Advertisement

ಖಾಸಗಿ ವೈದ್ಯರು ಕೋವಿಡ್‌ ಲಕ್ಷಣಗಳಿಗೆ ಚಿಕಿತ್ಸೆ ನೀಡಬೇಡಿ

04:28 PM May 20, 2021 | Team Udayavani |

ಯಳಂದೂರು: ಖಾಸಗಿ ಕ್ಲಿನಿಕ್‌ಗಳಲ್ಲಿವೈದ್ಯರು ಜ್ವರ, ನೆಗಡಿ, ಕೆಮ್ಮು,ಬೇಧಿಯಂತಹ ಕಾಯಿಲೆಗಳಿಗೆ ಚಿಕಿತ್ಸೆನೀಡಬಾರದು, ಇವರನ್ನು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಿಸಲು ಶಿಫಾರಸು ಮಾಡಬೇಕು ಎಂದು ಶಾಸಕ ಎನ್‌.ಮಹೇಶ್‌ ಸೂಚಿಸಿದರು.

Advertisement

ತಾಪಂ ಕಚೇರಿ ಆವರಣದಲ್ಲಿಬುಧವಾರ ನಡೆದ ಟಾಸ್ಕ್ಫೋರ್ಸ್‌ಸಮಿತಿ ಸಭೆಯಲ್ಲಿ ಮಾತನಾಡಿದ ಅವರು,ತಾಲೂಕಿನಲ್ಲಿ 8 ಕ್ಲಿನಿಕ್‌ ಹಾಗೂ ನರ್ಸಿಂಗ್‌ಹೋಂ ಇದೆ. ಇಲ್ಲಿನ ವೈದ್ಯರಿಗೆ ಈಗಾಗಲೇ ಈ ಬಗ್ಗೆ ಸೂಚಿಸಲಾಗಿದೆ. ಸಾರ್ವಜನಿಕರು ಇಂತಹ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆಪಡೆದುಕೊಂಡಲ್ಲಿ ಅದು ತಾತ್ಕಾಲಿಕಶಮನವಷ್ಟೆ, ನಂತರ ಕೋವಿಡ್‌ ಲಕ್ಷಣಇದ್ದರೆ ಇದು ಉಲ½ಣವಾಗಿ ಕಡೆಯಹೊತ್ತಿನಲ್ಲಿ ಕೋವಿಡ್‌ ಕೇಂದ್ರಕ್ಕೆ ಬಂದರೆಪ್ರಾಣಕ್ಕೆ ಆಪತ್ತು ಬರುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದರು.

2 ಆ್ಯಂಬುಲೆನ್ಸ್‌ ಕೊಡುಗೆ: ಶಾಸಕರಪ್ರದೇಶಾಭಿವೃದ್ಧಿಯ ಅನುದಾನದಿಂದಶೇ.25ರಷ್ಟು ಕೋವಿಡ್‌ಗೆ ಬಳಸಿಕೊಳ್ಳಲು ಅವಕಾಶವಿದೆ. ಇದರಲ್ಲಿ ಯಳಂದೂರುಹಾಗೂ ಸಂತೆಮರಹಳ್ಳಿ ಆಸ್ಪತ್ರೆಗಳಿಗೆ 2ಆ್ಯಂಬುಲೆನ್ಸ್‌ ಅವಶ್ಯಕತೆ ಇದ್ದು ಇದನ್ನು ಖರೀದಿಸಲು ಕ್ರಮ ವಹಿಸಲಾಗಿದೆ.ಇದರೊಂಗೆ ಕೊಳ್ಳೇಗಾಲ ಉಪವಿಭಾಗಆಸ್ಪತ್ರೆಗೆ 82 ಲಕ್ಷ ರೂ. ವೆಚ್ಚದಲ್ಲಿ ಶಾಶ್ವತ ಆಕ್ಸಿಜನ್‌ ಜನರೇಟರ್‌ ಅಳವಡಿಸಲು ಈಗಾಗಲೇ ಕೆಆರ್‌ಐಡಿಎಲ್‌ಗೆ ಗುತ್ತಿಗೆ ನೀಡಲಾಗಿದ್ದು, 15 ದಿನದೊಳಗೆ ಇದುಪೂರ್ಣಗೊಳ್ಳಲಿದೆ.

ಸಭೆಯಲ್ಲಿ ತಹಶೀಲ್ದಾರ್‌ಜಯಪ್ರಕಾಶ್‌, ಇಒ ಉಮೇಶ್‌,ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ್‌ ಸಿಪಿಐ ಶೇಖರ್‌, ಸಿಡಿಪಿಒದೀಪಾ, ಮುಖ್ಯಾಧಿಕಾರಿ ಎಂ.ಸಿ. ನಾಗರತ್ನಗ್ರಾಪಂ ಪಿಡಿಒಗಳು ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next