Advertisement

ಅನ್ನ-ನೀರು ವ್ಯರ್ಥ ಮಾಡದಿರಿ

01:10 PM Apr 06, 2022 | Team Udayavani |

ಯಾದಗಿರಿ: ಮನುಷ್ಯ ಜೀವಿಸಲು ಅನ್ನ, ನೀರು ಮತ್ತು ಆಹಾರ ಬೇಕೇ ಬೇಕು. ಹೀಗಾಗಿ ಇದ್ಯಾವುದನ್ನು ವ್ಯರ್ಥ ಮಾಡಬಾರದು ಎಂದು ಹೆಡಗಿಮದ್ರಾದ ಶ್ರೀಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮಿಗಳು ಸಲಹೆ ನೀಡಿದರು.

Advertisement

ನಗರದ ಶಾಸಕರ ಜನಸಂಪರ್ಕ ಕಚೇರಿ ಪಕ್ಕದಲ್ಲಿ ಮಂಗಳವಾರ ಮುದ್ನಾಳ್‌ ಅಭಿಮಾನಿ ಬಳಗದಿಂದ ಆರಂಭಿಸಿದ ನೀರಿನ ಅರವಟ್ಟಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಬೇಸಿಗೆಯಲ್ಲಿ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಿರುತ್ತದೆ. ಅಲ್ಲದೇ ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಿದ್ದು, ಜನತೆ ತಂಪು ಪಾನೀಯಗಳ ಮೊರೆ ಹೋಗುವಂತಾಗಿದೆ ಎಂದರು.

ಗ್ರಾಮೀಣ ಭಾಗದಿಂದ ನಗರಕ್ಕೆ ಬರುವ ಜನತೆಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಮುದ್ನಾಳ್‌ ಅಭಿಮಾನಿಗಳು ಉತ್ತಮ ಕಾರ್ಯ ಮಾಡಿದ್ದಾರೆ. ಜಲದಾನ ಅತ್ಯಂತ ಶ್ರೇಷ್ಠ ಕಾರ್ಯ. ಈ ಪ್ರದೇಶದ ಸುತ್ತಮುತ್ತ ಬ್ಯಾಂಕ್‌, ಆಸ್ಪತ್ರೆ ಮತ್ತು ಸರ್ಕಾರಿ ಕಚೇರಿಗಳು ಇರುವುದರಿಂದ ಈ ಅರವಟಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಹೇಳಿದರು.

ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ್‌, ಪ್ರಮುಖರಾದ ರಾಚನಗೌಡ ಮುದ್ನಾಳ್‌, ಶರಣಗೌಡ ಬಾಡಿಯಾಳ, ಸಿದ್ಧನಗೌಡ ಕಾಡಂನೂರ, ಶರಣಗೌಡ ಕಾಳೆಬೆಳಗುಂದಿ, ರಮೇಶ ದೊಡ್ಮನಿ, ನಗರಸಭೆ ಸದಸ್ಯ ಸುರೇಶ ಅಂಬಿಗೇರ, ಮಾರುತಿ ಕಲಾಲ್‌, ಹನುಮಂತ ವಲ್ಯಾಪುರೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next