Advertisement

ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಬೇಡ: ಜೋಶಿ

06:50 AM Nov 08, 2018 | Team Udayavani |

ಹುಬ್ಬಳ್ಳಿ: “ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರದ ಪ್ರಕಾರ ನನ್ನ ಹೆಸರು ಮುದ್ರಿಸುವುದು ಬೇಡ’ ಎಂದು ಸಂಸದ ಪ್ರಹ್ಲಾದ ಜೋಶಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. 

Advertisement

ಟಿಪ್ಪು ಜಯಂತಿ ಆಚರಣೆಗೆ ಪ್ರಾರಂಭದಿಂದಲೂ ನಾಡಿನ ಜನತೆ ವಿರೋಧ ವ್ಯಕ್ತಪಡಿಸಿದ್ದಾರೆ. ಟಿಪ್ಪು ಕನ್ನಡ ಮತ್ತು ಹಿಂದೂ ವಿರೋಧಿಯಾಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಇಂತಹ ವಿವಾದಾತ್ಮಕ ವ್ಯಕ್ತಿಯ ಜಯಂತಿ ಆಚರಣೆಗೆ ನನ್ನ ವಿರೋಧವಿದೆ. ಟಿಪ್ಪು ಕ್ರೌರ್ಯದ ಸಂಕೇತ, ಕನ್ನಡ ವಿರೋಧಿ. ಇಂಥವರ ಜಯಂತಿ ಆಚರಣೆಗೆ ಸಾರ್ವಜನಿಕರ ಬೊಕ್ಕಸದಿಂದ ವೆಚ್ಚ ಮಾಡುವುದು ಅಕ್ಷಮ್ಯ ಅಪರಾಧ ಎಂದು ಜೋಶಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next