Advertisement

ಟಿಪ್ಪು ಅಧ್ಯಾಯ ಕೈಬಿಡದಿರಲು ಮನವಿ

11:49 AM Nov 12, 2019 | Team Udayavani |

ಚನ್ನಗಿರಿ: ಪಠ್ಯಪುಸ್ತಕದಿಂದ ಟಿಪ್ಪುವಿನ ಇತಿಹಾಸದ ಅಧ್ಯಾಯವನ್ನು ಕೈಬಿಡುವ ಬದಲು ದೇಶಕ್ಕೆ ಟಿಪ್ಪುವಿನ ಪರಾಕ್ರಮವನ್ನು ತಿಳಿಸಿ, ಅವರನ್ನು ಗೌರವಿಸಬೇಕು ಎಂದು ಕರ್ನಾಟಕ ರಾಜ್ಯ ಟಿಪ್ಪು ಅಭಿಮಾನಿಗಳ ಮಹಾವೇದಿಕೆ ಕಾರ್ಯಕರ್ತರು ತಹಶೀಲ್ದಾರ್‌ ಮೂಲಕ ರಾಜ್ಯ ಸರಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

Advertisement

ದೇಶದ ರಕ್ಷಣೆಗಾಗಿ ಹೋರಾಡಿದ ಟಿಪ್ಪು ಆದರ್ಶಗಳನ್ನು ಗೌರವಿಸಬೇಕಾದ ಸರ್ಕಾರ, ಟಿಪ್ಪು ಸುಲ್ತಾನ್‌ ವಿಚಾರಗಳನ್ನು ಪಠ್ಯದಿಂದ ಕಿತ್ತೆಸೆಯಲು ಹೊರಟಿರುವುದು ಖಂಡನೀಯ ವಿಷಯ. ಟಿಪ್ಪು ಪಠ್ಯ ಬಿಡುವ ನಿರ್ಧಾರ ದೇಶದ್ರೋಹಿನಿರ್ಧಾರವಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಟಿಪ್ಪು ಕುರಿತ ಪಠ್ಯ ಅಧ್ಯಯನ ಶಾಲಾ ಮಕ್ಕಳಲ್ಲಿ ದೇಶಾಭಿಮಾನವನ್ನು ಸಾರುತ್ತಿದೆ. ಇಂತಹ ವ್ಯಕ್ತಿಗೆ ದೇಶದ್ರೋಹಿ ಎಂಬ ಪಟ್ಟವನ್ನು ಕಟ್ಟಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವುದು ಎಷ್ಟರಮಟ್ಟಿಗೆ ಸರಿ? ತಕ್ಷಣ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈಬಿಟ್ಟು ಟಿಪ್ಪು ಸುಲ್ತಾನ್‌ ಕುರಿತು ಮತ್ತಷ್ಟು ವಿಷಯಗಳನ್ನು ಸಂಶೋಧಿಸಿ ಅವರ ಹೋರಾಟಗಳನ್ನು ಪಠ್ಯದಲ್ಲಿ ಉಳಿಸಬೇಕು ಎಂದು ಆಗ್ರಹಿಸಿದರು. ಟಿಪ್ಪು ವಿಚಾರಗಳನ್ನು ಒಂದು ವೇಳೆ ಕೈ ಬಿಟ್ಟಿದ್ದೇ ಆದರೆ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಸಂಘಟನೆ ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ವೇದಿ ಕೆ ತಾಲೂಕು ಅಧ್ಯಕ್ಷ ಮಹ್ಮದ್‌ ಜಾಕೀರ್‌ ಮಾತನಾಡಿ, ರಾಜಕೀಯ ಲಾಭಕ್ಕಾಗಿ ಟಿಪ್ಪು ಸುಲ್ತಾನ್‌ಗೆ ದೇಶದ್ರೋಹಿ ಎಂಬ ಪಟ್ಟವನ್ನು ಕಟ್ಟುತ್ತಿರುವ ಬಿಜೆಪಿ, ಟಿಪ್ಪು ಸುಲ್ತಾನ್‌ ಇತಿಹಾಸದ ಅಧ್ಯಯನ ನಡೆಸಿ ದೇಶಕ್ಕೆ ಟಿಪ್ಪುವಿನ ಕೊಡಗೆಯನ್ನು ಅರಿತು ಸ್ಮರಿಸಬೇಕು. ಕೇವಲ ಓಟ್‌ ಬ್ಯಾಂಕ್‌ಗಾಗಿ ಒಬ್ಬ ಹೋರಾಟಗಾರನ ತೇಜೋವಧೆ ಸರಿಯಲ್ಲ. ಟಿಪ್ಪು ದೇಶಕ್ಕಾಗಿ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಅವರು ಒಂದು ಧರ್ಮದ ನಾಯಕನೆಂದು ಅವರ ಸ್ಥಾನಮಾನವನ್ನು ಕಡೆಗಣಿಸಲು ಹೊರಟಿರುವುದು ದೊಡ್ಡ ಷಡ್ಯಂತ್ರವಾಗಿದೆ. ಇದಕ್ಕೆ ಮುಂದೊಂದು ದಿನ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾರ್ಯದರ್ಶಿ ಮಹ್ಮದ್‌ ಪಾತವುಲ್ಲಾ, ಸಯ್ಯದ್‌ ಜಿಲಾನಿ, ಸಯ್ಯದ್‌ ತನ್ವೀರ್‌, ಹೊನ್ನೆಬಾಗಿ ಜಬಿವುಲ್ಲಾ, ಅಮಾನುಲ್ಲಾ, ಉಸ್ಮಾನ್‌ ಷರೀಫ್‌, ಇರ್ಮಾನ್‌ ಖಾನ್‌, ನಾಗೇಂದ್ರಪ್ಪ, ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next