Advertisement

ಮಾದಕ ವ್ಯಸನಗಳಿಗೆ ಸೋಲಬೇಡಿ: ನ್ಯಾ|ದಾಕ್ಷಾಯಿಣಿ

11:54 AM Jul 23, 2017 | Team Udayavani |

ಕಲಘಟಗಿ: ಉಜ್ವಲ ಭವಿಷ್ಯ ನಿರ್ಮಿಸುವ ವಿದ್ಯಾರ್ಥಿ ಜೀವನದಲ್ಲಿ ಮಾದಕ ವ್ಯಸನಗಳಿಗೆ ಮನಸೋಲದೆ ರಾಷ್ಟ್ರ ನಿರ್ಮಾಣದ ಕಾಯಕದತ್ತ ಸಾಗಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶೆ ದಾಕ್ಷಾಯಿಣಿ ಜಿ.ಕೆ. ಕಿವಿಮಾತು ಹೇಳಿದರು. ದಾಸ್ತಿಕೊಪ್ಪದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಕಾಲೇಜು ಆವರಣಗಳಲ್ಲಿ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸುವ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳು ತಮ್ಮ ಮೋಜಿಗೋಸ್ಕರ ರ್ಯಾಗಿಂಗ್‌ ಮಾಡುವುದು ಕಾನೂನುಬಾಹಿರ. ಕುತೂಹಲಕ್ಕಾಗಿ ಮಾದಕ ವಸ್ತುಗಳನ್ನು ಬಳಸುವ ಯುವ ಜನಾಂಗ ನಂತರದ ದಿನಗಳಲ್ಲಿ ವ್ಯಸನಗಳಿಗೆ ಆಧೀನರಾಗಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಾರೆ.

ಯುವಸಮೂಹ ವ್ಯಸನ ತಡೆಗಟ್ಟುವಲ್ಲಿ ಸಹಕರಿಸಬೇಕೆಂದರು. ಕಿರಿಯ ದಿವಾಣಿ ನ್ಯಾಯಾ ಧೀಶ ಗಿರಿಗೌಡ ಬಿ. ಮಾತನಾಡಿ, ಮಾದಕ ವಸ್ತುಗಳ ಸೇವನೆಗೆ ಅಂಟಿಕೊಂಡಿರುವ ಪ್ರಕರಣಗಳಿಗೂ ಅಪಘಾತ ಮತ್ತು ಅಪರಾಧಗಳ ಪ್ರಮಾಣ-ತೀವ್ರತೆಗೂ ನೇರ ಸಂಬಂಧವಿದೆ. ಯುವ ಜನತೆ ಒಳ್ಳೆಯ ವಿಚಾರಗಳಿಂದ ಸುಂದರ ಸಮಾಜ ನಿರ್ಮಿಸುವತ್ತ ಯೋಚಿಸಬೇಕು ಎಂದರು. 

ಮಾನಸಿಕ ಆರೋಗ್ಯ ತಜ್ಞ ಡಾ| ಶಿವಶಂಕರ ಪೋಳ ಉಪನ್ಯಾಸ ನೀಡಿ, ಸಂತೋಷಕ್ಕೆ ಆಲ್ಕೋಹಾಲ್‌ ಸೇವನೆಯೊಂದೇ ಮಾರ್ಗವಲ್ಲ. ಮಾನವ ತಾನು ಅನುಭವಿಸುವ ಸಂತೋಷ ಮತ್ತು ದುಃಖ ಎರಡರ ಆಚರಣೆಗೂ ಮದ್ಯಪಾನಕ್ಕೆ ಶರಣಾಗುತ್ತಿರುವುದು ವಿಷಾದನೀಯ. ಮದ್ಯ ವ್ಯಸನ ಬಿಡಿಸಲು ಆಪ್ತ ಸಮಾಲೋಚನೆಯೇ ಬಹುಮುಖ್ಯ ಮಾರ್ಗವಾಗಿದೆ ಎಂದರು. 

ಸಹಾಯಕ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ ದೊಡ್ಡಗೌಡ್ರ, ವಕೀಲರ ಸಂಘದ ನೂತನ ಅಧ್ಯಕ್ಷ ಎಸ್‌.ಜೆ. ಸುಂಕದ, ತಾಲೂಕಾ ಆರೋಗ್ಯಾ ಧಿಕಾರಿ ಡಾ| ಪಿ.ವಿ. ಕಾಡರಕೊಪ್ಪ ಹಾಗೂ ತಾಲೂಕಾ ಆರೋಗ್ಯ ಶಿಕ್ಷಣಾ ಧಿಕಾರಿ ಭರತ ಬಹುರೂಪಿ ಮಾತನಾಡಿದರು. ಪಿಎಸ್‌ಐ ಪರಮೇಶ್ವರ ಕವಟಗಿ ಉಪನ್ಯಾಸ ನೀಡಿದರು. ಪ್ರಾಚಾರ್ಯ ಗಂಗಾಧರ ಗುಮ್ಮಗೋಳಮಠ ಅಧ್ಯಕ್ಷತೆ ವಹಿಸಿದ್ದರು.

Advertisement

ನ್ಯಾಯವಾದಿ ಬಿ.ವಿ.ಪಾಟೀಲ, ಎಂ.ಎಸ್‌. ಧನಿಗೊಂಡ, ವಿ.ಬಿ. ಶಿವನಗೌಡ್ರ, ಡಾ| ಫರ್ಜಾನಾ ಪಠಾಣ, ಪ್ರೊ| ಬಿ.ಎಸ್‌. ಶಿರಿಯಪ್ಪಗೌಡ್ರ, ಡಾ| ಗಿರೀಶ ದೇಸೂರ, ಪ್ರೊ| ಶೈಲಜಾ ಹುದ್ದಾರ, ಪ್ರೊ| ಪ್ರೀತಿ ಪಾಟೀಲ, ಪ್ರೊ| ಭಾರತಿ ದಂಡಿನ್‌, ಪ್ರೊ| ಸುಜಾತಾ ತಲ್ಲೂರ ಇತರರಿದ್ದರು. ನ್ಯಾಯವಾದಿ ಕೆ.ಬಿ. ಗುಡಿಹಾಳ ನಿರೂಪಿಸಿದರು. ಡಾ|ಜಯಾನಂದ ಹಟ್ಟಿ ಸ್ವಾಗತಿಸಿದರು. ಡಾ| ಬಸವರಾಜೇಶ್ವರಿ ಪಾಟೀಲ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next