Advertisement

ಆತ್ಮಹತ್ಯೆಗೆ ಶರಣಾಗಬೇಡಿ: ರೈತರಿಗೆ ಮುಖ್ಯಮಂತ್ರಿ ಮನವಿ

06:45 AM Oct 11, 2018 | |

ಮೈಸೂರು: “ಸಾಲಕ್ಕೆ ಹೆದರಿ ಯಾರೂ ಆತ್ಮಹತ್ಯೆಗೆ ಶರಣಾಗಬೇಡಿ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೈಜೋಡಿಸಿ ಮನವಿ ಮಾಡಿದರು.

Advertisement

ಚಾಮುಂಡಿಬೆಟ್ಟದಲ್ಲಿ ಏರ್ಪಡಿಸಿದ್ದ ನಾಡಹಬ್ಬ ದಸರಾ ಮಹೋತ್ಸವ-2018ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಆತ್ಮಹತ್ಯೆ ಮಾಡಿಕೊಂಡು ನಿಮ್ಮ ಕುಟುಂಬವನ್ನು ಅನಾಥರನ್ನಾಗಿಸಬೇಡಿ. ಹಲವಾರು ಯೋಜನೆಗಳನ್ನು ಜಾರಿಗೆ ತರುವ ಚಿಂತನೆ ಮಾಡಿದ್ದೇನೆ. ಇದು ನಿಮ್ಮ ಸರ್ಕಾರ, ಈ ಸರ್ಕಾರವನ್ನು ನಂಬಿ ಎಂದು ಮನವಿ ಮಾಡಿದರು.

“ನೆಮ್ಮದಿ, ಸಂತೋಷದಿಂದ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿಲ್ಲ. ನಾನು ಮೂಲತ:ರಾಜಕಾರಣಿಯೂ ಅಲ್ಲ. ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದೆ, ಆಕಸ್ಮಿಕವಾಗಿಯೇ ಮೊದಲ ಬಾರಿ ಮುಖ್ಯಮಂತ್ರಿಯಾದೆ.

ಎರಡನೇ ಬಾರಿ ಕೂಡ ಆಕಸ್ಮಿಕವಾಗಿಯೇ ಮುಖ್ಯಮಂತ್ರಿಯಾಗಿದ್ದೇನೆ. ಇದು ನಿಮ್ಮ ಸರ್ಕಾರ, ನಿಮ್ಮ ಕುಟುಂಬ ಉಳಿಸಲು ನಮ್ಮಲ್ಲಿ ಪ್ರಾಮಾಣಿಕತೆ ಇದೆ. ಈ ಸರ್ಕಾರವನ್ನು ನಂಬಿ ಎಂದು ಮನವಿ ಮಾಡಿದರು. ಕರ್ನಾಟಕ ಸಂಪದ್ಭರಿತ ರಾಜ್ಯ, ಇಲ್ಲಿ ಹಣದ ಕೊರತೆ ಇಲ್ಲ, ಆದರೆ, ಹಣದ ಸದ್ಬಳಕೆಯಾಗುವಲ್ಲಿ ಲೋಪವಾಗಿದೆ. ಆಗಿರುವ ಲೋಪವನ್ನು ಸರಿಪಡಿಸಿ ನಾಡು ಕಟ್ಟಲು ಜನರ ಸಹಕಾರ ಬೇಕು ಎಂದು ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next