Advertisement

ಬಣ್ಣದ ಮಾತುಗಳಿಗೆ ಮರುಳಾಗದಿರಿ: ನಿಖೀಲ್‌

12:50 AM Apr 02, 2019 | Sriram |

ಭಾರತೀನಗರ: ಬಣ್ಣದ ಮಾತಿಗೆ ಮರುಳಾಗದೆ ಶ್ರಮಜೀವಿಯ ಪರಿಶ್ರಮಕ್ಕೆ ಮಂಡ್ಯ ಜನತೆ ನ್ಯಾಯ ದೊರಕಿಸಬೇಕೆಂದು ಮೈತ್ರಿ ಅಭ್ಯರ್ಥಿ ನಿಖೀಲ್‌ ಕುಮಾರಸ್ವಾಮಿ ತಿಳಿಸಿದರು.

Advertisement

ಇಲ್ಲಿನ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಪೂಜಾ ಕುಣಿತ, ಡೊಳ್ಳು ಕುಣಿತ ಸೇರಿ ಜನಪದ ಕಲಾಮೇಳ ಹಾಗೂ ತೆನೆಹೊತ್ತ ನೂರಾರು ಮಹಿಳೆಯರೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದ ಬಳಿಕ ಅವರು ಮಾತನಾಡಿದರು. ನಮ್ಮ ತಂದೆ ಕುಮಾರಸ್ವಾಮಿ ಹಾಗೂ ತಾತ ದೇವೇಗೌಡರು ರೈತರ ಅಭಿವೃದ್ಧಿಗಾಗಿಯೇ ಶ್ರಮಿಸುತ್ತಿರುವವರು. ರೈತರ ಹಾಗೂ ಬಡ ಕುಟುಂಬಗಳನ್ನು ಉಳಿಸಲು ಸಾಲಮನ್ನಾ, ಲಾಟರಿ, ಸಾರಾಯಿ ನಿಷೇಧದಂತಹ ಜನಪರಯೋಜನೆಗಳನ್ನು ಜಾರಿಗೊಳಿಸಿರುವುದನ್ನು ಎಂದಿಗೂ ಮರೆಯಬೇಡಿ ಎಂದು ಹೇಳಿದರು.

ನಮ್ಮ ಕುಟುಂಬದವರು ಐಷಾರಾಮಿ ಜೀವನ ಮಾಡಿಕೊಂಡು ಎಂದೂ ಬಂದಿಲ್ಲ. ರೈತರ ಮಧ್ಯೆ ಇದ್ದು ರೈತರ ಕಷ್ಟಗಳನ್ನು ಅರ್ಥ ಮಾಡಿಕೊಂಡಿದ್ದೇವೆ.ಜಿಲ್ಲೆಯಲ್ಲಿ ನಮಗಿರುವ ಬೆಂಬಲ ನೋಡಿ ಪಕ್ಷೇತರ ಅಭ್ಯರ್ಥಿ ಸುಮಲತಾ ಸೋಲಿನ ಭೀತಿಯಿಂದ ನಮ್ಮ ಪಕ್ಷದ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆಂದು ಕಿಡಿ ಕಾರಿದರು.

ತರಾಟೆಗೆ ತೆಗೆದುಕೊಂಡ ಮಹಿಳೆ:
ನಮ್ಮ ಗ್ರಾಮದಲ್ಲಿ ಜೆಡಿಎಸ್‌ ಮುಖಂಡರ ಜೊತೆಯಲ್ಲಿ ಖುದ್ದು ಪ್ರಚಾರಮಾಡಿ ಜೆಡಿಎಸ್‌ ಪಕ್ಷವನ್ನು ಗೆಲ್ಲಿಸುತ್ತಿದ್ದೇನೆ. ಪಂಚಾಯಿತಿಗಳು ಸೇರಿದಂತೆ ಶಾಸಕರು ಮತ್ತು ಸಂದರಿಗೆ ಹೆಚ್ಚಿನ ಮತಗಳನ್ನು ನೀಡಿದ್ದೇವೆ. ಆದರೆ ನಮ್ಮ ಗ್ರಾಮದ ಮುಖ್ಯ ರಸ್ತೆಗಳು ಇಂದಿಗೂ ಅಭಿವೃದ್ಧಿ ಕಂಡಿಲ್ಲ. ತಾವು ಚುನಾವಣೆಯ ಸಮಯದಲ್ಲಿ ಬಂದು ಪ್ರಚಾರಮಾಡಿ ಮನೆ ಸೇರಿಕೊಳ್ಳುತ್ತೀರಿ.

ಗ್ರಾಮ ಅಭಿವೃದ್ಧಿಯಾಗದಿರುವುದಕ್ಕೆ ನಾವೇನು ಉತ್ತರ ನೀಡಬೇಕು ಎಂದು ನಿಖೀಲ್‌ ಕುಮಾರಸ್ವಾಮಿಯನ್ನು ಗುಂಡಿ ಬಿದ್ದಿರುವ ರಸ್ತೆ ಮತ್ತು ಕೊಳಕು ಚರಂಡಿಸ್ಥಳದಲ್ಲಿಯೆ ಮಹಿಳೆ ತರಾಟೆಗೆ ತೆಗೆದುಕೊಂಡರು. ಆ ಕ್ಷಣದಲ್ಲಿ ಉತ್ತರಿಸಲಾಗದೆ ಅಲ್ಲಿಂದ ಜಾಗ ಖಾಲಿ ಮಾಡಿದ ನಿಖೀಲ್‌, ನಂತರ ಸಭೆಯಲ್ಲಿ ನಾನು ಗ್ರಾಮವನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next