Advertisement

ನಟಿ ಪ್ರಿಯಾ ಪ್ರಕಾಶ್‌ಗೆ ಲಕ್ಷ್ಮೀ ಕಟಾಕ್ಷ!

08:15 AM Mar 09, 2018 | |

ನವದೆಹಲಿ: ತಮ್ಮ ಚೊಚ್ಚಲ ಚಿತ್ರ “ಒರು ಅಡಾರ್‌ ಲವ್‌’ನಲ್ಲಿನ ಹಾಡೊಂದರಲ್ಲಿ ಕಣ್ಣು ಹೊಡೆದು ಹುಡುಗರ ಹೃದಯ ದೋಚಿದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌, ಇನ್ನು ಇನ್‌ಸ್ಟಾrಗ್ರಾಂನಲ್ಲಿ ತಾವು ಹಾಕುವ ಪೋಸ್ಟ್‌ಗೆ ತಲಾ 8 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ! 

Advertisement

ಅಚ್ಚರಿಯಾದರೂ ಇದು ಸತ್ಯ. “ಒರು ಅಡಾರ್‌ ಲವ್‌’ ಚಿತ್ರದ ಹಾಡುಗಳ ಕೆಲ ಸೆಕೆಂಡ್‌ಗಳ ತುಣುಕುಗಳು ಡಿಜಿಟಲ್‌ ದುನಿಯಾದಲ್ಲಿ ಈಕೆಯನ್ನು ಖ್ಯಾತಿಯ ಉತ್ತುಂಗಕ್ಕೇರಿಸಿವೆ. ಜನಪ್ರಿಯತೆಯಲ್ಲಿ, ಈಶಾ ಗುಪ್ತಾ, ಸನ್ನಿ ಲಿಯೋನ್‌ನನ್ನೇ ಹಿಂದಿಕ್ಕಿರುವ ಇವರು, ಇನ್‌ಸ್ಟಾrಗ್ರಾಂ 50 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಗೂಗಲ್‌ ಸರ್ಚ್‌ ಎಂಜಿನ್‌ನಲ್ಲಿ ಅತಿ ಹೆಚ್ಚು “ಹುಡುಕಾಟ’ಕ್ಕೆ ಗುರಿಯಾದ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಹಾಗಾಗಿಯೇ, ಇವರ ಪ್ರತಿ ಪೋಸ್ಟಿಂಗ್‌ಗೆ ಇನ್‌ಸ್ಟಾಗ್ರಾಂ, 8 ಲಕ್ಷ ರೂ. ನೀಡಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next