Advertisement

ಶರೀರ, ಮನಸ್ಸು, ಆತ್ಮ ಒಗ್ಗೂಡಿಸಲು ಯೋಗ ಮಾಡಿ

12:43 PM Jun 22, 2018 | |

ಹಳೇಬೀಡು: ಶರೀರ, ಮನಸ್ಸು ಮತ್ತು ಆತ್ಮ ಒಗ್ಗೂಡಿಸುವುದಲ್ಲದೇ, ಒತ್ತಡ ಬದುಕಿನಿಂದ ಹೊರಬರಲು ಪ್ರತಿದಿನ ಯೋಗ ಮಾಡಿ ಎಂದು ಯೋಗ ಗುರು ಚೇತನ್‌ ಗುರೂಜಿ ತಿಳಿಸಿದರು. 

Advertisement

ಪಟ್ಟಣದ ವಿಶ್ವ ಪ್ರಸಿದ್ಧ ಹೊಯ್ಸಳೇಶ್ವರ ದೇಗುಲ ಆವರಣದಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗ ಭಾರತದ ಕೊಡುಗೆ, ಯೋಗಕ್ಕೆ ಸುಮಾರು 5000 ಸಾವಿರ ಇತಿಹಾಸವಿದೆ. ಪ್ರಧಾನಿ ನರೇಂದ್ರ ಮೋದಿ ಯೋಗಕ್ಕೆ ವಿಶ್ವ ಮಾನ್ಯತೆ ದೊರಕಿಸಿಕೊಟ್ಟರು. ಹೀಗಾಗಿ ಸುಮಾರು 45 ರಾಷ್ಟ್ರಗಳು ಯೋಗದ ಲಾಭ ಪಡೆಯುತ್ತಿವೆ ಎಂದು ವಿವರಿಸಿದರು.

ಪ್ರತಿಯೊಬ್ಬರು ಯೋಗ ಮಾಡುವುದರಿಂದ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ನೆಮ್ಮದಿಯೂ ದೊರೆಯುತ್ತದೆ. ಆಧುನಿಕ ಜೀವನದಲ್ಲಿ ಜನರು ಒತ್ತಡದಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಮುಂತಾದ ಕಾಯಿಲೆಗಳು ಜನರನ್ನು ಬಾಧಿಸುತ್ತಿವೆ. ಇದರಿಂದ ಮುಕ್ತಿ ಹೊಂದಲು ಯೋಗ ಸಹಕಾರಿಯಾಗುತ್ತದೆ. ಯೋಗದಿಂದ ಶ್ವಾಸಕೋಶ, ಉಸಿರಾಟದ ತೊಂದರೆಯಿಂದ ಪಾರಾಗಬಹುದು ಎಂದು ತಿಳಿಸಿದರು.

ಪುಷ್ಪಗಿರಿ ಮಠದ ಸೋಮಶೇಖರ ಸ್ವಾಮೀಜಿ ಮಾತನಾಡಿ, ಮೊದಲು ಹೃದಯ ಸಂಬಂಧಿ ಕಾಯಿಲೆಗಳು 60 ವರ್ಷ ದಾಟಿದವರಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಆದರೆ, ಈಗ ಯುವಜನರಲ್ಲೂ ಕಾಣಿಸಿಕೊಳ್ಳುತ್ತಿದೆ. ಬದಲಾದ ಆಹಾರ ಪದ್ಧತಿ, ಆಧುನಿಕ ಜೀವನ ಶೈಲಿಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅನಿವಾರ್ಯ. ಆದ್ದರಿಂದ ಪ್ರತಿನಿತ್ಯ ಪ್ರಾಣಾಯಮ, ಧ್ಯಾನ ಮಾಡುವುದು ಅಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಹುಲ್ಲಳ್ಳಿ ಸುರೇಶ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗೂರು ಶಿವಕುಮಾರ್‌, ಜಿಪಂ ಸದಸ್ಯ ಮಂಜಪ್ಪ, ತಾಪಂ ಸದಸ್ಯೆ ಸುಮಾ ಪರಮೇಶ್‌, ಗ್ರಾಪಂ ಸದಸ್ಯರು, ಶಾಲಾ,ಕಾಲೇಜು ಉಪನ್ಯಾಸಕರು ಪಾಲ್ಗೊಂಡಿದ್ದರು.

Advertisement

ಭಾರತೀಯರಿಂದಲೇ ಪ್ರಾರಂಭವಾದ ಯೋಗ ವಿಶ್ವವೇ ಆಚರಣೆ ಮಾಡುತ್ತಿರುವುದು ಭಾರತೀಯರು ಹೆಮ್ಮೆ ಪಡುವ ವಿಷಯ. ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಪ್ರತಿ ಶನಿವಾರ ಯೋಗ ತರಗತಿ ಆರಂಭಿಸಬೇಕು. ಶಾಲಾ ಕಾಲೇಜುಗಳಲ್ಲಿ ಪ್ರತಿನಿತ್ಯ ಮೊದಲ ತರಗತಿ ಯೋಗ ಪಾಠವಾಗಬೇಕು.
-ರಶ್ಮಿ ಆರ್‌.ಡಿ., ಪಿಯುಸಿ ವಿದ್ಯಾರ್ಥಿನಿ, ರಾಜನಶಿರಿಯೂರು.

Advertisement

Udayavani is now on Telegram. Click here to join our channel and stay updated with the latest news.

Next