Advertisement

ಸುಟ್ಟ ಗಾಯ ನಿರ್ಲಕ್ಷ್ಯಬೇಡ

11:50 AM Mar 26, 2019 | pallavi |

ಅಡುಗೆ ಮನೆ, ಲ್ಯಾಬ್‌, ವಿದ್ಯುತ್‌ ಉಪಕರಣಗಳು ಒಂದಲ್ಲ ಒಂದು ರೀತಿಯಲ್ಲಿ ಅಪಾಯಕಾರಿಯೇ ಆಗಿರುತ್ತದೆ. ಇಲ್ಲಿ ಸುಟ್ಟು ಹೋಗುವ ಅಪಾಯ ಹೆಚ್ಚಾಗಿರುತ್ತದೆ. ಹೀಗಾಗಿ ಸುಟ್ಟಗಾಯಕ್ಕೆ ಏನು ಮಾಡಬೇಕು ಎಂಬುದನ್ನು ಮೊದಲೇ ತಿಳಿದುಕೊಂಡಿದ್ದರೆ ಉತ್ತಮ.

Advertisement

ಸುಟ್ಟಗಾಯ ಚರ್ಮದ ಮೇಲಿನ ಪದರದಲ್ಲಿದ್ದರೆ ಚರ್ಮ ಕೆಂಪಾಗಾತ್ತದೆ, 3- 5 ದಿನದಲ್ಲಿ ಗುಣವಾಗುತ್ತದೆ. ಗಾಯದ ಕಲೆ ಉಳಿಯುವುದಿಲ್ಲ. ಇನ್ನು ಗುಳ್ಳೆಗಳು ಎದ್ದರೆ, ಬಿಳಿ ಬಣ್ಣ ಬದಲಾವಣೆಯಾದರೆ, ನೋವು, ಸೂಜಿ ಚುಚ್ಚಿದ ಅನುಭವ ಉಂಟಾಗುತ್ತಿದ್ದರೆ 10- 20 ದಿನದಲ್ಲಿ ಗುಣವಾಗುತ್ತದೆ, ಗಾಯದ ಕಲೆ ಉಳಿಯುತ್ತದೆ.

ಗಾಯ ಚರ್ಮದ ಪೂರ್ತಿ ವ್ಯಾಪಿಸಿದ್ದರೆ 3- 5 ವಾರದಲ್ಲಿ ಗುಣವಾಗುತ್ತದೆ. ಇದಕ್ಕೆ ಸರ್ಜರಿ ಅವಶ್ಯಕತೆ ಇರುತ್ತದೆ.

ಸುಟ್ಟಗಾಯಕ್ಕೆ ತುರ್ತು ಚಿಕಿತ್ಸೆ
ಲ್ಯಾಬ್‌ಗಳಲ್ಲಿ ಕೆಲಸ ಮಾಡುವವರಿಗೆ ಈ ಅಪಾಯ ಹೆಚ್ಚು. ಆ್ಯಸಿಡ್‌, ಆಲ್‌ಕಲಿ ಕೆಮಿಕಲ್‌ಗ‌ಳಿಂದಾಗಿ ಸುಟ್ಟ ಗಾಯವಾದರೆ ಕೂಡಲೇ ನೀರಿನಲ್ಲಿ ಗಾಯವನ್ನು ಇರಿಸಿ ಶುಚಿಗೊಳಿಸಿ ಔಷಧವನ್ನು ಹಚ್ಚಬೇಕು.
ಎಲೆಕ್ಟ್ರಾನಿಕ್‌ ವಸ್ತುಗಳಿಂದ ಗಾಯವಾದರೆ ಕೂಡಲೇ ಆಸ್ಪತ್ರೆಗೆ ತೆರಳಿ ಔಷಧ ಪಡೆದುಕೊಳ್ಳಬೇಕು.

ಕುದಿಯುವ ನೀರು, ಹಾಲು, ತೇವವಾದ ಶಾಖದಿಂದ ಸುಟ್ಟ ಗಾಯವಾದರೆ ಮೊದಲು ಬಿಸಿ ನೀರು ಬಿದ್ದ ಬಟ್ಟೆಯನ್ನು ಬದಲಾಯಿಸಿ. ಸುಟ್ಟ ಗಾಯದ ಬಳಿ ಇರುವ ಆಭರಣಗಳನ್ನು ತೆಗೆಯಬೇಕು. ನಳ್ಳಿಯಿಂದ ಬರುವ ನೀರನಿಂದ 10- 20 ನಿಮಿಷ ಸುರಿಯಿರಿ,. ಐಸ್‌ ಅಥವಾ ಐಸ್‌ ನೀರನ್ನು ಹಾಕಬಾರದು. ಇದರಿಂದ ಚರ್ಮಕ್ಕೆ ಮತ್ತಷ್ಟು ಹಾನಿಯಾಗುವುದು.

Advertisement

ಚರ್ಮ ತಂಪಾದ ಅನಂತರ ಹಾಲಿನ ಕೆನೆಯ ತೆಳುವಾದ ಪದರವನ್ನು ಹಚ್ಚಬಹುದು. ಸುಟ್ಟ ಜಾಗವನ್ನು ಪೂರ್ಣವಾಗಿ ಕಟ್ಟಬೆಡಿ ಏಕೆಂದರೆ ಅದು ರಕ್ತ ಪರಿಚಲನೆ ಕಡಿಮೆ ಮಾಡುತ್ತದೆ. ಹಾನಿಗೊಳಗಾದ ಚರ್ಮವನ್ನು ರಕ್ಷಿಸಲು ಮತ್ತು ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡಲು ಶುದ್ದ, ತೆಳುವಾದ ಒಟ್ಟೆಯಿಂದ ಗಾಯವನ್ನು ಮುಚ್ಚಬಹುದು. ಅಲೋವಿರಾ ಜೆಲ್‌, ಜೇನು ಹಾಕಬಹುದು.

ಯಾವಾಗ ವೈದ್ಯರ ನೆರವು ಅಗತ್ಯ?
ನೋವು ತೀವ್ರವಾಗಿದ್ದರೆ, ಮಧುಮೇಹ, ಅಸ್ವಸ್ಥತೆ ಇದ್ದರೆ, ಹೆಚ್ಚು ಗುಳ್ಳೆಗಳು ಗೋಚರಿಸಿದರೆ ವೈದ್ಯರ ಬಳಿ ಹೋಗಲೇ ಬೇಕು. ನೀರು ಮತ್ತು ಪ್ರೋಟೀನ್‌ಯುಕ್ತ ಸಮೃದ್ಧ ಆಹಾರ ಸೇವನೆಯಿಂದ ಚರ್ಮದ ಬೆಳವಣೆಗೆಗೆ ಶೀಘ್ರವಾಗಿ ಆಗುತ್ತದೆ.

   ಡಾ| ರಶ್ಮಿ ಭಟ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next