Advertisement

ಬುದ್ಧ-ಬಸವ ಚಿಂತನೆ ವಿರುದ್ಧ ಸಾಗಬೇಡಿ

04:45 PM May 21, 2017 | |

ವಾಡಿ: ಬುದ್ಧ, ಬಸವ ಹಾಗೂ ಅಂಬೇಡ್ಕರರು ಯಾವುದನ್ನು ಬೇಡ ಎಂದು ಹೇಳಿದರೋ ಅದನ್ನೆ ಮುಂದುವರಿಸುವ ಮೂಲಕ ನಾವು ಅವರ ವಿರುದ್ಧ ಸಾಗುತ್ತಿದ್ದೇವೆ. ಇದು ಆ ಮಹಾನ್‌ ವ್ಯಕ್ತಿತ್ವಗಳಿಗೆ ನಾವು ಮಾಡುತ್ತಿರುವ ಅಪಮಾನ ಎಂದು ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. 

Advertisement

ಇಂಗಳಗಿ ಗ್ರಾಮದ ಭೀಮನಗರದಲ್ಲಿ ಸ್ಥಾಪಿಸಲಾದ ಕರುಣಾ ಬುದ್ಧವಿಹಾರ ಲೋಕಾರ್ಪಣೆ ಮಾಡಿದ ನಂತರ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ ಹೋರಾಟಗಾರರನ್ನು ಮರೆತ ನಾವು, ಸಮಾನತೆ ಬೋಧಿಧಿಸಿದ ಬುದ್ಧ, ಬಸವ, ಅಂಬೇಡ್ಕರ್‌, ಅಂಬಿಗರ ಚೌಡಯ್ಯ, ಮಾದಾರ ಚನ್ನಯ್ಯ, ಡೋಹಾರ ಕಕ್ಕಯ್ಯ ಸೇರಿದಂತೆ ಅನೇಕ ಶರಣರು ಮತ್ತು ಸಂತರನ್ನು ಒಂದೊಂದು ಜಾತಿಯಲ್ಲಿ ಕಟ್ಟಿ ಹಾಕಿದ್ದೇವೆ.

ಇದು ಅವರ ಚಿಂತನೆಗೆ ವಿರುದ್ಧವಲ್ಲವೇ ಎಂದು ಪ್ರಶ್ನಿಸಿದರು. ಎಲ್ಲ ಜಾತಿಯ ಶರಣರನ್ನು ಸಂಘಟಿಸಿ ಅನುಭವ ಮಂಟಪ ಸ್ಥಾಪಿಸಿದ ಅಣ್ಣ ಬಸವಣ್ಣನ ಜಯಂತಿಯನ್ನು ಆಚರಿಸುವ ಲಿಂಗಾಯತರು, ದಲಿತರ ಕೇರಿಗಳನ್ನು ಇಂದಿಗೂ ಊರ ಹೊರಗಿರುವಂತೆ ನೋಡಿಕೊಂಡಿದ್ದಾರೆ. ಇದು ಬಸವಣ್ಣನ ಚಿಂತನೆಗೆ ವಿರುದ್ಧವಾಗಿದೆ.

ಸ್ವಯಂ ಪ್ರಕಾಶಿತರಾಗಿ ಎಂದು ಹೇಳಿರುವ ಬದ್ಧನ ಮಾತಿನಲ್ಲಿ ಅರ್ಥವಿದೆ. ಶೋಷಿತ ವರ್ಗ ಜಾಗೃತವಾಗದ ಹೊರತು ಪ್ರಗತಿ ಅಸಾಧ್ಯ. ಜನಪ್ರತಿನಿಧಿಧಿಗಳನ್ನು ದೇವರಂತೆ ಕಾಣಬೇಡಿ. ಕಾರಣ ಅವರು ಸರ್ವಾಧಿಕಾರಿಗಳಾಗುತ್ತಾರೆ. ನನ್ನನ್ನು ಗೆಲ್ಲಿಸಿದ ನೀವು ಬಿರುಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿ ಮೆರವಣಿಗೆ ಹೊರಡುವುದು, ಜನಪ್ರತಿನಿಧಿಯಾದ ನಾನು ಕಾರಿನಲ್ಲಿ ಮೆರವಣಿಗೆ ಬರುವುದು ಇದೆಂತಹ ಅಭಿಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಬೌದ್ಧಭಿಕ್ಷು ಜ್ಞಾನಸಾಗರ ಭಂತೇಜಿ ತ್ರಿಶರಣ ಪಠಿಸಿದರು. ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಎಸಿಸಿ ಕ್ಲಸ್ಟರ್‌ ಹೆಡ್‌ ಡಾ| ಎಸ್‌.ಬಿ. ಸಿಂಗ್‌, ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿದರು. ದಲಿತ ಮುಖಂಡ ಸುಭಾಶಚಂದ್ರ ಯಾಮೇರ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಪ್ಯಾರಿಬೇಗಂ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹೆಮೂದ್‌ ಸಾಹೇಬ, ಎಸಿಸಿ ನಿರ್ದೇಶಕ ಉದಯ ಪವಾರ, ಎಚ್‌ಆರ್‌ ಮುಖ್ಯಸ್ಥ ಜಯಪ್ರಕಾಶ ಪವಾರ, ಮುಖಂಡರಾದ ಭೀಮಣ್ಣ ಸಾಲಿ, ಜಾಫರ್‌ ಪಟೇಲ, ಅಣ್ಣಾರಾವ ಪಾಟೀಲ, ಚಂದ್ರಸೇನ ಮೇನಗಾರ, ಶರಣು ನಾಟೀಕಾರ, ಶಂಕ್ರಯ್ಯಸ್ವಾಮಿ ಮದ್ರಿ, ಸೂರ್ಯಕಾಂತ ರದ್ದೇವಾಡಿ,

-ಶಿವುರುದ್ರ ಭೀಣಿ, ರುದ್ರುಗೌಡ ಪಾಟೀಲ, ಸುರೇಶ ಮೇಂಗನ್‌, ಸಾಯಬಣ್ಣ ಬನ್ನೇಟಿ, ಇಂದ್ರಜೀತ ಸಿಂಗೆ, ವಿಶಾಲ ನಂದೂರಕರ, ಮರಿಬಸಯ್ಯಸ್ವಾಮಿ, ರವಿ ಚವ್ಹಾಣ, ನಿತೇಶ್ವರಕುಮಾರ, ಶರಣಬಸಪ್ಪ ಧನ್ನಾ ಪಾಲ್ಗೊಂಡಿದ್ದರು. ಕಾಶೀನಾಥ ಹಿಂದಿನಕೇರಿ ನಿರೂಪಿಸಿ, ವಂದಿಸಿದರು. ನೀಲಿ ವರ್ಣದ ಸೀರೆಯುಟ್ಟು ಪಂಚಶೀಲ ಧ್ವಜಗಳೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ದಲಿತ ಮಹಿಳೆಯರು ಗಮನ ಸೆಳೆದರು. 

ಕುಸಿದುಬಿದ್ದ ಡಿವೈಎಸ್‌ಪಿ: ರಣಬಿಸಿಲಿನಲ್ಲಿ ಸಾಗಿಬಂದ ದಲಿತರ ಮೆರವಣಿಗೆ ಸರಕಾರಿ ಪ್ರೌಢಶಾಲೆ ಮೈದಾನದ ವೇದಿಕೆ ತಲುಪುತ್ತಿದ್ದಂತೆ ಕರ್ತವ್ಯದಲ್ಲಿದ್ದ ಡಿವೈಎಸ್‌ಪಿ ಮಹೇಶ ಮೇಘಣ್ಣವರ ಏಕಾಏಕಿ ಕುಸಿದುಬಿದ್ದ ಪ್ರಸಂಗ ನಡೆಯಿತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ನಂತರ ಚೇತರಿಸಿಕೊಂಡರು. ಬಿಸಿಲಿನಲ್ಲಿ ಬಿಸಿ ನೀರು ಕುಡಿದ ಕಾರಣ ತಲೆಸುತ್ತಿದಂತಾಗಿದೆ. ಈಗ ಅವರು ಚೆನ್ನಾಗಿದ್ದಾರೆ ಎಂದು ಸಿಪಿಐ ಶಂಕರಗೌಡ ಪಾಟೀಲ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next