Advertisement

ಬಜೆಟ್ ಮಂಡನೆ ಬಗ್ಗೆ ಗೊತ್ತಿಲ್ಲ; HDK, ದೇವೇಗೌಡರು ಹೇಳೋದೇನು?

05:11 PM Jun 25, 2018 | Sharanya Alva |

ಬೆಂಗಳೂರು/ಉತ್ತರಕನ್ನಡ: ಬಜೆಟ್ ಮಂಡನೆಗೆ ಸಂಬಂಧಿಸಿದಂತೆ ಹಾಲಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಜಂಗೀಕುಸ್ತಿ ಮುಂದುವರಿದಿರುವ ನಡುವೆಯೇ ಬಜೆಟ್ ಮಂಡನೆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಸೋಮವಾರ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಏತನ್ಮಧ್ಯೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿಯವರೇ ಬಜೆಟ್ ಮಂಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Advertisement

ವಿಧಾನಸಭೆಯಲ್ಲಿ ಸಹಕಾರಿ ಸಂಘಗಳ ಬ್ಯಾಂಕ್ ಅಧ್ಯಕ್ಷರು, ಅಧಿಕಾರಿಗಳ ಜತೆ ಸಭೆ ನಡೆಸಿದ್ದ ಕುಮಾರಸ್ವಾಮಿಯವರು, ಬಜೆಟ್ ಮಂಡನೆ ಬಗ್ಗೆ ನನಗೇನೂ ಗೊತ್ತಿಲ್ಲ. ಲೋಕಸಭಾ ಚುನಾವಣೆ ನಂತರ ಬಜೆಟ್ ಮಂಡಿಸಲಿ ಅಂತ ಕೆಲವರು ಸಲಹೆ ಕೊಟ್ಟಿದ್ದಾರೆ. . ಕಳೆದ ಫೆಬ್ರುವರಿಯಲ್ಲಿ ಮಂಡಿಸಿದ್ದ ಬಜೆಟ್ ಮುಂದುವರಿಸೋದು ಕಷ್ಟ. ಅಂದು ಅನುಮೋದನೆ ನೀಡಿದ್ದ ಸುಮಾರು 100 ಮಂದಿ ಶಾಸಕರು ಸೋತಿದ್ದಾರೆ. ಈಗ ಅದಕ್ಕೆ ಹೊಸ ಶಾಸಕರು ಒಪ್ಪಿಗೆ ಕೊಡುತ್ತಾರಾ? ಎಂದು ಪ್ರಶ್ನಿಸಿದ್ದರು.

ಜುಲೈ 5ರಂದು ಬಜೆಟ್ ಮಂಡಿಸುತ್ತಾರೆ: ದೇವೇಗೌಡರು

ಉತ್ತರಕನ್ನಡ ಇಡಗುಂಜಿಗೆ ಆಗಮಿಸಿದ್ದ ಎಚ್.ಡಿ.ದೇವೇಗೌಡರು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಾ, ಜುಲೈ 5ರಂದು ಕುಮಾರಸ್ವಾಮಿಯೇ ಬಜೆಟ್ ಮಂಡಿಸಲಿದ್ದಾರೆ. ಎರಡೂ ಪಕ್ಷದವರು ಹೊಂದಾಣಿಕೆಯಿಂದ ಸರ್ಕಾರ ನಡೆಸುತ್ತಿದ್ದಾರೆ. ನೀವು ಊಹಿಸಿದಂತೆ ಏನೂ ಆಗಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next