Advertisement
ಸುಭದ್ರ, ವೈಭವದ ದೇಶ ಕಟ್ಟಲು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಬೇಕಿದೆ. ಮುಸ್ಲಿಮರನ್ನು ಸಂದೇಹದಿಂದ ನೋಡುವುದನ್ನು ನಿಲ್ಲಿಸಬೇಕಿದೆ ಎಂದರು. ಮುಸ್ಲಿಮರ ಅನೇಕ ಕಾರ್ಯಕ್ರಮಗಳಲ್ಲಿ ತಾವು ಪಾಲ್ಗೊಂಡಿದ್ದು, ಅವರು ಎಂದೂ ದೇಶ ವಿರೋಧಿಯಾಗಿ ನಡೆದುಕೊಂಡಿಲ್ಲ. ಭಾರತ ನಮ್ಮ ದೇಶ. ನಾವು ಇಲ್ಲೇ ಹುಟ್ಟಿದ್ದೇವೆ.
Related Articles
Advertisement
ಮುಖ್ಯ ಭಾಷಣ ಮಾಡಿದ ಆರೆಸ್ಸೆಸ್‌ನ ಪ್ರಾಂತ ಕಾರ್ಯವಾಹ ತಿಪ್ಪೇಸ್ವಾಮಿ, 91 ವರ್ಷಗಳಿಂದ ಸಂಘ ಅನೇಕ ಕೆಲಸ ಮಾಡಿಕೊಂಡು ಬಂದಿದೆ. ಹಿಂದೂ ಸಮಾಜ ಎಂದಿಗೂ ಒಗ್ಗೂಡಲಾರದು ಎಂಬುದಾಗಿ ಹೇಳುತ್ತಿದ್ದವರಿಗೆ ಇಂದು ತಕ್ಕ ಉತ್ತರ ಕೊಟ್ಟಿದೆ. ಇಂದು ದೇಶದ 853 ಜಿಲ್ಲೆಗಳಲ್ಲಿ ಸಂಘ ತನ್ನ ಚಟುವಟಿಕೆ ಹೊಂದಿದೆ.
753 ಗ್ರಾಮಗಳಲ್ಲಿ ಅತ್ಯಂತ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಘವು 30,000 ಶಾಲೆಗಳನ್ನು ತೆರೆದಿದೆ. 1989ರಿಂದ ಈ ವರೆಗೆ 1.70 ಲಕ್ಷ ಸೇವಾ ಕಾರ್ಯ ಮಾಡಿದೆ. ಹಾಲಿ ಸಂಘ ಶಿಕ್ಷಣ, ಸೇವೆ ಮೂಲಕ ಸುಭದ್ರ ದೇಶ ಕಟ್ಟುವಲ್ಲಿ ತಲೀÉನವಾಗಿದೆ ಎಂದರು. ಸಂಘದ ರಾಷ್ಟ್ರೀಯತೆಯನ್ನು ಅನೇಕರು ಸಂಕುಚಿತ ಎಂದು ಕರೆಯುತ್ತಾರೆ.
ಆದರೆ, ಸಂಘ ಯಾವುದೇ ಧರ್ಮಾಧಾರಿತ ಕೆಲಸ ಮಾಡುವುದಿಲ್ಲ. ಹಿಂದೂ ಎಂಬುದು ಧರ್ಮ ಅಲ್ಲ. ಇದನ್ನು ಸ್ವತಃ ಸುಪೀÅಂ ಕೋರ್ಟ್ ಮೂರು ಬಾರಿ ಹೇಳಿದೆ. ಅದೊಂದು ಜೀವನ ಕ್ರಮವಾಗಿದೆ. ನಮ್ಮ ದೇಶದ ಜೀವನ ಪದ್ಧತಿಯಾಗಿದೆ. ಅದನ್ನು ನಾವು ಪಸರಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಇಂದು ದೇಶದ ಯುವಕರು ಸಾಕಷ್ಟು ಬದಲಾವಣೆಯಾಗಿದ್ದಾರೆ. ಸಮಾಜ, ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಇದೇ ಕಾರಣಕ್ಕೆ ಭ್ರಷ್ಟರಹಿತ ವ್ಯವಸ್ಥೆ ಪರ ನಿಂತಿದ್ದಾರೆ. ಇದಕ್ಕೆಲ್ಲಾ ಸಂಘವೇ ಕಾರಣವಾಗಿದೆ. ಸಂಘ ಜಾತಿ ಮೀರಿ ಕೆಲಸ ಮಾಡುತ್ತಿದೆ. ಅಸ್ಪೃಶ್ಯತೆ ನಿವಾರಣೆಗೂ ತನ್ನದೇ ಕೊಡುಗೆ ನೀಡುತ್ತಿದೆ.
ಇತೀ¤ಚೆಗೆ ಕರ್ನಾಟಕದ 700, ಆಂಧ್ರಪ್ರದೇಶದ 1500 ಹಳ್ಳಿಗಳಲ್ಲಿ ಸರ್ವೆಕ್ಷಣೆ ಮಾಡಿದೆ. ಅಲ್ಲಿ ಅಸ್ಪೃಶ್ಯತೆ ಇರುವುದು ಕಂಡುಬಂದಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಅವರು ತಿಳಿಸಿದರು. ಮುಂದಿನ ವರ್ಷಗಳಲ್ಲಿ ಪ್ರಕೃತಿಯ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ನೀರು, ಪ್ರಕೃತಿ ಸಮಸ್ಯೆಗೆ ಸರ್ಕಾರಗಳು ಪರಿಹಾರ ಕಂಡುಕೊಳ್ಳುವುದು ಸಾಧ್ಯವಿಲ್ಲ. ನಾವೇ ಮಾಡಬೇಕು.
ಇದೇ ಕಾರಣಕ್ಕೆ ಮುಂದಿನ ವರ್ಷ ರಾಜ್ಯದಲ್ಲಿ 1 ಕೋಟಿ ಸಸಿ ನೆಟ್ಟು, ಮೂರು ವರ್ಷ ಪೋಷಣೆ ಮಾಡುವ ಗುರಿ ಹೊಂದಿದೆ ಎಂದು ಅವರು ಹೇಳಿದರು. ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ, ಸಂಘದ ಪ್ರಾಂತ ಸಹ ಸಂಚಾಲಕ ಡಾ| ವಾಮನ್ ಶೆಣೈ ಹನಿಯಡಕ, ಡಾ| ಸತೀಶ್ ರಾವ್ ವೇದಿಕೆಯಲ್ಲಿದ್ದರು. ಶಿಬಿರಾರ್ಥಿಗಳು ವಿವಿಧ ಕೀÅಡೆ, ಸಾಹಸ ಕಲೆ ಪ್ರದರ್ಶಿಸಿದರು.