Advertisement

ಮಾದಕದ್ರವ್ಯದಿಂದ ದೇಶ ದುರ್ಬಲಗೊಳಿಸಬೇಡಿ

11:02 AM Sep 17, 2018 | Harsha Rao |

ಉಡುಪಿ: ವಿಶ್ವದಲ್ಲಿ ಅತೀ ಹೆಚ್ಚು ಯುವಕರಿರುವ ಸಶಕ್ತ ದೇಶವನ್ನು ಮಾದಕದ್ರವ್ಯದಿಂದ ಅಶಕ್ತರನ್ನಾಗಿ ಮಾಡಬೇಡಿ ಎಂದು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಹೇಳಿದರು.

Advertisement

ಅವರು ರವಿವಾರ ಮಲ್ಪೆ ಸಮುದ್ರ ಕಿನಾರೆಯಲ್ಲಿ, ಜಿಲ್ಲಾ ಪೊಲೀಸ್‌, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಪ್ರಸ್‌ ಕ್ಲಬ್, ಉಡುಪಿ ಪ್ರಸ್‌ ಫೋಟೋಗ್ರಾಫ‌ರ್ಸ್‌ ಅಸೋಸಿಯೇಶನ್‌ ಮತ್ತು ಮಲ್ಪೆ ಅಭಿವೃದ್ಧಿ ಸಮಿತಿಗಳ ಸಹಯೋಗದಲ್ಲಿ ಮಾದಕ ವ್ಯಸನಗಳ ವಿರುದ್ಧ ಮಾಸಾಚರಣೆ ಅಂಗವಾಗಿ ನಡೆದ ಕಾಟೂìನ್‌ – ಮರಳು ಶಿಲ್ಪ ರಚನೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮಾದಕ ವ್ಯಸನದಿಂದ ವ್ಯಕ್ತಿ ತಾನು ಅಧಃ ಪತನವಾಗುವುದರೊಂದಿಗೆ ಕುಟುಂಬ, ಸಮಾಜವನ್ನು ಅಧಃ ಪತನ ದತ್ತ ಕೊಂಡೊಯ್ಯುತ್ತಿದ್ದಾನೆ. ಈ ವ್ಯಸನದ ವಿರುದ್ಧ ಹೋರಾಡುವುದು ಪೋಲಿಸರೊಂದಿಗೆ ಪ್ರತಿಯೊಬ್ಬನ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು.

ಉಡುಪಿ ಎಸ್‌ಪಿ ಲಕ್ಷ್ಮಣ ನಿಂಬರಗಿ  ಅಧ್ಯಕ್ಷತೆ ವಹಿಸಿದ್ದರು. ಚಿತ್ರ ಬರೆಯವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವ್ಯಂಗ್ಯಚಿತ್ರಕಾರ ಜೇಮ್ಸವಾಜ್‌ ಅವರು ಮೊದಲು ನಾವು ಮಾದಕ ವಸ್ತುಗಳನ್ನು ಸೇವಿಸುತ್ತೇವೆ, ಅನಂತರ ಅದೇ ನಮ್ಮನ್ನು ಸೇವಿಸುತ್ತದೆ, ಅಷ್ಟರಲ್ಲಿ ಸರಿಪಡಿಸಲಾಗದ ದುರಂತ ಸಂಭವಿಸಿರುತ್ತದೆ, ಅದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳಬೇಕು ಎಂದರು.

ಅತಿಥಿಯಾಗಿದ್ದ ಕುಂದಾಪುರ ಉಪ ವಿಭಾಗಾಧಿಕಾರಿ ಭೂಬಾಲನ್‌, ಅನೇಕ ಬಾರಿ ಸರಕಾರವೊಂದರಿಂದಲೇ ಪರಿ ಹಾರ ಆಗದ ಸಮಸ್ಯೆಗಳು ಸಮಾಜ ಕೈಜೋಡಿಸುವುದರಿಂದ ಸಾಧ್ಯ ವಾಗುತ್ತದೆ, ಮಾದಕ ವ್ಯಸನ ಅಂತಹದ್ದೇ ಒಂದು ಸಮಸ್ಯೆ ಎಂದರು.

Advertisement

ಫೋಟೋಗ್ರಾಫ‌ರ್ಸ್‌ ಅಸೋಸಿ ಯೇಶನ್‌ ಅಧ್ಯಕ್ಷ ಜನಾರ್ದನ ಕೊಡ ವೂರು, ಮಲ್ಪೆ ಅಭಿವೃದ್ಧಿ ಸಮಿತಿಯ ಸಂಯೋಜಕ ಸುದೇಶ್‌ ಶೆಟ್ಟಿ, ಪತ್ರಕರ್ತರ ಸಂಘದ ಸಹ ಕಾರ್ಯದರ್ಶಿ ಮೈಕೆಲ್‌ ರೋಡ್ರಿಗಸ್‌ ಉಪಸ್ಥಿತರಿದ್ದರು. ಪತ್ರಕರ್ತ ನಾಗರಾಜ್‌ ವರ್ಕಾಡಿ ಸ್ವಾಗತಿಸಿ ವಂದಿಸಿದರು. ಇರ್ಷಾದ್‌ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.
ಜೇಮ್ಸವಾಜ್‌, ಜೀವನ್‌ ಶೆಟ್ಟಿ, ತ್ರಿವರ್ಣ ವಿ.ಎಂ. ಅವರು ಮಾದಕ ವಸ್ತು ವಿರುದ್ಧ ಜಾಗೃತಿ ಕಾಟೂìನು ಗಳನ್ನು ಬಿಡಿಸಿದರೆ, ಹರೀಶ್‌ ಸಾಗಾ, ಸುನಿಲ್‌ ಓಂತಿಬೆಟ್ಟು ಮತ್ತು ಜಗದೀಶ್‌ ಆಚಾರ್ಯ ಮತ್ತು ತಂಡದವರು ಮರಳು ಶಿಲ್ಪಗಳನ್ನು ರಚಿಸಿದರು.

ಕಾನೂನಿನಿಂದಷ್ಟೇ ನಿಗ್ರಹ ಅಸಾಧ್ಯ
ಕಾನೂನಿನ ಮೂಲಕ ಮಾದಕ ವ್ಯಸನ ನಿರ್ಮೂಲನೆ ಅಸಾಧ್ಯ, ಪೋಷಕರು ತಮ್ಮ ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ಇದರಿಂದ ಸಮಾಜದಿಂದಲೇ ಈ ಪಿಡುಗನ್ನು ಒ¨ªೋಡಿಸಬಹುದು. ಕಾನೂನು ಪಾಲನೆಯೊಂದಿಗೆ ಜಾಗೃತಿ ಮೂಡಿಸುವುದು ಪೊಲೀಸರ ಜವಾಬ್ದಾರಿ. ಈ ಕರ್ತವ್ಯಕ್ಕೆ ಪತ್ರಕರ್ತರು, ಕಲಾವಿದರು ಕೈಜೋಡಿಸಿರುವುದು ಶ್ಲಾಘನೀಯ.
– ರವಿಕಾಂತೇ ಗೌಡ, ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 

Advertisement

Udayavani is now on Telegram. Click here to join our channel and stay updated with the latest news.

Next