ಯಾದಗಿರಿ ಹೊರ ವಲಯದಲ್ಲಿ ಇರುವ ಕುಷ್ಠರೋಗಿಗಳ ಬಡಾವಣೆ ಅಕ್ಷರಶಃ ಹಾಳು ಕೊಂಪೆಯಾಗಿ ಮಾರ್ಪಟ್ಟಿದ್ದು, ಇಲ್ಲಿಗೆ ಭೇಟಿ ನೀಡಿದರೇ ಇದೇನಪ್ಪ ಇದು ಯಾವ ಗ್ರಹ ಎನ್ನುವಂತೆ ಕಾಣುತ್ತಿದೆ.
Advertisement
ಸುಮಾರು 30 ವರ್ಷಗಳ ಹಿಂದೆ 52 ವಸತಿ ಗೃಹ ನಿರ್ಮಿಸಿ ಪ್ರತ್ಯೇಕ ಬಡಾವಣೆ ನಿರ್ಮಿಸಲಾಗಿತ್ತು. ಆ ಮನೆಗಳೆಲ್ಲ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದರೂ ಯಾರೂ ಕಾಳಜಿ ವಹಿಸುತ್ತಿಲ್ಲ ಎಂದು ಸಂತ್ರಸ್ತರಾದ ರಾಯಪ್ಪ, ಭೀಮಶಪ್ಪ, ಮಾರುತಿ, ಬಾಬುಸಾಬ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಬಡಾವಣೆಯಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಾರಂಭ ಹಂತದಲ್ಲಿದೆ. ಮಳೆ ಬಂದಾಗಲೊಮ್ಮೆ ಮನೆಎದುರು ನೀರು ಸಂಗ್ರಹವಾಗಿ ಬಡಾವಣೆ ರೆಯಂತಾಗುತ್ತಿದೆ.
Related Articles
Advertisement
ಪ್ರಸ್ತುತ ಬಡಾವಣೆಯಲ್ಲಿ ನೆಲೆಸಿರುವ ಎಲ್ಲಾ ಸಂತ್ರಸ್ತರ ರೋಗ ವಾಸಿಯಾಗಿದ್ದು, ಚರ್ಮದ ಸ್ಪರ್ಶ ಪ್ರಜ್ಞೆಯಿಲ್ಲದಿರುವುದು ಸಾಮಾನ್ಯವಾಗಿದೆ. ಕಾಲಕ್ಕೆ ತಕ್ಕಂತೆ ಅವರಿಗೆ ಉಪಚಾರ ಅಗತ್ಯವಾಗಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಸಿಬ್ಬಂದಿ.
ಕುಷ್ಠರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಚರ್ಮ ಸ್ಪರ್ಶ ಕಳೆದುಕೊಂಡಿದ್ದರಿಂದ ಗಾಯಗಳಾಗಿದ್ದು ಗಮನಕ್ಕೆ ಬರೋದಿಲ್ಲ. ಸುಟ್ಟು ಗಾಯವಾದ ಮೇಲೆಯೇ ಅವರಿಗೆ ಕಾಣಿಸುತ್ತದೆ. ಇದಕ್ಕೆ ಆರು ತಿಂಗಳಿಂದ ಒಂದು ವರ್ಷದವರೆಗೆ ಚಿಕಿತ್ಸೆ ನೀಡಲಾಗುತ್ತದೆ. ಯಾದಗಿರಿಯಲ್ಲಿ ಬಹುತೇಕರು ಕುಷ್ಠರೋಗದಿಂದ ಗುಣಮುಖವಾಗಿದ್ದಾರೆ. ಅಂಗಾಂಗ ವೈಕಲ್ಯರಿಗೆ ಸೂಕ್ತ ಸಲಕರಣೆ ವಿತರಿಸಲಾಗಿದೆ.ಡಾ| ಭಗವಂತ ಅನವಾರ, ಜಿಲ್ಲಾ ಕುಷ್ಠರೋಗ ನಿರ್ಮೂಲನೆ ಅಧಿಕಾರಿ ಕುಷ್ಠರೋಗಿಗಳಿಗೆ ಜಿಲ್ಲಾಡಳಿತ ಸೂಕ್ತ ಸೌಕರ್ಯಗಳನ್ನು ಕಲ್ಪಿಸದೇ ಇರುವುದು ನೋವಿನ ಸಂಗತಿ. ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಜನರನ್ನು ಸರ್ಕಾರ ಕಡೆಗಣಿಸಬಾರದು. ಮಾನವೀಯ ದೃಷ್ಟಿಯಿಂದ ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು. ಕುಮಾರ ಬಳಿಚಕ್ರ,
ರಾಷ್ಟ್ರೀಯ ಮಾನವ ಹಕ್ಕುಗಳ ಉ.ಕ ಅಧ್ಯಕ್ಷ ಸುಮಾರು ವರ್ಷಗಳ ಹಿಂದೆ ನಿರ್ಮಿಸಿರುವ ಮನೆಯಲ್ಲಿ ವಾಸಿಸುತ್ತಿದ್ದೇವೆ. ಮಳೆ ಬಂದರೆ ಸೋರುತ್ತಿವೆ. ಸರಿಯಾಗಿ ನೀರು ಸಿಗಲ್ಲ. ನಮ್ಮ ಪರಿಸ್ಥಿತಿ ಯಾರಿಗೆ ಹೇಳಬೇಕೋ ಗೊತ್ತಾಗ್ತಿಲ್ಲ. ಆದಷ್ಟು ಬೇಗ ನಮಗೆ ಮನೆ ನಿರ್ಮಿಸಿ ಕೊಡಿ.
ಜಗದೇವಿ, ಸ್ಥಳೀಯ ನಿವಾಸಿ ಅನೀಲ ಬಸೂದೆ