Advertisement
ಅಂದ ಹಾಗೆ ಇದು ಇತ್ತೀಚಿನ ದಿನಗಳ ಮಾತೇನೂ ಅಲ್ಲ. ಶತಮಾನಗಳಿಂದ ನಡೆದುಕೊಂಡು ಬರುತ್ತಿರುವುದೂ ಇದೇ. ಬಾಲ್ಯದಿಂದಲೂ ಓದಿನ ಹವ್ಯಾಸವನ್ನು ಬೆಳೆಸಿಕೊಂಡು, ಮುಂದೆಯೂ ಅದನ್ನು ಪೋಷಿಸುತ್ತ ಪ್ರಬುದ್ಧರಾಗುವ ಜನರ ವರ್ಗವು ತನ್ನ ಮುಕ್ತಮನಸ್ಸಿನ ಯೋಚನಾಕ್ರಮದಿಂದಲೂ, ಜೀವನವನ್ನು ಅರ್ಥೈಸಿಕೊಳ್ಳುವ, ಬದುಕುವ ವಿಧಾನದಿಂದಲೂ ಗುಂಪಿನಲ್ಲಿ ಗೋವಿಂದರಾಗಿ ಉಳಿಯದೆ ವಿಶಿಷ್ಟರಾಗಿ ನಿಲ್ಲುವುದು ಸಹಜ. ವುಡೌಸ್ ಮತ್ತು ರೌಲಿಂಗ್ ಇಬ್ಬರ ಬಗ್ಗೆಯೂ ವ್ಯಕ್ತಿಯೊಬ್ಬ ಅದ್ಭುತವಾಗಿ ಮಾತನಾಡುತ್ತಿ¨ªಾನೆಂದರೆ ಅಂಥ ವ್ಯಕ್ತಿಯು ನಿಸ್ಸಂದೇಹವಾಗಿ ಗುಂಪಿನಲ್ಲಿದ್ದರೂ ಎದ್ದುಕಾಣುತ್ತಾನೆ. ಏಕೆಂದರೆ, ನಿತ್ಯವೂ ಇಂಥವರನ್ನು ನಾವು ಎಡತಾಕುವುದಿಲ್ಲವಲ್ಲ! ಸದ್ಯ ಪರಿಸ್ಥಿತಿಯು ಹೇಗಾಗಿದೆಯೆಂದರೆ ನಿರಂತರ ಓದುಗನೆಂಬ ಸಂತತಿಯೊಂದು ಈಗ ಅಳಿವಿನಲ್ಲಿದೆ. ಶೀಘ್ರದಲ್ಲೇ ಏನಾದರೂ ಮಾಡಿ ಉಳಿಸಿಕೊಳ್ಳಲೇಬೇಕಾಗಿರುವ ಅಳಿವಿನಂಚಿನಲ್ಲಿರುವ ಜೀವಸಂತತಿಯಿದು. ಮುಂದಿನ ದಿನಗಳಲ್ಲಿ ಈ ಸಂಖ್ಯೆಯು ಮತ್ತಷ್ಟು ಕಮ್ಮಿಯಾಗುತ್ತ ಹೋದರೂ ಅಚ್ಚರಿಯೇನಿಲ್ಲ.
ವೀಡಿಯೋಗಳು ಇಂದಿನ ಕಾಲಮಾನದಲ್ಲಿ ಜನಸಾಮಾನ್ಯರನ್ನು ಹಿಡಿದಿಟ್ಟಿರುವುದು ಸತ್ಯವಾದರೂ ಭಾಷೆಯನ್ನು, ಅದರಲ್ಲೂ ಲಿಖೀತ ರೂಪದಲ್ಲಿರುವ ಭಾಷೆಯನ್ನು ಸಂಪೂರ್ಣವಾಗಿ ಮಟ್ಟಹಾಕುವಷ್ಟು ದೃಶ್ಯಮಾಧ್ಯಮಗಳು ಬೆಳೆಯಲೇ ಇಲ್ಲ. ಅದು ಒಂದು ರೀತಿಯಲ್ಲಿ ಸಾಧ್ಯವೂ ಇಲ್ಲ. ಲಿಖೀತ ರೂಪದಲ್ಲಿರುವ ಭಾಷೆಯೊಂದಿಗೆ ಡಿಜಿಟಲ್ ಮಾದರಿಯನ್ನು ಹೋಲಿಸುವುದಾಗಲಿ, ಬದಲಿಯಾಗಿ ಬಳಸುವುದಾಗಲಿ ಕಷ್ಟವೇ. ಹೀಗಾಗಿಯೇ ಪುಸ್ತಕದ ರೂಪದಲ್ಲಿ ಬಹಳ ಇಷ್ಟಪಟ್ಟ ಕಥೆಯೊಂದು ಚಲನ ಚಿತ್ರವಾಗಿ ತೆರೆಗೆ ಬಂದಾಗ ಅದು ತನ್ನ ಹೊಳಪನ್ನು ಬಹುತೇಕ ಕಳೆದುಕೊಂಡಿರುತ್ತದೆ. ಇದು ನನ್ನನ್ನೂ ಸೇರಿದಂತೆ ಬಹುತೇಕ ಓದುಗರ ಅನುಭವವೂ ಹೌದು. ದಪ್ಪನೆಯ ಬೈಂಡಿನ ಮೇಲ್ಹೊದಿಕೆಯುಳ್ಳ ಪುಸ್ತಕದ ಸ್ಪರ್ಶ, ಅದರ ಸುವಾಸನೆ, ಒಟ್ಟಾರೆಯಾಗಿ ಓದಿನ ಆ ಸಂಪೂರ್ಣ ಅನುಭವವು ಓದುಗನನ್ನು ತನ್ನದೇ ಆದ ಲೋಕಕ್ಕೆ ಕರೆದೊಯ್ಯುತ್ತದೆ ಎಂಬುದನ್ನು ಬಲವಾಗಿ ನಂಬಿರುವವಳೂ, ಆ ಅನುಭೂತಿಯನ್ನು ಸವಿದವಳೂ ನಾನು. ಒಟ್ಟಿನಲ್ಲಿ ತತ್ಸಂಬಂಧಿ ಎಲ್ಲಾ ಚರ್ಚೆಗಳು ಕೊನೆಗೂ ಬೊಟ್ಟು ಮಾಡಿ ತೋರಿಸುತ್ತಿರುವುದು ಆ ಒಂದು ಪ್ರಶ್ನೆಯೆಡೆಗೇ. ಬೆಳೆಯುತ್ತಿರುವ ಮಕ್ಕಳು ಏನನ್ನು ಓದಬೇಕು ಮತ್ತು ಓದಿನ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಿರುವ ಮಗುವಿನ ವ್ಯಕ್ತಿತ್ವವು ಇನ್ನೂ ನಿರ್ಮಾಣದ ಹಂತದಲ್ಲಿರುವಾಗ ಈ ಸದಭಿರುಚಿಯ ಅಭ್ಯಾಸವನ್ನು ಪೋಷಿಸಲು ನಾವು ಏನೇನು ಮಾಡಬಹುದು ಎಂಬುದು. ಸಾಮಾನ್ಯ ಭಾರತೀಯ ಮನೆಯೊಂದರ ಸಂದರ್ಭವನ್ನು ಪರಿಗಣಿಸಿದ್ದೇ ಆದಲ್ಲಿ “ಶಿಕ್ಷಣವೆಂಬ ಮುಳ್ಳಿನ ಹಾದಿ’ಯನ್ನು ಹೇಗೋ ದಾಟಿಹೋಗಲು ಬೇಕಿರುವ ಪುಸ್ತಕಗಳನ್ನೇ ಪೋಷಕರು ಪವಿತ್ರಗ್ರಂಥಗಳಂತೆ ಮಕ್ಕಳ ಕೈಯಲ್ಲಿರಿಸುವುದು ಸರ್ವೇಸಾಮಾನ್ಯವಾದ ಸಂಗತಿ. ಇದನ್ನು ಹೊರತುಪಡಿಸಿದರೆ ಇನ್ನು ಕೆಲವು ಪೋಷಕರು ದಿನಪತ್ರಿಕೆಗಳನ್ನೋ, ಸಾಮಾನ್ಯ ಜ್ಞಾನದ ಪುಸ್ತಕಗಳ ಬಂಡಲ್ಲುಗಳನ್ನೋ ಮಕ್ಕಳಿಗೆ ನೀಡುವಂಥವರು. ಇನ್ನು ಇವರಿಗಿಂತ ಕೊಂಚ ಹೆಚ್ಚಿನ ಉತ್ಸಾಹಿ ಪೋಷಕರಾಗಿದ್ದಲ್ಲಿ ರೀಡರ್ಸ್ ಡೈಜೆಸ್ಟ್‌ಗಳಂಥ ಪುರವಣಿಗಳನ್ನು ಇವರು ತಮ್ಮ ಮಕ್ಕಳಿಗೆ ಹೆಚ್ಚುವರಿ ಓದಿನ ಹೆಸರಲ್ಲಿ ಕೊಡಬಲ್ಲರಷ್ಟೇ.
Related Articles
Advertisement
ಕಥೆಗಳೆಂದರೆ ತುಂಬ ಇಷ್ಟಕಥೆಗಳು ಮೊದಲಿನಿಂದಲೂ ನನ್ನನ್ನು ಬಹುವಾಗಿ ಆಕರ್ಷಿಸಿದ ಓದಿನ ಪ್ರಕಾರವಾಗಿತ್ತು. ಬಾಲ್ಯದಿಂದಲೂ ಅಮ್ಮನಿಂದ, ಅಜ್ಜಿಯಿಂದ ಕಥೆಗಳನ್ನು ಕೇಳುತ್ತಲೇ ಬೆಳೆದಿರುವವಳು ನಾನು. ನನ್ನ ಓದಿನ ಪಯಣವು ಶುರುವಾಗಿದ್ದೇ ನವನೀತ್ ಪ್ರಕಾಶನದ ಬಣ್ಣಬಣ್ಣದ ಅದ್ಭುತ ಕಾಲ್ಪನಿಕ ಲೋಕದ ಕಥೆಗಳೊಂದಿಗೆ ಮತ್ತು ಮಕ್ಕಳ ಕಥೆಗಳ ದೈತ್ಯಸಂಗ್ರಹದೊಂದಿಗೆ. ಇವೆಲ್ಲವುಗಳೂ ಕೂಡ ಗ್ರಿಮ್ ಸಹೋದರರು ಮತ್ತು ಕ್ರಿಶ್ಚಿಯನ್ ಆಂಡರ್ಸನ್‌ರಂತಹ ವಿಶ್ವವಿಖ್ಯಾತ ಲೇಖಕರ ಕಥೆಗಳನ್ನೇ ಸಂದಭೋìಚಿತವಾಗಿ ಬದಲಾಯಿಸಿ ತರಲಾಗಿದ್ದ ಪುನರಾವೃತ್ತಿಗಳು ಎಂದು ನನಗೆ ತಿಳಿದಿದ್ದು ಸಾಕಷ್ಟು ತಡವಾಗಿಯೇ. ಅಲ್ಲೊಮ್ಮೆ ಇಲ್ಲೊಮ್ಮೆ ಈ ಕಥೆಗಳನ್ನು ಭಾರತೀಯ ಓದುಗರಿಗೆ ಸರಿಹೊಂದುವಂತೆ ಮಾರ್ಪಡಿಸಿದ್ದ ಪ್ರಯತ್ನಗಳೂ ನನಗೆ ಢಾಳಾಗಿ ಕಂಡಿದ್ದವು. ಮುಂದೆ ಜೇಮ್ಸ… ಬ್ಯಾರೀ ವಿರಚಿತ ಪೀಟರ್ ಪಾನ್ ಮತ್ತು ಹಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ವಿರಚಿತ ದ ಲಿಟಲ್ ಮರ್ಮೇಯಗಳನ್ನೂ ನಾನು ಓದಿಮುಗಿಸಿದೆ. ಇನ್ನು ಭಾರತೀಯ ಲೇಖಕರ ವಿಚಾರಕ್ಕೆ ಬಂದರೆ ಖ್ಯಾತ ಲೇಖಕರಾದ ಸರ್ ರಸ್ಕಿನ್ ಬಾಂಡ್‌ರವರ ಕಥೆಗಳಿಗೆ ನಾನು ಮಾರುಹೋಗಿದ್ದೆ. ಡೆಹ್ರಾದ ಬೀದಿಗಳಲ್ಲಿ ಅಡ್ಡಾಡಿಸುತ್ತ ಓದುಗನಿಗೆ ಅಸಾಮಾನ್ಯ ಅನುಭವಗಳನ್ನು ಧಾರೆಯೆರೆಯುವ “ರಸ್ಟಿ’ಗೆ ಮನಸೋಲದಿರಲು ನನಗೆ ಕಾರಣಗಳೇ ಇರಲಿಲ್ಲ. ಇನ್ನು ಬಾಂಡ್‌ರಷ್ಟೇ ನನ್ನನ್ನು ಆವರಿಸಿದ ಮತ್ತೂಬ್ಬ ಲೇಖಕರೆಂದರೆ ಮಾಲ್ಗುಡಿ ಡೇಸ್ ನ ಆರ್. ಕೆ. ನಾರಾಯಣ್. ಎನಿಡ್ ಬ್ಲೆ„ಟನ್‌ನನ್ನು ನಾನು ಮೊದಲ ಬಾರಿ ಓದಿದಾಗ ನಾನು ಎರಡನೆಯ ತರಗತಿಯಲ್ಲಿದ್ದೆ. ಬಹುಬೇಗನೇ “ಮಿಸ್ಟರಿ’ ವಿಭಾಗದ ಪುಸ್ತಕಗಳು ಇಷ್ಟವಾಗುತ್ತ ದ ಸೀಕ್ರೆಟ್ ಸೆವೆನ್, ದ ಫೇಮಸ್ ಫೈವ್, ಫೈಂಡ್-ಔಟರ್ಸ್… ಹೀಗೆ ಬೆನ್ನುಬೆನ್ನಿಗೆ ಈ ವಿಭಾಗದ ಕೃತಿಗಳನ್ನು ಓದಿ ಮುಗಿಸಿದ್ದಾಯಿತು. ಮಕ್ಕಳ ಶಾಲಾದಿನಗಳ ಮತ್ತು ಇನ್ನೇನು ಹರೆಯಕ್ಕೆ ಕಾಲಿಡಲಿರುವ ಮಕ್ಕಳ ಸುಂದರ ಕಥೆಗಳನ್ನೂ ಕೂಡ ಮೇಡಂ ಬ್ಲೆಟನ್ ರಸವತ್ತಾಗಿ ಬರೆಯುತ್ತಿದ್ದರು. ಇವೆಲ್ಲವನ್ನೂ ಈ ದಿನಗಳಲ್ಲಿ ನಾನು ಚಪ್ಪರಿಸಿ ಓದಿದ್ದೆ. ಆದರೆ, ಬದಲಾವಣೆಯ ಘಟ್ಟಗಳೂ ಕೂಡ ದೂರವಿರಲಿಲ್ಲ. “ಮಿಸ್ಟರಿ’ಯ ಕುತೂಹಲದೊಂದಿಗೆ ಆರಂಭವಾದ ನನ್ನ ಹೆಜ್ಜೆಗಳು ಕ್ರಮೇಣ ಡಾ. ಆರ್ಥರ್ ಕಾನನ್ ಡಾಯ್ಲ… ಮತ್ತು ಅಗಾಥಾ ಕ್ರಿಸ್ಟಿಯಂತಹ ಲೇಖಕರತ್ತ ನಡೆದಿದ್ದವು. ಕೆಲವೊಮ್ಮೆ ತೀರಾ ಅತಿಮಾನವನಂತೆ ಭಾಸವಾಗುವ ಶೆರ್ಲಾಕ್ ಹೋಮ್ಸ… ಹದಿನಾರರ ಹುಡುಗನಿಗೂ, ಅರವತ್ತರ ವೃದ್ಧನಿಗೂ ಅನಾಯಾಸವಾಗಿ ರುಚಿಸಬಲ್ಲ. ಇನ್ನು ಭಾರತೀಯ ಪತ್ತೇದಾರರಾದ ಫೆಲೂದಾ ಮತ್ತು ಬೊಕೇಶ್ ಬಕ್ಷಿಯ ಬಗೆಯೂ ಹೇಳಲೇಬೇಕು. ಫೆಲೂದಾ ಸತ್ಯಜಿತ್ ರೇಯವರ ಸೃಷ್ಟಿಯಾಗಿದ್ದರೆ, ಬೊಕೇಶ್ ಬಕ್ಷಿಯನ್ನು ಶರದಿಂದು ಬಂದೋಪಾಧ್ಯಾಯ್ ತಯಾರು ಮಾಡಿದ್ದರು. ಕ್ಲಾಸಿಕ್ ವಿಚಾರಕ್ಕೆ ಬಂದರೆ ಹಾರ್ಡ್ ಟೈಮ್ಸ…ನ ಸರ್ ಚಾರ್ಲ್ಸ್ ಡಿಕನ್ಸ್ ಜೊತೆಗಿದ್ದ. ಇನ್ನು ಭಾವೋನ್ಮತ್ತಳಾಗಿ ವಿರಹವೇದನೆಯಲ್ಲಿ ತೇಲಾಡುವುದಕ್ಕೆ ದ ಡೈರಿ ಆಫ್ ಎ ಯಂಗ್ ಗರ್ಲ್, ಟು ಕಿಲ್ ಎ ಮಾಕಿಂಗ್ ಬರ್ಡ್ ಮತ್ತು ಗ್ರೀನ್ ವಿರಚಿತ ದ ಫಾಲ್ಟ… ಇನ್ ಅರ್ವ ಸ್ಟಾರ್ಸ್ ಗಳು ಕೂಡ ಇದ್ದವು. ಜಿ. ಕೆ. ರೌಲಿಂಗ್‌ರವರ ದ ಹ್ಯಾರಿ ಪಾಟರ್ ಎಂಬ ಬಿರುಗಾಳಿಯು ಬೀಸಿದ್ದು ಆ ದಿನಗಳಲ್ಲೇ. ಆಗ ನಾನು ಬಹುಶಃ ನಾಲ್ಕನೆಯ ಅಥವಾ ಐದನೆಯ ತರಗತಿಯಲ್ಲಿದ್ದೆ. ರೌಲಿಂಗ್ ಒಂದಿಡೀ ಪೀಳಿಗೆಯನ್ನೇ ಓದಿಗೆ ಹಚ್ಚಿದ್ದರು. ಹ್ಯಾರಿ ಪಾಟರ್ ಸರಣಿಯು ನನಗೆ ಯಂಗ್ ಅಡಲ್ಟ… ಗಿಂತಲೂ ಮಿಡಲ್ ಗ್ರೇಡ್ ಫಿಕ್ಷನ್ ಆಗಿ ಕಂಡಿದ್ದೇ ಹೆಚ್ಚು. ಆದರೆ, ಒಂದಂತೂ ಸತ್ಯ. ಸರಣಿಯು ಮುಂದುವರಿಯುತ್ತ ಹ್ಯಾರಿ ಮತ್ತು ಕೋಹರ್ಟ್ ದೊಡ್ಡವರಾದಂತೆಲ್ಲ ಸರಣಿಯು ಮತ್ತಷ್ಟು ಸಂಕೀರ್ಣತೆ ಮತ್ತು ಆಳವನ್ನು ಪಡೆದುಕೊಳ್ಳುತ್ತ ನನ್ನಂತಹ ಓದುಗರನ್ನು ಇನ್ನಿಲ್ಲದಂತೆ ಸೆಳೆದಿತ್ತು. ನನ್ನ ಓದಿನ ಕಥನದಲ್ಲಿ ಗುರುದೇವ ರಬೀಂದ್ರನಾಥ ಟ್ಯಾಗೋರರನ್ನು ಹೆಸರಿಸಿಲ್ಲವೆಂದರೆ ಅದು ಅಪೂರ್ಣವೇ ಸರಿ. ಟ್ಯಾಗೋರರ ಸಣ್ಣ ಕಥೆಗಳಾದ ದ ಪೋಸ್ಟ್ ಆಫೀಸ್, ಮೈ ಬಾಯ್ ಹುಡ್ ಡೇಸ್ ಗಳಿಂದ ಈ ಮಹಾನ್ ಲೇಖಕನ ಓದನ್ನು ಆರಂಭಿಸಿದ್ದೇ ಆದಲ್ಲಿ ಟ್ಯಾಗೋರರ ಗೋರಾ, ದ ರೆಡ್ ಒಲಿಯಾಂಡರ್ಸ್ ಮತ್ತು ವಿಶ್ವವಿಖ್ಯಾತ ಗೀತಾಂಜಲಿಯವರೆಗೂ ಅನಾಯಾಸವಾಗಿ ತಲುಪಬಹುದು. ಇನ್ನು ನೈಜಜೀವನದ ರೋಚಕ ಸತ್ಯಗಳಿಗೆ ಹೊಸದಾಗಿ ತೆರೆದುಕೊಳ್ಳುವ ಮನಸ್ಸುಗಳು ಜಗತ್ತನ್ನು ಹೊಸ ದೃಷ್ಟಿಕೋನಗಳಿಂದ ಎದುರುಗೊಳ್ಳುವಷ್ಟು ಉತ್ಸಾಹಿಗಳಾಗಿದ್ದಲ್ಲಿ ನಮ್ಮದೇ ಲೇಖಕರಾದ ಶಶಿ ತರೂರ್‌ರವರ ದ ಗ್ರೇಟ್ ಇಂಡಿಯನ್ ನೊವೆಲ…, ಅಮಿತಾವ್ ಘೋಷ್‌ರವರ ದ ಹಂಗ್ರಿ ಸೈಡ್ಸ್ ಮತ್ತು ಝುಂಪಾ ಲಹಿರಿಯವರ ದ ನೇಮ್ ಸೇಕ್ ನಂತಹ ಕೃತಿಗಳು ದಾರಿದೀಪವಾಗಬಲ್ಲವು. ಇನ್ನು ಪುರಾಣಗಳ ಲೋಕಕ್ಕೆ ತೆರೆದುಕೊಳ್ಳಬಯಸುವವರಿಗೆ ಡಾ. ದೇಬದತ್ತ ಪಟ್ನಾಯಕ್ ಓದಲೇಬೇಕಾದ ಲೇಖಕ. ಭಾರತೀಯ ಪುರಾಣಗಳಿಂದ ಹಿಡಿದು ಗ್ರೀಕ್ ಪುರಾಣಗಳ ಬಗ್ಗೆಯೂ ಇವರು ಬಹಳಷ್ಟು ಬರೆದಂಥವರು. ಕವಿತಾ ಕಾಣೆ, ಚಿತ್ರಾ ಬ್ಯಾನರ್ಜಿ ದಿವಾಕರುಣಿಯಂತಹ ಲೇಖಕಿಯರು ಪುರಾಣಗಳನ್ನು ತಮ್ಮದೇ ಆದ ವಿಶಿಷ್ಟ ನೆಲೆಯಲ್ಲಿ ಪ್ರಸ್ತುತಪಡಿಸುವಲ್ಲಿ ನಿಜಕ್ಕೂ ಸಿದ್ಧಹಸ್ತರು. ಕವಿತಾ ಕಾಣೆಯವರ ಕರ್ಣಾಸ್ ವೈಫ್, ಸೀತಾಸ್ ಸಿಸ್ಟರ್, ಚಿತ್ರಾರವರ ದ ಪ್ಯಾಲೇಸ್ ಆಫ್ ಇಲ್ಯೂಷನ್ಸ್ ನಂತಹ ಕೃತಿಗಳು ಈ ವಿಭಾಗದಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತಹ ಮೇರುಕೃತಿಗಳು. ಹರೆಯದ ಮನಸ್ಸುಗಳನ್ನೂ, ಯುವಜನಾಂಗದ ಓದುಗರನ್ನೂ ಏಕಕಾಲದಲ್ಲಿ ಸೆಳೆಯುವ ಲೇಖಕರ ದಂಡಂತೂ ಇದ್ದೇ ಇದೆ. ಎಮಿಲಿ ಬ್ರಾಂಟ್, ಶಾರ್ಲೊಟ್ ಬ್ರಾಂಟ್, ಮೇರಿ ಹಿಗ್ಗಿನ್ಸ್ ಕ್ಲಾರ್ಕ್, ಜಾಕ್ ಹಿಗ್ಗಿನ್ಸ್ ಮತ್ತು ನಿಕೋಲಾಸ್ ಸ್ಪಾಕ್‌ಸ್‌ರಂತಹ ಖ್ಯಾತನಾಮ ಲೇಖಕರು ಈ ವಿಭಾಗಕ್ಕೆ ಸೂಕ್ತವಾಗಿ ಹೊಂದುವವರು. ಇದರ ತರುವಾಯ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ genre ಮತ್ತು theme ಗಳನ್ನು ಹದವಾಗಿ ಬೆರೆಸಿ ಮತ್ತಷ್ಟು ಆಳಕ್ಕಿಳಿದರೆ ಕಲ್ಪನಾಲೋಕದ ಚಿತ್ರವಿಚಿತ್ರ ಜೀವಿಗಳಿರುವ ಜೆ.ಆರ್.ಆರ್. ಟೋಲ್ಕಿಯನ್‌ರ ಸಾಹಿತ್ಯದಿಂದ ಹಿಡಿದು ಸಮಕಾಲೀನ ಕಟುವಾಸ್ತವಿಕತೆಯ ನಿರೂಪಣೆಗಳುಳ್ಳ ಸ್ಟೀಫನ್ ಚೋಬ್‌ಸ್ಕಿಯ ದ ಪಕ್‌ಸ್ ಆಫ್ ಬೀಂಗ್ ಎ ವಾಲ್ ಫ್ಲವರ್ ನಂತಹ ಕೃತಿಗಳು ಆಸಕ್ತ ಎಳೆಯ ಓದುಗನಿಗೆ ದಕ್ಕುವುದರಲ್ಲಿ ಸಂದೇಹವಿಲ್ಲ. ಗಾರ್ಗಿ ರೇ ಚೌಧರಿ
ಕನ್ನಡಕ್ಕೆ : ಪ್ರಸಾದ್ ನಾಯ್ಕ