Advertisement

ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿ: ಪ್ರೊ|ತೇಜಸ್ವಿ

05:41 PM Feb 03, 2022 | Team Udayavani |

ಧಾರವಾಡ: ಇಂದು ಕೃಷಿ ಪದವೀಧರರು ತಮ್ಮ ಶಿಕ್ಷಣದ ನಂತರ ನೌಕರಿಗಳನ್ನು ಹುಡುಕಿಕೊಂಡು ಹೋಗದೆಯೇ ಅನ್ನ ಉತ್ಪಾದಕರಾಗಿ ಉತ್ತಮ ಸಮಾಜ ನಿರ್ಮಾಣ ಮಾಡುವತ್ತ ಗಮನ ನೀಡಬೇಕು ಎಂದು ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿವಿ ಕುಲಪತಿ ಪ್ರೊ| ತೇಜಸ್ವಿ ಕಟ್ಟಿಮನಿ ಹೇಳಿದರು.

Advertisement

ನಗರದ ಕೃಷಿ ವಿವಿಯಲ್ಲಿ ಡಾ| ಎಸ್‌. ಡಬ್ಲೂ. ಮೆಣಸಿನಕಾಯಿ ಕೃಷಿ ಹಾಗೂ ಸಂಶೋಧನೆ ಪ್ರತಿಷ್ಠಾನದ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಕ್ಕಲುತನ ಎಂಬುದು ನಮ್ಮ ಸಂಸ್ಕೃತಿಯಾಗಿದ್ದು, ಅನ್ನ ನೀಡುವ ವಿದ್ಯೆಯಾಗಿದೆ. ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ನಮ್ಮ ಯುವಕರು ಮಾಡಬೇಕು. ಪ್ರತೀಕಾರ ತೆಗೆದುಕೊಳ್ಳದೇ, ಅಹಂಕಾರ ಪಡದೇ ರೈತರಿಗೆ ಅನುಕೂಲವಾಗುವ ನಾವೀನ್ಯಪೂರ್ಣ ತಾಂತ್ರಿಕತೆಗಳನ್ನು ಕಂಡು ಹಿಡಿದು ರೈತ ಸಮುದಾಯಕ್ಕೆ ಒದಗಿಸಬೇಕು ಎಂದರು.

ನಮ್ಮ ರೈತರು ನೈಸರ್ಗಿಕ ವಿಜ್ಞಾನಿಗಳಾಗಿದ್ದು, ತರಬೇತಿ ಪಡೆದ ವಿಜ್ಞಾನಿಗಳ ಮಧ್ಯೆ ಸಾಕಷ್ಟು ಅಂತರವಿದೆ. ಇಂದು ಕೃಷಿ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಬದಲಾವಣೆಗಳಾಗುತ್ತಿದ್ದು, ಕಲ್ಪನೆಗೂ ಎಟುಕದ ರೀತಿಯ ವೈಜ್ಞಾನಿಕ ಹಾಗೂ ತಾಂತ್ರಿಕ ಮುನ್ನಡೆಗಳ ಕಾರಣದಿಂದಾಗಿ ದೇಶವು ಆಹಾರದಲ್ಲಿ ಸ್ವಾವಲಂಬನೆ ಪಡೆದುಕೊಂಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಸಾಂಕ್ರಾಮಿಕ ರೋಗಗಳು, ವಿಶ್ವದಾದ್ಯಂತ ಪಸರಿಸುತ್ತಿರುವ ರೋಗರುಜಿನಗಳನ್ನು ಮೆಟ್ಟಿ ನಿಂತು ಕೃಷಿ ಫಸಲನ್ನು ಪಡೆಯಬೇಕು ಎಂದು ಹೇಳಿದರು.

ಕೃಷಿ, ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ ಇವೇ ಮುಂತಾದ ಕೃಷಿ ಅಂಶಗಳನ್ನು ಒಳಗೊಂಡು ಆರ್ಥಿಕ ಪ್ರಗತಿ ಸಾಧಿಸಬೇಕಾಗಿದೆ. ಸಾಮಾಜಿಕ ನ್ಯಾಯ, ಸಮಾನತೆ, ವೈಜ್ಞಾನಿಕ ಮುನ್ನಡೆ, ರಾಷ್ಟ್ರೀಯ ಏಕತೆ ಹಾಗೂ ಸಾಂಸ್ಕೃತಿಕ ಸಂರಕ್ಷಣೆ ಮೂಲಕ ಜಾಗತಿಕ ಮುಂದಾಳುತನವನ್ನು ಇಂದು ಕೃಷಿ ಪದವೀಧರರು ಸಾ ಧಿಸಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿವಿ ಕುಲಪತಿ ಡಾ| ಮಹಾದೇವ ಚೆಟ್ಟಿ ಮಾತನಾಡಿ, ನಾವೀನ್ಯಪೂರ್ಣ ಉದ್ಯಮಶೀಲತೆಯ ಅಭಿವೃದ್ಧಿಗೆ ವಿವಿ ಒತ್ತು ಕೊಡುತ್ತಿದ್ದು, ವಿವಿಧ ವಿಷಯಾತ್ಮಕ ವಿಶ್ವವಿದ್ಯಾಲಯಗಳನ್ನು ಒಂದೇ ಸೂರಿನಡಿ ತರುವ ಪ್ರಯತ್ನವನ್ನು ರಾಜ್ಯ ಸರ್ಕಾರದ ನಿರ್ದೇಶನದಲ್ಲಿ ಮಾಡಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಟೇಬಲ್‌ ಟೆನ್ನಿಸ್‌ ಪಂದ್ಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿಶ್ರಾಂತ ಕುಲಪತಿ ಡಾ| ಜೆ.ವಿ. ಗೌಡ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಡಾ| ಎಚ್‌.ಇ. ಶಶಿಧರ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಶಶಿಮೌಳಿ ಕುಲಕರ್ಣಿ, ಯಲ್ಲನಗೌಡ ಪಾಟೀಲ, ಮಲ್ಲೇಶ ಪಿ., ಎಲ್‌.
ಎಸ್‌. ಅಜಗಣ್ಣವರ, ಡಾ| ಜೆ.ಎಚ್‌. ಕುಲಕರ್ಣಿ, ಡಾ| ಎಂ.ಎನ್‌. ಶೀಲವಂತರ, ಡಾ| ಎ.ಎಸ್‌. ಪ್ರಭಾಕರ, ಡಾ| ಯು.ಜಿ. ನಲವಡಿ ಸೇರಿದಂತೆ ಡಾ| ಎಸ್‌.ಡಬ್ಲೂ. ಮೆಣಸಿನಕಾಯಿ ಫೌಂಡೇಶನ್‌ನ ಪದಾಧಿ ಕಾರಿಗಳು, ವಿದ್ಯಾರ್ಥಿಗಳು ಇದ್ದರು. ಡಾ| ಬಿ.ಡಿ. ಬಿರಾದಾರ ಸ್ವಾಗತಿಸಿ, ಪರಿಚಯಿಸಿದರು. ಡಾ| ನಂದಿನಿ ನಿರೂಪಿಸಿದರು. ಡಾ| ಎಸ್‌.ಟಿ. ಕಜ್ಜಿಡೋಣಿ ವಂದಿಸಿದರು.

Advertisement

ವಿದ್ಯಾರ್ಥಿಗಳು ಸ್ವಯಂ ಕೃಷಿಕ ರಾಗಬೇಕಲ್ಲದೇ, ಅನುಭವಕ್ಕೆ ಆದ್ಯತೆ ನೀಡಬೇಕು. ಜ್ಞಾನ ಮತ್ತು ಕೆಲಸದ ಶ್ರದ್ಧೆ ಜೊತೆ ಜೊತೆಯಾಗಿ ಸಾಗಬೇಕು. ಕೃಷಿ ಸಂಶೋಧನೆಯು ಕ್ಯಾಂಪಸ್‌ಗಳಿಗೆ ಸೀಮಿತಗೊಳ್ಳದೇ ರೈತರ ಹೊಲಗಳಲ್ಲಿ ಸಂಶೋಧನೆಯಾಗಬೇಕು. ಕ್ಲಾಸ್‌ ರೂಮ್‌ ಬೋಧನೆ ಹಾಗೂ ಕ್ರಿಯಾತ್ಮಕ ಅನುಭವ ಕನಿಷ್ಟ 50:50 ಅನುಪಾತದಲ್ಲಿರಬೇಕು.

ಪ್ರೊ| ತೇಜಸ್ವಿ ಕಟ್ಟಿಮನಿ, ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು
ವಿವಿ ಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next