ ಇರೋದು?’ ಅಂತೆಲ್ಲ ಪ್ರಶ್ನೆ ಕೇಳಕ್ಕೆ ಶುರು ಮಾಡಿದ. ಉತ್ತರಿಸುವ ಬದಲು, ನಾವಿಬ್ರೂ ಅಲ್ಲಿಂದ ಓಡುತ್ತಾ ಮನೆಗೆ ಬಂದೆವು.
ಈ ವಿಷಯಾನ ಮನೇಲಿ ಹೇಳ್ಳೋಕೂ ಭಯ, ಹೇಳದೇ ಇರೋಕೂ ಭಯ. ಹೇಗಾದ್ರೂ ಮಾಡಿ ಅವನಿಂದ ತಪ್ಪಿಸಿಕೊಳ್ಳಬೇಕು ಅನ್ನಿಸ್ತು. ನಾವು ದಿನಾ ಓಡಾಡೋ ರೋಡನ್ನೇ ಬದಲಾಯಿಸುವ ಪ್ಲಾನ್ ಮಾಡಿದ್ವಿ. ಆದ್ರೆ ಆ ವ್ಯಕ್ತಿ ಆ ದಾರಿಗೂ ಬಂದಿºಟ್ಟ. ನಮ್ಮ ಅಕ್ಕಂಗೆ ನನಗಿಂತ ಸ್ವಲ್ಪ ಧೈರ್ಯ ಜಾಸ್ತಿ. ಒಂದಿನ ಅವ್ನಿಗೆ ಸರಿಯಾಗಿ ದಬಾಯಿಸಿದು. ಅಕ್ಕ ಜೋರು ಮಾಡ್ತಾಯಿದ್ದಂಗೆ ಆ ಪಾರ್ಟಿ ಮಂಗಮಾಯ. ಅದಾದ್ಮೇಲೆ ನಂಗೂ ಸ್ವಲ್ಪ ಧೈರ್ಯ ಬಂದಿತ್ತು. ಹೆಂಗೋ ಆ ವ್ಯಕ್ತಿಯಿಂದ ತಪ್ಪಿಸಿಕೊಂಡ್ವಿ ಅಂತ ಖುಷಿ ಪಡೋದೊಳಗೆ ಅವನು ಮತ್ತೆ ಪ್ರತ್ಯಕ್ಷ ಆಗಿºಡೋದ! ಆಗ ನಾನು ಅಕ್ಕ ಇಬ್ರೂ ಸೇರಿ ಅವ್ನಿಗೆ ಮಹಾಮಂಗಳಾರತಿ ಮಾಡಿ ಕಳಿÕದ್ವಿ. ಆ ಘಟನೆ ನಡೆದಾಗ ನಾನು ಏಳನೆ ಕ್ಲಾಸ್, ಅಕ್ಕ ಒಂಬತ್ತನೆ ಕ್ಲಾಸ್.
ಅಷ್ಟಾದ್ರೂ ಅವನು ನಮ್ಮ ಬೆನ್ನು ಬಿಡಲಿಲ್ಲ. ಒಂದಿನ ಅಕ್ಕಂಗೆ ಪಿತ್ತ ನೆತ್ತಿಗೇರಿತ್ತು. ಆಗಲೇ ಅವನು ಎದುರು ಬಂದು ನಿಂತ. ಅಕ್ಕ- “ನೋಡು ನನ್ ತಂಟೆಗೆ ಬಂದ್ರೆ ಸರಿ ಇರಲ್ಲ. ನಾನ್ ಯಾರೂಂತ ಗೊತ್ತಾ? ನಾನು ಇನ್‌ಸ್ಪೆಕ್ಟರ್ ವಾಣಿ’ ಅಂದವಳೇ, ಕೈಯೆತ್ತಿ ಅವನ ಕೆನ್ನೆಗೆ ಬಾರಿಸೋಕೆ ಹೋದು! ಅವ ಡೈಲಾಗ್ ಕೇಳಿ ಅವನು ದಂಗಾಗಿ ಹೋದ್ರೆ, ನಾನು ಉಕ್ಕಿ ಬಂದ ನಗೂನ ತಡೆಯಲಾಗದೆ ಜೋರಾಗಿ ನಕ್ಕುಬಿಟ್ಟೆ. ನಾನು ನಕ್ಕಿದ್ದನ್ನು ನೋಡಿ ಅಕ್ಕ ನನಗೆ ಬೈಯೋಕೆ ಶುರು ಮಾಡಿದುÉ. ಇದನ್ನು ಕಂಡು, ನಮ್ಮನ್ನು ಹೆದರಿಸಲು ಬಂದಿದ್ದ ಆ ಪುಣ್ಯಾತ್ಮನಿಗೂ ನಗು ಬಂದುಬಿಡು¤. ನಗುತ್ತಲೇ ನಾಪತ್ತೆ ಆದೋನು ಮತ್ತೆಂದೂ ನಮ್ಮ ಕಣ್ಣಿಗೆ ಬೀಳೆ ಇಲ್ಲ.
ಇದಾಗಿ ಎಷ್ಟೋ ದಿನ ಕಳೆದ ಮೇಲೆ ಮನೆಯವರಿಗೆಲ್ಲಾ ನಡೆದ ಕಥೇನ ಸಾದ್ಯಂತವಾಗಿ ವಿವರಿಸಿದ್ವಿ. ಆಗ ಎಲ್ಲರೂ ಜೋರಾಗಿ ನಕ್ಕು, ನೀನು ಒಂದು ದಿನದ ಮಟ್ಟಿಗಾದ್ರೂ ಲೇಡಿ ಇನ್‌ಸ್ಪೆಕ್ಟರ್ ಆದೆಯಲ್ಲ… ಎಂದು ರೇಗಿಸಿದರು. ಅಂದಿನಿಂದ ಅಕ್ಕನ ಹೆಸರಿನ ಮುಂದೆ ಇನ್‌ಸ್ಪೆಕ್ಟರ್ ಸೇರೊಡು ಅವಳು “ಇನ್‌ಸ್ಪೆಕ್ಟರ್ ವಾಣಿ’ಯಾಗಿ ಹೋದು. ಈಗಲೂ ಆ ರಸ್ತೆಯಲ್ಲಿ ನಡೆಯುವಾಗ ಇನ್‌ಸ್ಪೆಕ್ಟರ್ ವಾಣಿ ನೆನಪಾಗ್ತಾಳೆ.
ಅಶ್ವಿನಿ ಎಲ್.