Advertisement

ಫಾರ್ಮುಲಾ 22 ಏನೇ ಆಗ್ಲಿ ಡೋಂಟು ವರಿ.. ಯಾರೇ ಸಿಕ್ರು ಹಲ್ಲು ಕಿರೀ! 

03:45 AM Jan 31, 2017 | |

ಪಿಚ್ಚರ್‌ ನೋಡ್ಲಿ, ಕ್ಯಾಮೆರಾ ಹಿಡ್ಕೊಳ್ಳಿ, ಫೇಸ್‌ಬುಕ್ಕಲ್ಲಿ ಸ್ಟೇಟಸ್‌ ಅಪ್‌ಡೇಟ್‌ ಮಾಡ್ಲಿ ಅಲ್‌ ಹೋಗ್ಲಿ ಇಲ್‌ ಬರ್ಲಿ ಏನೇ ಮಾಡ್ಲಿ ಖುಷಿಯೇ ಅಲ್ಟಿಮೇಟು. ಯಾರೂ ಕೂಡ ದುಃಖದಲ್ಲಿ ಓಡಾಡ್ಬೇಕು ಅಂತ ಬಯಸಲ್ಲ. ಹಾಗಂತ ಖುಷಿಯಾಗಿರುವವರೆಲ್ಲರ ಜೀವನದಲ್ಲಿ ಕಣ್ಣೀರಿಲ್ಲ, ನೋವಿಲ್ಲ ಅನ್ನೋ ಅರ್ಥ ಅಲ್ಲ. ಖುಷಿಯಾಗಿರೋರು ಬೇಸರ ತನ್ನನ್ನು ಆಳದಂತೆ ನೋಡಿಕೊಂಡಿರುತ್ತಾರೆ. ಖುಷಿಯನ್ನು ಮಾತ್ರವೇ ಸ್ವೀಕರಿಸಿರುತ್ತಾರೆ. 

Advertisement

ಈ ಜಗತ್ತಿನಲ್ಲಿ ಖುಷಿಯಾಗಿರುವವರ ಹ್ಯಾಬಿಟ್‌ಗಳೇನು ಅಂತ ಹುಡುಕಿದಾಗ ದೊರಕಿದ್ದು ಇಷ್ಟು.. ಖುಷಿಯೇ ಅಲ್ಟಿಮೇಟು ಅಂತ ನೀವಂದುಕೊಳ್ಳೋದಾದ್ರೆ ಇವತ್ತಿನಿಂದ ನಿಮ್ಮದೂ.

1. ಎದ್ದೇಳು. ಕಣ್‌ ಬಿಟ್ಟಾಗ ಅಚ್ಚರಿಯಿಂದಲೇ ನೋಡುವುದು. ಮಗುವಿನ ಅಚ್ಚರಿ. ವಾವ್‌ ಎಷ್ಟು ಚೆಂದ ಇದೆ ಈ ವಾತಾವರಣ ಎಂದುಕೊಳ್ಳುವುದು. 

2. ಹ್ಯಾಪ್ಪಿ ಪಾಸಿಟಿವ್‌ ಜನಗಳನ್ನು ಜೊತೆಯಲ್ಲಿರಿಸಿಕೊಂಡಿರುವುದು. ಮುಗª ಸ್ನೇಹ ಕಾಪಾಡುವುದು. ಕೂತಾಗ ನೀನೇ ಸರಿ ಅಂತ ಹೇಳಿ ಎಬ್ಬಿಸಿ ಯುದ್ಧಕ್ಕೆ ಕಳಿಸುವ ಫ್ರೆಂಡುಗಳನ್ನು ಪ್ರೀತಿಸುವುದು.

3. ಬೇರೆಯವರು ಹೇಗಿದ್ದಾರೋ ಹಾಗೇ ಸ್ವೀಕರಿಸುವುದು. ಅವರ ರೀತಿಯನ್ನು ಗೌರವಿಸುವುದು. ಪ್ರೀತಿಯಿಂದಲೇ ಅವರನ್ನು ನೋಡೋದು. ಅವರಲ್ಲೂ ಖುಷಿ ತರಲು ಯತ್ನಿಸುವುದು.

Advertisement

4. ಪ್ರತಿಕ್ಷಣ ಹೊಸದು ತಿಳಿದುಕೊಳ್ಳುತ್ತಲೇ ಇರುವುದು. ಅಪ್‌ಡೇಟ್‌ ಆಗ್ತಾ ಇರೋದು. ಹೊಸ ಸಾಹಸಗಳನ್ನು ಮಾಡೋದು. ಸ್ಕೈ ಡೈವಿಂಗು, ಸ್ಕೀಯಿಂಗಿನ ಬೆನ್ನು ಹತ್ತೋದು.

5. ಸಮಸ್ಯೆ ಬಂದ ತಕ್ಷಣ ಅಯ್ಯೋ ಹೀಗಾಯ್ತಲ್ಲ ಅಂತಂದುಕೊಳ್ಳುವ ಸೀನೇ ಇಲ್ಲ. ತಕ್ಷಣ ಪರಿಹಾರ ಹುಡುಕಲು ಮುನ್ನುಗ್ಗುವುದು. ಕೆಲಸ ಕೆಲಸ ಕೆಲಸ ಅಷ್ಟೇ. ಸಮಸ್ಯೆಯಿಂದ ಮೂಡ್‌ ಹಾಳಾಗದಂತೆ ನೋಡಿಕೊಳ್ಳುವುದು.

6. ಮನಸ್ಸು ಏನು ಹೇಳುತ್ತದೋ ಅದನ್ನೇ ಮಾಡುವುದು. ಪ್ರೀತಿ ಇರುವ ಕೆಲಸ ಎಷ್ಟು ಕಷ್ಟವಾದರೂ ಹಿಂಜರಿಯದೇ ಇರುವುದು. ಇಷ್ಟದ ಕೆಲಸ ಎಂಜಾಯ್‌ ಮಾಡೋದು.

7. ಮಲ್ಲಿಗೆ ಅರಳುವುದನ್ನು ನೋಡಲು ಸಮಯ ಇರಲಿ. ಚಿಟ್ಟೆ ಹಾರೋ ಚೆಂದ ಮತ್ತೆ ಸಿಗುವುದಿಲ್ಲ ಅನ್ನೋದು ನೆನಪಿರಲಿ. ಸಣ್ಣ ಸಣ್ಣ ಸಂತೋಷಗಳನ್ನು ಅನುಭವಿಸೋದು. ಕೆಲಸ ಯಾವಾಗ್ಲೂ ಇರುತ್ತದೆ. ಖುಷಿ ದೊಡ್ಡದು.

8. ನಗುತ್ತಿರೋದು. ತುಂಬಾ ಸೀರಿಯಸ್ಸಾಗಿಲ್ಲದೆ ಬಂದಿದ್ದನ್ನು ನಗುತ್ತಲೇ ಸ್ವೀಕರಿಸೋದು. ಯಾರೂ ಪಫೆìಕ್ಟ್ ಅಲ್ಲ. ತನ್ನ ತಪ್ಪಿಗೆ ತಾನೇ ನಕ್ಕೊಂಡು, ನಾನೇ ಮಂಗ ಅಂತಂದುಕೊಂಡಿರುವುದು.

9. ಆವಾಗಿನ ಕೋಪವನ್ನು ಆಗಲೇ ಬಿಟ್ಟುಬಿಡುವುದು. ಸಿಟ್ಟಲ್ಲೇ ಇದ್ದರೆ ನೋಯುವುದು ನಾವೇ ಅನ್ನೋ ಪರಮಸತ್ಯವನ್ನು ತಿಳಿದುಕೊಂಡಿರುವುದು. 

10. ಜೊತೆಗಿರುವವರ ಹತ್ತಿರ ಪ್ರೀತಿಯಿಂದ ನಡೆದುಕೊಳ್ಳುವುದು. ಪ್ರಾಮಾಣಿಕವಾಗಿ ಯೂ ಆರ್‌ ಮೈ ಸನ್‌ಶೈನ್‌ ಅಂದಾಗ ಪ್ರೀತಿಪಾತ್ರರಿಗಾಗೋ ಖುಷಿ ಅದ್ಭುತ ಅನ್ನುವುದನ್ನು ತಿಳಿದುಕೊಂಡಿರುವುದು.

11. ಎಂಥಾ ಸನ್ನಿವೇಶದಲ್ಲೂ ಪ್ರೀತಿ ಪಾತ್ರರ ಜೊತೆಗೇ ಇರುವುದು. ಐಯಾಮ್‌ ವಿತ್‌ ಯೂ ಅನ್ನುವುದನ್ನು ತೋರಿಸಿಕೊಳ್ಳುವುದು. ಪ್ರೀತಿ ಚಿರಾಯು. ನಗು ಕೊನೆವರೆಗೂ ಇರುತ್ತದೆ.

12. ಪ್ರಾಮಾಣಿಕವಾಗಿ ಬದುಕೋದು. ಪ್ರತಿಯೊಂದು ಹೆಜ್ಜೆಯೂ ಪ್ರಾಮಾಣಿಕವಾಗಿರಬೇಕು. ನಮಗೆ ನಾವೇ ಸುಳ್ಳು ಹೇಳಿದರೆ ನೋವು ತಪ್ಪಿದ್ದಲ್ಲ ಎಂದು ತಿಳಿದುಕೊಂಡಿರುವುದು.

13. ಓದುವುದು. ಧ್ಯಾನ ಮಾಡುವುದು. ಮೌನವಾಗಿರೋದು. ಸೈಲೆನ್ಸನ್ನು ಆಸ್ವಾದಿಸೋದು.

14. ಅವರಿಷ್ಟದಂತೆ ಬದುಕುವುದು. ಅವರಿಗಿಷ್ಟವಾಗುವಂತೆ ಜೀವಿಸೋದು. ಅವರವರನ್ನು ಅವರವರ ಪಾಡಿಗೆ ಬಿಟ್ಟು ಬಿಡೋದು. 

15. ಆಗೋದೆಲ್ಲಾ ಒಳ್ಳೇದಕ್ಕೆ. ಬದುಕಲ್ಲಿ ಏನೇ ನಡೆದರೂ ಅದರಲ್ಲಿ ಪಾಸಿಟಿವ್‌ ಅಂಶಗಳಿಗೆ ಹೆಚ್ಚು ಒತ್ತು ಕೊಡುವುದು. ಪಾಸಿಟಿವ್‌ ಅಂಶವನ್ನು ಮಾತ್ರ ನೋಡುವುದು. ನೆಗೆಟಿವ್‌ ಇದ್ದರೆ ಮರೆತು ಬಿಡುವುದು.

16. ಎಲ್ಲರನ್ನೂ ಇಷ್ಟಪಡುವುದು. ಅವರು ಹೇಗಿದ್ದರೂ ಯಾರಾದರೂ. ಹೀಗಿದ್ದರೆ ಮಾತ್ರ ಇಷ್ಟವಾಗುತ್ತಾರೆ ಅನ್ನುವ ಗೋಡೆ ಇರಬಾರದು. ಅವರ ಬದುಕು ಅವರಿಗೆ. ನಿಮ್ಮ ಖುಷಿ ನಿಮಗೆ.

17. ಏನೋ ಒಂದು ಹೊಳೆಯತ್ತೆ. ಏನೋ ಒಂದು ಮಾಡ್ಬೇಕು ಅನ್ನಿಸತ್ತೆ. ಅದನ್ನು ಮಾಡಲು ಬೇಕಾದ ಎಲ್ಲವನ್ನೂ ಮಾಡೋದು. ಅದಕ್ಕೆ ಪೂರಕವಾದ ವಿಷಯಗಳನ್ನು ಕಲಿಯುತ್ತಾ ಹೋಗೋದು.

18. ಯಾವುದು ಬದಲಾಗುವುದಿಲ್ಲವೋ ಅದನ್ನು ಇದ್ದಂತೆ ಸ್ವೀಕರಿಸೋದು. ಕೆಲವೊಂದನ್ನು ಬದಲಿಸಲಿಕ್ಕಾಗಲ್ಲ. ವ್ಯಕ್ತಿ ಇರಬಹುದು, ವಸ್ತು ಇರಬಹುದು. ಅದನ್ನು ಹಾಗೇ ಒಪ್ಪಿಕೊಳ್ಳೋದು.

19. ಅವರನ್ನು ಅವರು ಇಷ್ಟ ಪಡೋದು. ಅವರು ಇಷ್ಟವಾಗುತ್ತಾ ಹೋದ ಹಾಗೆ ಉಳಿದದ್ದೆಲ್ಲಾ ಇಷ್ಟವಾಗುತ್ತದೆ. ಲೈಫ್ ಇಸ್‌ ಬ್ಯೂಟಿಫ‌ುಲ್‌ ಅನ್ನಿಸುತ್ತದೆ.

20. ನೀವಲ್ಲದ ವ್ಯಕ್ತಿಯಾಗಲು ಯಾವತ್ತೂ ಪ್ರಯತ್ನಿಸದಿರಿ. ನೀವು ಯಾವತ್ತಿದ್ದರೂ ನೀವೇ. ಯಾರೋ ಏನೋ ಹೇಳಿದರೆ ಅದಕ್ಕೆ ತಲೆಕೆಡಿಸಿಕೊಳ್ಳಬೇಕಿಲ್ಲ. ನಿಮ್ಮಿಷ್ಟ ನಿಮ್ಮದು. ನಿಮ್ಮ ತಾಕತ್ತು ನಿಮ್ಮದು. ನಿಮ್ಮ ಲೈಫ‌ು ನಿಮ್ಮದೇ.

21. ಖುಷಿಯಾಗಿರುವವರು ಅವರ ಮೂಡಿಗೆ, ಅವರ ಖುಷಿಗೆ, ಅವರ ಬೇಸರಕ್ಕೆ ಅವರೇ ಕಾರಣಕರ್ತರು ಅನ್ನೋ ಪರಮಸತ್ಯವನ್ನು ತಿಳಿದುಕೊಂಡಿರುತ್ತಾರೆ. ಎಲ್ಲರೂ ತಿಳಿದುಕೊಳ್ಳಬೇಕಾದದ್ದು ಅದನ್ನೇ. BE TRUE TO YOURSELF. 

22.ಕಪ್ಪೆ ಚಿಪ್ಪು ಎಲ್ಲೋ ಇರತ್ತೆ. ಸ್ವಾತಿ ಮಳೆ ಯಾವಾಗ್ಲೋ ಸುರಿಯತ್ತೆ. ಮುತ್ತು ಮತ್ಯಾರಿಗೋ ಸಿಗತ್ತೆ, ಇನ್ಯಾರೋ ಅದನ್ನು ಕತ್ತಿಗೆ ಹಾಕ್ಕೋತಾರೆ. ನೋ ರಿಗ್ರೆಟ್ಸ್‌.

– ಸಾರಿಕಾ

Advertisement

Udayavani is now on Telegram. Click here to join our channel and stay updated with the latest news.

Next