Advertisement

ದಾರ್ಶನಿಕರನ್ನು ಜಾತಿಗೆ ಸೀಮಿತ ಮಾಡಬೇಡಿ

01:58 PM Oct 25, 2021 | Team Udayavani |

ಧಾರವಾಡ: ನಾಡಿನ ದಾರ್ಶನಿಕರು, ಶರಣರು, ಸ್ವಾತಂತ್ರ್ಯ ಹೋರಾಟಗಾರರನ್ನು ಯಾವುದೇ ಸಮಾಜಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.

Advertisement

ಸಿ.ಬಿ. ನಗರದ ಲಿಂಗಾಯತ ಭವನದಲ್ಲಿ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚನ್ನಮ್ಮನ 243ನೇ ಜಯಂತಿ ಹಾಗೂ 198ನೇ ವಿಜಯೋತ್ಸವ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾಡಿನ ಮತ್ತು ಸಮಾಜದ ಒಳಿತಿಗಾಗಿ ಶ್ರಮಿಸಿದವರನ್ನು ತಮ್ಮ ಸ್ವಾರ್ಥ ಸಾಧನೆಗಾಗಿ ಒಂದು ವರ್ಗಕ್ಕೆ ಸೀಮಿತಗೊಳಿಸಬಾರದು. ಇದರಿಂದ ಮಹಾತ್ಮರ ಉದ್ದೇಶಗಳಿಗೆ ಅಪಚಾರ ಮಾಡಿದಂತಾಗುತ್ತದೆ. ಇದಲ್ಲದೇ ಮಹಾನ ನಾಯಕರು, ಹೋರಾಟಗಾರರ ಇತಿಹಾಸ ತಿರುಚುವುದು ಕೂಡ ಸಮಂಜಸವಲ್ಲ ಎಂದರು.
ಪ್ರಧಾನ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ ಮಾತನಾಡಿ, ಝಾನ್ಸಿರಾಣಿ ಲಕ್ಷ್ಮೀಬಾಯಿಗಿಂತ ಮೊದಲು ಸ್ವಾತಂತ್ರ್ಯ ಕಹಳೆ ಊದಿದ ಕಿತ್ತೂರು ಚನ್ನಮ್ಮನನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಕಾರ್ಯವನ್ನು ನಾಡಿನ ಜನಪ್ರತಿನಿಧಿಗಳು ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ: ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

ಕಾರ್ಯಕಾರಿ ಸಮಿತಿ ಸದಸ್ಯ ಶಂಕರ ಕುಂಬಿ ಮಾತನಾಡಿ, ವೀರವನಿತೆ ಕಿತ್ತೂರು ಚನ್ನಮ್ಮನ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕು. ಈ ಮೂಲಕ ಮುಂಬರುವ ಪೀಳಿಗೆಗೆ ಚನ್ನಮ್ಮನ ಹೋರಾಟ, ತ್ಯಾಗವನ್ನು ತಿಳಿಸುವ ಕೆಲಸ ಆಗಬೇಕು ಎಂದರು.

Advertisement

ಬಿ.ಎಸ್‌. ಗೋಲಪ್ಪನವರ, ಬಿ.ವೈ. ಪಾಟೀಲ, ಪಾರ್ವತಿ ಹಾಲಭಾವಿ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ಮಹಾದೇವಿ ಯಾದವಾಡ, ಬಿ.ಎಂ. ಸೂರಗೊಂಡ, ಶಿವಾನಂದ ಕವಳಿ, ಆರ್‌.ಎಸ್‌. ಉಪ್ಪಿನ, ರಾಜೇಂದ್ರ ಕಪಲಿ, ಗಂಗಪ್ಪ ಈರೇಶನವರ, ಎಂ.ಡಿ. ಪಾಟೀಲ, ಎಸ್‌. ಎನ್‌. ಬಿರಾದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next