Advertisement

Pan Card: ನಿಷ್ಕ್ರಿಯ ಪ್ಯಾನ್‌ ಸಕ್ರಿಯಗೊಳಿಸಲು ಹೀಗೆ ಮಾಡಿ

03:33 PM Aug 07, 2023 | |

ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ ಅನ್ನು ಲಿಂಕ್‌ ಮಾಡುವ ಕೊನೆಯ ದಿನಾಂಕ ಜೂ.30ನ್ನು ತಪ್ಪಿಸಿಕೊಂಡಿದ್ದೀರಾ? ಅದನ್ನು ಮತ್ತೆ ಸಕ್ರಿಯಗೊಳಿಸುವ ಮಾರ್ಗಗಳೂ ಇವೆ. ಕೇಂದ್ರ ಸರಕಾರದ ವತಿಯಿಂದ ಲಿಂಕ್‌ ಮಾಡುವ ಅವಧಿಯನ್ನು ವಿಸ್ತರಿಸುವ ಅಥವಾ ಇನ್ನಿತರ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪ್ರಕಟಗೊಂಡಿಲ್ಲ. ಈ ಕೆಳಗಿನ ವಿಧಾನಗಳನ್ನು ಅನು ಸರಿಸುವ ಮೂಲಕ ಪ್ಯಾನ್‌ ಕಾರ್ಡ್‌ ಅನ್ನು ಸಕ್ರಿಯ ಗೊಳಿಸಬಹುದು.

Advertisement

ಪ್ಯಾನ್‌ ಸರಿಯಾಗಿ ಇದೆಯೋ
ಇಲ್ಲವೋ ನೋಡುವುದು ಹೇಗೆ?
1 ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ //incometax.gov.in/iec/foportal/ ಭೇಟಿ ಕೊಡಿ.
2 ಅಲ್ಲಿ ಕ್ವಿಕ್‌ ಲಿಂಕ್‌ ವಿಭಾಗದಲ್ಲಿ “ವೆರಿಫೈ ಯುವರ್‌ ಪ್ಯಾನ್‌’ ಅನ್ನು ಕ್ಲಿಕ್‌ ಮಾಡಿ.
3 “ವೆರಿಫೈ ಯುವರ್‌ ಪ್ಯಾನ್‌’ ವಿಭಾಗದಲ್ಲಿ ಪ್ಯಾನ್‌ ಸಂಖ್ಯೆ, ಪೂರ್ಣ ಹೆಸರು, ಹುಟ್ಟಿದ ದಿನಾಂಕ ಮತ್ತು ಮೊಬೈಲ್‌ ನಂಬರ್‌ ನಮೂದಿಸಿ.
4 “ಕಂಟಿನ್ಯೂ’ ಅನ್ನು ಪ್ರಸ್‌ ಮಾಡಿ ವೆರಿಫಿಕೇಶನ್‌ ಪುಟಕ್ಕೆ ಮುಂದುವರಿಯಿರಿ.
5 ಮೊಬೈಲ್‌ಗೆ ಬಂದ ಆರು ಸಂಖ್ಯೆಯ ಒಟಿಪಿಯನ್ನು ನಮೂದಿಸಿ ದೃಢೀಕರಿಸಬೇಕು. ನಿಮ್ಮ ಮೊಬೈಲ್‌ಗೆ ಬಂದ ಒಟಿಪಿಯ ಮಾನ್ಯತೆಯ ಅವಧಿ 15 ನಿಮಿಷಗಳು ಮಾತ್ರ. ಮೂರು ಬಾರಿ ಸರಿಯಾದ ಪಾಸ್‌ವರ್ಡ್‌ ನಮೂದಿಸಿ ಲಾಗ್‌ ಇನ್‌ ಆಗಲು ಅವಕಾಶ ಇದೆ.
6 ದೃಢೀಕರಣ ಮಾಡಿದ್ದು ಯಶಸ್ವಿಯಾದರೆ ಸ್ಕ್ರೀನ್‌ ಮೇಲೆ ಮೂಡುತ್ತದೆ. “ಪ್ಯಾನ್‌ ಈಸ್‌ ಆ್ಯಕ್ಟಿವ್‌ ಆ್ಯಂಡ್‌ ದ ಡಿಟೈಲ್ಸ್‌ ಆರ್‌ ಆ್ಯಸ್‌ ಪರ್‌ ಯುವರ್‌ ಪ್ಯಾನ್‌’ ಎಂದು ಸಂದೇಶ ಬರುತ್ತದೆ.

ಸಕ್ರಿಯಗೊಳಿಸುವ ಕ್ರಮಗಳು ಹೀಗಿವೆ…
ಕೊನೆಯ ದಿನಾಂಕದ ಒಳಗಾಗಿ ಆಧಾರ್‌- ಪ್ಯಾನ್‌ ಲಿಂಕ್‌ ಮಾಡದೆ, ನಿಷ್ಕ್ರಿಯವಾಗಿರುವ ಪ್ಯಾನ್‌ ಅನ್ನು ಮತ್ತೆ ಆ್ಯಕ್ಟಿವೇಟ್‌ ಮಾಡಲು 1 ಸಾವಿರ ರೂ. ದಂಡ ಪಾವತಿ ಮಾಡಬೇಕು. ಒಂದು ತಿಂಗಳ ಅವಧಿಯಲ್ಲಿ ಆಧಾರ್‌-ಪ್ಯಾನ್‌ ಲಿಂಕ್‌ ಮಾಡದಿದ್ದರೆ ಯಾವ ವಿತ್ತೀಯ ವಹಿವಾಟು ನಡೆಸಲು ಸಾಧ್ಯವಿಲ್ಲ. ನಿಷ್ಕ್ರಿಯ ಪ್ಯಾನ್‌ ಅನ್ನು ಸಕ್ರಿಯಗೊಳಿಸಲು ಹೀಗೆ ಮಾಡಿ.
1 //incometax.gov.in/iec/foportal/ ವೆಬ್‌ಸೈಟ್‌ಗೆ ಹೋಗ ಬೇಕು. ಅನಂತರ “e-Pay Tax” ಗೆ ತೆರಳಿ ಆಧಾರ್‌-ಪ್ಯಾನ್‌ ಲಿಂಕ್‌ಗೆ ಕೋರಿಕೆ ಸಲ್ಲಿಸಿ.
2 ಪ್ಯಾನ್‌ ನಂಬರ್‌ ನಮೂದಿಸಬೇಕು. ಚಲನ್‌ ನಂಬರ್‌ ಅನ್ನು ನಮೂದಿಸಬೇಕು.
3 ನಿಮಗೆ ಅನ್ವಯವಾಗುವ ರೀತಿದಂಡ ಪಾವತಿ ಮಾಡಿರುವುದನ್ನು ದೃಢೀಕರಿಸಿಕೊಳ್ಳಿ.
4 ಪಾವತಿ ವಿಧಾನಆಯ್ಕೆ ಮಾಡಿ.
5 ಪ್ಯಾನ್‌ ನಂಬರ್‌ ಮತ್ತು ಆದಾಯ ತೆರಿಗೆ ಮೌಲ್ಯಮಾಪನ ವರ್ಷ ಆಯ್ಕೆ ಮಾಡಿ, ವಿಳಾಸ ನಮೂದಿಸಿ.
6 ಅನಂತರ ಬರುವ ಕ್ಯಾಪc ಸಂಖ್ಯೆ ಯನ್ನು ನಮೂದಿಸಿ, ಪ್ರೊಸೀಡ್‌ ಅನ್ನು ಕ್ಲಿಕ್‌ ಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next